ತಮಿಳುನಾಡಿನ ಮೊದಲ ರಣಜಿ ಪಂದ್ಯಕ್ಕೆ ಅಶ್ವಿನ್?

Update: 2017-09-27 18:35 GMT

ಚೆನ್ನೈ, ಸೆ.27: ಭಾರತದ ಆಫ್-ಸ್ಪಿನ್ನರ್ ಆರ್.ಅಶ್ವಿನ್ ರಣಜಿ ಟ್ರೋಫಿ ಋತುವಿನಲ್ಲಿ ತಮಿಳುನಾಡು ಆಡಲಿರುವ ಮೊದಲ ಪಂದ್ಯದಲ್ಲಿ ಲಭ್ಯವಿರುವ ಸಾಧ್ಯತೆಯಿದೆ. ಅಕ್ಟೋಬರ್ 6 ರಿಂದ ಚೆನ್ನೈನಲ್ಲಿ ತಮಿಳುನಾಡು ತಂಡ ಆಂಧ್ರ ತಂಡದ ವಿರುದ್ಧ ಮೊದಲ ಪಂದ್ಯವನ್ನಾಡಲಿದೆ.

ಪ್ರಸ್ತುತ ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಆಡುತ್ತಿರುವ ಅಶ್ವಿನ್ ಮಂಗಳವಾರ ವಾರ್ಸೆಸ್ಟರ್‌ಶೈರ್ ಪರ ಆಡಿರುವ ಕೌಂಟಿ ಪಂದ್ಯದಲ್ಲಿ 130 ಎಸೆತಗಳಲ್ಲಿ 82 ರನ್ ಗಳಿಸಿದ್ದರು.

 ಅಶ್ವಿನ್ ಅ.1 ರಂದು ಚೆನ್ನೈ ನಗರಕ್ಕೆ ವಾಪಸಾಗುವ ನಿರೀಕ್ಷೆಯಿದೆ. ಅಶ್ವಿನ್ ಈಗ ನಡೆಯುತ್ತಿರುವ ಆಸ್ಟ್ರೇಲಿಯ ವಿರುದ್ಧದ ಏಕದಿನ ಸರಣಿ ಹಾಗೂ ಅ.7 ರಿಂದ ಆರಂಭವಾಗಲಿರುವ 3 ಪಂದ್ಯಗಳ ಟ್ವೆಂಟಿ-20 ಸರಣಿಗೆ ಟೀಮ್ ಇಂಡಿಯಾಕ್ಕೆ ಆಯ್ಕೆಯಾಗದೇ ಇದ್ದರೆ ತಮಿಳುನಾಡು ಆಡಲಿರುವ ರಣಜಿ ಟ್ರೋಫಿಯ ಮೊದಲ ಪಂದ್ಯ ಆಡುವ ಎಲ್ಲ ಸಾಧ್ಯತೆಯಿದೆ.

‘‘ಅಶ್ವಿನ್ ಲಭ್ಯವಿದ್ದರೆ ತಮಿಳುನಾಡು ಪರ ಆಡುವ ವಿಶ್ವಾಸ ನಮಗಿದೆ. 2016ರಲ್ಲಿ ಮೊದಲ ಆವೃತ್ತಿಯ ಟಿಎನ್‌ಪಿಎಲ್‌ನಲ್ಲಿ ಅಡಿದ್ದರು. ಒಂದು ವೇಳೆ ಅವರು ಆಡಿದರೆ ತಮಿಳುನಾಡು ತಂಡಕ್ಕೆ ಹೊಸ ಶಕ್ತಿಬರಲಿದೆ’’ ಎಂದು ತಮಿಳುನಾಡು ಕ್ರಿಕೆಟ್ ಸಂಸ್ಥೆ(ಟಿಎನ್‌ಸಿಎ) ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News