×
Ad

ಮುಖ್ಯಮಂತ್ರಿ ಯಾರೆಂಬುದನ್ನು ಪಕ್ಷ ನಿರ್ಧರಿಸುತ್ತದೆ: ಜಾಫರ್ ಶರೀಫ್

Update: 2017-09-28 22:23 IST

ಬೆಂಗಳೂರು, ಸೆ.28: ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಯಾರೊಬ್ಬರೂ ಪಕ್ಷಕ್ಕಿಂತ ದೊಡ್ಡವರಲ್ಲ. ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಪಕ್ಷ ನಿರ್ಧರಿಸುತ್ತದೆಯೆ ಹೊರತು, ಯಾರೋ ನಾಯಕರಲ್ಲ ಎಂದು ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್‌ ಶರೀಫ್ ತಿಳಿಸಿದ್ದಾರೆ.

ಗುರುವಾರ ನಗರದಲ್ಲಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದೃಷ್ಟವಿದ್ದರೆ ಐದಲ್ಲ 10 ವರ್ಷ ಸಿದ್ದರಾಮಯ್ಯನವರೆ ಮುಖ್ಯಮಂತ್ರಿ ಯಾಗಿರಲಿ ಯಾರು ಬೇಡವೆಂದರು. ಆದರೆ, ಪಕ್ಷ ತೀರ್ಮಾನ ಕೈಗೊಳ್ಳುವ ಮುಂಚೆ ನಾನೇ ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷಕ್ಕೆ ತನ್ನದೆ ಆದ ಸಿದ್ಧಾಂತ, ಪರಂಪರೆಯಿದೆ. ಅದರ ಚೌಕಟ್ಟನ್ನು ಯಾರು ಮೀರಬಾರದು. ಸರಕಾರ ನಡೆಸುವುದು ಒಂದು ಕೆಲಸ, ಪಕ್ಷ ನಡೆಸುವುದು ಮತ್ತೊಂದು ಕೆಲಸ. ಚುನಾವಣೆ ಬಂದಾಗ ಜನರ ಬಳಿ ಹೋಗಿ ಮತ ಯಾಚಿಸುವುದು ಪಕ್ಷ. ಅದರ ನೇತೃತ್ವದಲ್ಲೆ ಚುನಾವಣೆಗಳನ್ನು ಎದುರಿಸುತ್ತೇವೆ ಎಂದು ಜಾಫರ್ ಶರೀಫ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News