×
Ad

ನಗದು ದರೋಡೆ

Update: 2017-09-27 22:29 IST

ಬೆಂಗಳೂರು, ಸೆ.27: ವ್ಯಕ್ತಿಯೊಬ್ಬರನ್ನು ಬೆದರಿಸಿ ನಗದು ದರೋಡೆ ಮಾಡಿರುವ ಘಟನೆ ಇಲ್ಲಿನ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಗ್ಯಾಸ್ ಏಜೆನ್ಸಿಯೊಂದರ ಮ್ಯಾನೇಜರ್ ಚನ್ನಬಸಪ್ಪ ಎಂಬವರು ಮಂಗಳವಾರ ಸಂಜೆ 6:30ರಲ್ಲಿ ಐದು ಲಕ್ಷ ರೂ. ಹಣವನ್ನು ಬೈಕ್‌ನ ಮುಂಭಾಗದ ಟ್ಯಾಂಕರ್ ಮೇಲಿನ ಬ್ಯಾಗ್‌ನಲ್ಲಿಟ್ಟುಕೊಂಡು ಹೋಗುತ್ತಿದ್ದಾಗ ಲಗ್ಗೆರೆ ಮುಖ್ಯರಸ್ತೆಯ ಆರ್ಚ್ ಬಳಿ ಸಿಗ್ನಲ್ ಇದ್ದ ವೇಳೆ ಬೈಕ್ ನಿಲ್ಲಿಸುತ್ತಿದ್ದಂತೆ ಹಿಂಬಾಲಿಸಿ ಬಂದಿದ್ದ ದರೋಡೆಕೋರ ಹಣದ ಬ್ಯಾಗನ್ನು ಕಸಿದು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಪೀಣ್ಯ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News