ಅಲೆಕ್ಸಾಂಡರ್ ಫ್ಲೆಮಿಂಗ್‌ರಿಂದ ಪೆನ್ಸಿಲಿನ್ ಸಂಶೋಧನೆ

Update: 2017-09-28 06:58 GMT

►1928: ಲಂಡನ್‌ನ ಸೇಂಟ್ ಮೇರಿ ಆಸ್ಪತ್ರೆಯಲ್ಲಿ ತನ್ನ ಪ್ರಯೋಗಾಲಯದಲ್ಲಿ ಕೆಲಸ ಮಾಡುತ್ತಿದ್ದ ವಿಜ್ಞಾನಿ ಅಲೆಕ್ಸಾಂಡರ್ ಫ್ಲೆಮಿಂಗ್ ಆಕಸ್ಮಿಕವಾಗಿ ಪೆನ್ಸಿಲಿನ್ ಅನ್ನು ಸಂಶೋಧಿಸಿದರು. ಅವರು ಸೇವಿಸಲೆಂದು ಇಟ್ಟಿದ್ದ ನೈಸರ್ಗಿಕ ಭಕ್ಷಗಳ ಮೇಲೆ ಶಿಲೀಂಧ್ರಗಳು ಮುತ್ತಿ ಅದು ಅನೇಕ ಜೀವಾಣುಗಳ ಮೇಲೆ ಸಕಾರಾತ್ಮಕ ಪ್ರಭಾವವನ್ನು ಬೀರಿತ್ತು. ಅವೇ ಆಧುನಿಕ ಆರಂಭಿಕ ಪ್ರತಿಜೀವಕಗಳು (ಆ್ಯಂಟಿ ಬಯೋಟಿಕ್ಸ್). ಪೆನ್ಸಿಲಿನ್ ಸಂಶೋಧನೆಯು ಕಳೆದ ಶತಮಾನದ ಪ್ರಮುಖ ಸಂಶೋಧನೆಗಳಲ್ಲಿ ಒಂದೆಂದು ಪ್ರಮುಖರು ಅಭಿಪ್ರಾಯಪಟ್ಟಿದ್ದಾರೆ.

►1528: ಸ್ಪೇನ್ ನೌಕಾಸೇನೆಯ ನೌಕೆ ಫ್ಲೋರಿಡಾದಲ್ಲಿ ಚಂಡಮಾರುತಕ್ಕೆ ಒಳಗಾಗಿ 380 ಜನರ ಸಾವಿಗೆ ಕಾರಣವಾಯಿತು.

►1842: ಸಂಶೋಧಕ ಜುವಾನ್ ರೋಡ್ರಿಗ್ವೆಝ್ ಕ್ಯಾಬ್ರಿಲ್ಲೊ ಕ್ಯಾಲಿಫೋರ್ನಿಯಾವನ್ನು ಸಂಶೋಧಿಸಿದನು. ಇದಕ್ಕೆ ಸ್ಯಾನ್ ಮಿಗ್ವೆಲ್ ಎಂಬ ಹೆಸರಿನಿಂದ ಕರೆದನು.

►1850: ಅಮೆರಿಕ ನೌಕಾಸೇನೆಯು ಛಡಿಯೇಟಿನ ಶಿಕ್ಷೆಯನ್ನು ರದ್ದುಗೊಳಿಸಿತು.

►1906: ಅಮೆರಿಕ ಸೈನ್ಯ ಕ್ಯೂಬಾವನ್ನು ವಶಪಡಿಸಿಕೊಂಡಿತು. 1909ರವರೆಗೆ ತನ್ನ ವಶದಲ್ಲಿಟ್ಟುಕೊಂಡಿತು.

►1931: ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ ಸುಮಾರು 2,00,000 ಬೃಹತ್ ಸಂಖ್ಯೆಯ ಪ್ರತಿಭಟನಾಕಾರರು ಜಪಾನ್ ದೇಶದ ಮೇಲೆ ಯುದ್ಧ ಸಾರುವಂತೆ ಚೀನಾಕ್ಕೆ ಒತ್ತಾಯಿಸಿದರು.

► 1972: ಜಪಾನ್ ಮತ್ತು ಕಮ್ಯುನಿಸ್ಟ್ ಚೀನಾ ರಾಜತಾಂತ್ರಿಕ ಸಂಬಂಧಗಳನ್ನು ಪುನಾರಂಭಿಸಲು ಪರಸ್ಪರ ಒಪ್ಪಿಕೊಂಡವು.

►2002: ಶಾಂತಿ ಮಾತುಕತೆಗಳ ಭಾಗವಾಗಿ ಶ್ರೀಲಂಕಾ ಸರಕಾರ ಮತ್ತು ತಮಿಳು ಟೈಗರ್ಸ್‌ ಬಂಡುಕೋರರು ಪರಸ್ಪರ ಯುದ್ಧ ಕೈದಿಗಳನ್ನು ಹಸ್ತಾಂತರಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News