ಬೆಂಗಳೂರು : ಮಳೆಗೆ ಮನೆ ಕುಸಿದು ವ್ಯಕ್ತಿ ಸಾವು
Update: 2017-09-30 21:10 IST
ಬೆಂಗಳೂರು, ಸೆ.30: ಭಾರಿ ಮಳೆಗೆ ಮನೆಯೊಂದು ಕುಸಿದು ವ್ಯಕ್ತಿಯೊಬ್ಬರು ಮೃತಪಟ್ಟಿರು ಘಟನೆ ಹೂಡಿ ವಾರ್ಡ್‌ನ ಸಾದನಮಂಗಲದಲ್ಲಿ ನಡೆದಿದೆ.
ಸಾದರಮಂಗಲ ನಿವಾಸಿ ರಾಜು(36) ಮೃತಪಟ್ಟವರು ಎಂದು ಪೊಲೀಸರು ಗುರುತಿಸಿದ್ದಾರೆ.
ಸಾದರಮಂಗಲದ ಸ್ಲಂಬೋರ್ಡ್ ಸಮೀಪದ ಶೀಟಿನ ಮನೆಯಲ್ಲಿ ವಾಸವಾಗಿದ್ದರು. ಭಾರಿ ಮಳೆಯಿಂದ ಮನೆ ಕುಸಿದಿದೆ. ಸುಮಾರು 30 ವರ್ಷ ಹಳೆಯದಾದ ಮನೆ ಇದಾಗಿದ್ದು, ರಾತ್ರಿ ಮಲಗಿದ್ದಾಗ 2 ಗಂಟೆ ಸುಮಾರಿಗೆ ಮನೆ ಕುಸಿದು ಈ ಘಟನೆ ಸಂಭವಿಸಿದೆ ಎಂದು ಮಹದೇವಪುರ ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿದ್ದ ಇಬ್ಬರಿಗೆ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ವೈದೇಹಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದರು.