ಗಾಂಧಿ ಚಿಂತನೆಯ ಆರ್ಥಿಕತೆ

Update: 2017-09-30 17:44 GMT

ಇಂದಿನ ಮೋದಿ ಯುಗದಲ್ಲಿ ಗಾಂಧಿಯ ಆರ್ಥಿಕ ಅಭಿವೃದ್ಧಿ ಚೌಕಟ್ಟಿಗೆ ಪ್ರಸ್ತು ತತೆ ಇದೆಯಾ ಎಂಬ ಪ್ರಶ್ನೆ ಸಹಜ. ದುಡಿಯುವ ಕೈಗಳಿಗೆ ಉದ್ಯೋಗ, ಸಾಧ್ಯವಾ ದಷ್ಟೂ ವಿಕೇಂದ್ರೀಕೃತ ಉತ್ಪಾದಕ ವ್ಯವಸ್ಥೆ ಗಾಂಧಿಯ ಚೌಕಟ್ಟಿನ ಲಕ್ಷಣಗಳೆಂದು ಭಾವಿಸಿ ಚರ್ಚಿಸೋಣ.

ಆಧುನಿಕ ಉತ್ಪಾದಕ ವ್ಯವಸ್ಥೆಗೆ ಎರಡು ಸ್ತರಗಳಿವೆ.

1. ಗ್ರಾಹಕ ಉತ್ಪನ್ನ/ಸೇವೆಗಳನ್ನು ಕೇಂದ್ರೀಕೃತ ಸಮೂಹ ಉತ್ಪಾದನೆ ಮೂಲ ಕ ಪೂರೈಸುವುದು. ಇದು ತನ್ನನ್ನುಳಿದು ಉಳಿದೆಲ್ಲರನ್ನೂ ಗ್ರಾಹಕರೆಂದೇ ಭಾವಿಸುತ್ತದೆ. ಲಾಭಾಂಶ ಹೆಚ್ಚಿಸಲು ಯಾಂತ್ರೀಕರಣದತ್ತ ಹೆಚ್ಚು ಸಾಗುತ್ತದೆ. ಜನಸಂಖ್ಯೆ ಕಡಿಮೆ ಇರುವ; ಗ್ರಾಹಕ ಉತ್ಪಾದನಾ ವ್ಯವಸ್ಥೆ ಬೇರೂರಿರುವ ಅಭಿವೃದ್ಧಿ ಹೊಂದಿದ ದೇಶಗಳು ಇದರ ಮಿಗತೆಯಲ್ಲಿ ಆಹಾರ ಆಯಾತ ಮಾಡಿಕೊಳ್ಳುತ್ತವೆ.

2. ಪೂರೈಕೆ ಮತ್ತು ನಿಗಾ ದೃಷ್ಟಿಯಿಂದ ಇದು ಲಾಭಕರ ಎಂಬ ಭಾವನೆ ಇದೆ.ಅಪಾರ ಅರೆಕುಶಲಿ ಬಡವರಿರುವ, ಉತ್ಪಾದನಾ ಕೌಶಲ್ಯವಾಗಲೀ, ಬಂಡ ವಾಳ ವಾಗಲೀ ಇಲ್ಲದಿರುವ ದೊಡ್ಡ ಜನಸ್ತೋಮ ಇರುವ ನಮ್ಮ ದೇಶಕ್ಕೆ ಈ ಮಾದರಿ ಒಗ್ಗೀತೇ ಎಂಬುದು ಪ್ರಶ್ನೆ.

ಇದಕ್ಕೆ ಸಂವಾದಿಯಾಗಿ ಇರುವ ಮಾದರಿ ಚೀನಾ. ತನ್ನ ಸ್ಪರ್ಧಾತ್ಮಕ ಉತ್ಪಾದನಾ ಕೌಶಲ್ಯದ ಮೂಲಕ ಚೀನಾ ಇವತ್ತು ಜಗತ್ತಿನ ಮಾರುಕಟ್ಟೆಯನ್ನೇ ಆವರಿಸಿದೆ. ಅರ್ಥಾ ತ್ ತಯಾರಿಕಾ ರಂಗದಲ್ಲಿ ಮೇಲುಗೈ ಸಾಧಿಸಿದೆ. ದೇಶದ ದುಡಿಯುವ ಕೈಗಳಿಗೆ ಕೌಶಲ್ಯ ವನ್ನೂ, ಉದ್ಯೋಗವನ್ನೂ ನೀಡಿದ್ದರಿಂದ ಇದು ಸಾಧ್ಯವಾಗಿದೆ. ಇದಕ್ಕಿರುವ ರಾಜ ಕೀಯ ಲಂಗರು ಮತ್ತು ಚುಕ್ಕಾಣಿ ಕಮ್ಯುನಿಸ್ಟ್ ಸರಕಾರ ಎಂಬುದನ್ನು ಮರೆಯ ಬಾರದು.

ಚೀನಾದಂತಹ ಜನಸಂಖ್ಯೆ ಇಟ್ಟುಕೊಂಡು ಯುರೋಪ್ ಮಾದರಿ ಉತ್ಪಾದನಾ ವ್ಯವಸ್ಥೆಗೆ ಮಣೆ ಹಾಕುವುದು ಅನರ್ಥಕಾರಿ. ಪರಮ ವಿರೋಧಾಭಾಸ ಇದು. ಈಗಾ ಗಲೇ ಇದು ತಂದಿರುವ ಅಸಮಾನತೆಯ ಬಿಕ್ಕಟ್ಟು ನಮ್ಮ ಸರಕಾರಕ್ಕೇ ಸವಾಲಾಗಿದೆ. ಈ ಕಸಿವಿಸಿಯ ಕಾರಣಕ್ಕೇ ಸರಕಾರವು ಉದ್ಯೋಗ ಖಾತರಿ, ಗ್ರಾಮೀಣ ಜೀವನೋಪಾಯ ಮಿಷನ್‌ಗಳಿಗೆ ಸಾವಿರಾರು ಕೋಟಿ ರೂ. ಸುರಿಯತ್ತಿರುವುದು. ಅನ್ನಭಾಗ್ಯವನ್ನೂ ಇದಕ್ಕೆ ಸೇರಿಸಿರುವುದು ಸರಕಾರದ ಅಪರಾಧಿ ಪ್ರಜ್ಞೆಗೆ ಪಕ್ಕಾ ಪುರಾವೆಯಾಗಿದೆ.

ಆದ್ದರಿಂದಲೇ ವಿಕೇಂದ್ರೀಕೃತ ಸಮುದಾಯ ಮಟ್ಟದ ಉತ್ಪಾದನಾ ವ್ಯವಸ್ಥೆಗೆ ಮಣೆ ಹಾಕುವುದು ಸರಕಾರಕ್ಕೆ ಇಂದಲ್ಲ ನಾಳೆ ಅನಿವಾರ್ಯವಾಗುತ್ತದೆ. ಯಾಕೆಂದರೆ ನವೀಕರಿಸಬ ಹುದಾದ ಸಂಪನ್ಮೂಲ ಇಂದಿಗೂ ಅಷ್ಟಿಷ್ಟು ಗ್ರಾಮೀಣ ಚೌಕಟ್ಟಲ್ಲೇ ಲಭ್ಯ. ಆಧುನಿಕ ತಯಾ ರಿಕಾ ವ್ಯವಸ್ಥೆಗೆ ಬೇಕಾದ ಕೌಶಲ್ಯ ತರಬೇತಿ ಹಳ್ಳ ಹಿಡಿದಿರುವ ಕಾರಣ ಸರಕಾರಕ್ಕೆ ಜನರ ವಲಸೆ ತಡೆಗಟ್ಟುವುದೇ ಸವಾಲಾಗಿದೆ.

ನಾವಿಂದು ಗಾಂಧಿಯ ಚಿಂತನೆ ಎಂದು ಕರೆಯುವ ಸ್ಥಳೀಯ ಉತ್ಪಾದಕ ವ್ಯವಸ್ಥೆ ಮೂಲತಃ ಕವಿ ರವೀಂದ್ರರು ಆಶಿಸಿ ಪ್ರಯೋಗ ನಡೆಸಿದ ಶ್ರೀನಿಕೇತನ ಮಾದರಿಯಾಗಿದೆ. ಸಮುದಾಯಕ್ಕೆ ಬೇಕಾದ ಎಲ್ಲವನ್ನೂ ಸಮುದಾಯದ ಮಟ್ಟದಲ್ಲೇ ಉತ್ಪಾದಿಸುವ ಘಟಕಗಳ ಪ್ರಯೋಗ ವನ್ನು ಅವರು ಮಾಡಿದ್ದರು. ಅಷ್ಟೇಕೆ ಈ ಮೂಲಕ ಜಾತಿ ಆಧಾರಿತ ಉದ್ಯೋಗ ಮಾದರಿ ಯನ್ನೂ ಮುರಿಯುವ ಸೂಚನೆ ನೀಡಿದ್ದರು. ಮುಖ್ಯತಃ ಅವಶ್ಯ ಗ್ರಾಹಕ ಉತ್ಪನ್ನಗಳೆಂದು ಕರೆಯಬಹು ದಾದ, ಆಹಾರ, ಕೃಷಿ ವಸ್ತುಗಳಲ್ಲಿ ಇದು ಇಂದಿಗೂ ಸುಸ್ಥಿರ ಮಾದರಿ.

ಇದು ಎಲ್ಲರಿಗೂ ಉದ್ಯೋಗ ನೀಡುತ್ತದಾ? ಎಂಬ ಸಿನಿಕ ಕೊಕ್ಕೆಯ ಮಾತು ಪ್ರತಿಕ್ರಿಯೆ ಯಾಗಿ ಬರುವುದಿದೆ. ಹಾಗಾದರೆ ಆಧುನಿಕ ಆರ್ಥಿಕ ಚೌಕಟ್ಟಿನ ತಯಾರಿಕಾ ಮಾದರಿ ಯಲ್ಲಿ ಎಲ್ಲರಿಗೂ ಉದ್ಯೋಗ ಇದೆಯಾ ಎಂಬ ಮಾತಿಗೆ ಇದರ ಸಮರ್ಥಕರಲ್ಲಿ ಉತ್ತರ ವಿಲ್ಲ. ಗಾಂಧಿಯ ಮಾದರಿಯಲ್ಲಿರುವ ಅತೀ ಮುಖ್ಯ ಇತ್ಯಾತ್ಮಕ ಅಂಶವೆಂದರೆ ಇದು ಆಘಾತಗಳನ್ನು ಶಮನಗೊಳಿಸುವ ಲಕ್ಷಣ ಹೊಂದಿದೆ.

ಹೀಗೆಂದರೆ ಏನು?. ಸಮುದಾಯದ ಮಟ್ಟದಲ್ಲೇ ಉದ್ಯೋಗ, ಗ್ರಾಹಕತೆ, ಜೀವನ ಚಕ್ರ ಇದ್ದಾಗ, ಆಧುನಿಕ ವೆಚ್ಚಗಳ ನಿರಂತರ ಹೊಡೆತಕ್ಕೊಂದು ಅಲ್ಪ ವಿರಾಮವಾದರೂ ದೊರಕುತ್ತದೆ.

ಸೀಮಿತ ಪ್ರಾಕೃತಿಕ ಅದರಲ್ಲೂ ತೈಲ ಸಂಪನ್ಮೂಲವಿರುವ ನಮ್ಮ ದೇಶದಲ್ಲಿ ಇದರ ಪರೀಕ್ಷೆ ಸುಲಭ. ಆಧುನಿಕ ಪರಿಸರ ಶಾಸ್ತ್ರದ ಪರಿಭಾಷೆಯಲ್ಲಿ ಇಂಗಾಲದ ಹೆಜ್ಜೆ ಗುರುತು ಎಂಬ ಪರಿಕಲ್ಪನೆ ಇದೆ. ನೀವು ಎಷ್ಟು ಮುಕ್ಕುತ್ತೀರಿ ಎಂಬುದೆಲ್ಲಾ ಕೊನೆಗೆ ಇಂಗಾಲದ ಪ್ರಮಾಣದಲ್ಲಿ ಪರಿಗ ಣಿತವಾಗುತ್ತದೆ. ಸಾಗಣೆ, ಸಂಚಾರ, ವಿದ್ಯುತ್ ಉಪಯೋಗ ಹೀಗೆ ಪ್ರತೀ ದಿನವೂ ಇದು ಸಾಬೀತಾಗುತ್ತಿರುತ್ತದೆ. ಗ್ರಾಮಾಂತರಕ್ಕೆ ಒಮ್ಮೆ ಸುಮ್ಮನೆ ಹೊಗಿ ವಾರ ಇದ್ದು ಬಿಡಿ, ಇಂಗಾಲದ ಹೆಜ್ಜೆ ಗುರುತು ದಿಢೀರನೆ ಇಳಿದು ಬಿಡುತ್ತದೆ. ಓಡಾಟ, ಕೊಳ್ಳುವ ಕ್ರಮ, ಎಲ್ಲದರಲ್ಲೂ ಒಂದು ಗಮನಾರ್ಹ ಬದಲಾವಣೆ ಕಾಣುತ್ತದೆ.

ಗಾಂಧಿ ಪ್ರಣೇತ ಉತ್ಪಾದನಾ ಹಾಗೂ ಬಳಕೆಯ ಆರ್ಥಿಕ ವಿಧಾನ ಅಂದರೆ ಈ ಸುಸ್ಥಿರತೆ ಯ ಸಾಕ್ಷ್ಯಗಳನ್ನು ಸ್ಥಿರಗೊಳಿಸುವುದು ಎಂದರ್ಥ.

ಅಕ್ಟೋಬರ್ 2ರಂದು ಗಾಂಧಿ ಜಯಂತಿ ಆಚರಿಸಲಾಗುತ್ತಿದೆ. ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಕುರಿತು ಮೂರು ವಿಭಿನ್ನ ನೆಲೆಯಲ್ಲಿ ವ್ಯಾಖ್ಯಾನಿಸಿರುವ ಲೇಖನಗಳು.

Writer - ಸುರೇಶ್ ಕಂಜರ್ಪಣೆ

contributor

Editor - ಸುರೇಶ್ ಕಂಜರ್ಪಣೆ

contributor

Similar News