ಕಾಪ್ಪಿಲ್ ಉಮರ್ ಮುಸ್ಲಿಯಾರ್ ನಿಧನ

Update: 2017-10-02 18:56 GMT

ಮಲಪ್ಪುರಂ, ಅ. 2: ಪ್ರಮುಖ ಧಾರ್ಮಿಕ ವಿದ್ವಾಂಸ, ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಕೇಂದ್ರ ಮುಶಾವರ ಸದಸ್ಯರಾದ ಕಾಪ್ಪಿಲ್ ವಿ. ಉಮರ್ ಮುಸ್ಲಿಯಾರ್ (80) ಅವರು ಅಸೌಖ್ಯದಿಂದ ಸೋಮವಾರ ರಾತ್ರಿ 9:30ರ ಸುಮಾರಿಗೆ ಪೆರಂದಲ್‌ಮಣ್ಣ ವೆಟ್ಟತ್ತೂರಿನ ಕಾಪ್ಪಿಲದಲ್ಲಿರುವ ತನ್ನ ಸ್ವಗೃಹದಲ್ಲಿ ನಿಧನರಾದರು.

ದೀರ್ಘಕಾಲ ಮುದರ್ರಿಸರಾಗಿ ಸೇವೆ ಸಲ್ಲಿಸಿದ್ದ ಅವರು ಪೊಟ್ಟಚ್ಚಿರ ಅನ್ವರಿಯಾ ಅರಬಿಕ್ ಕಾಲೇಜಿನ ಪ್ರಾಂಶುಪಾಲರಾಗಿದ್ದರು. ಕುಂಞಿ ಮುಹಮ್ಮದ್ ಹಾಜಿ ಮತ್ತು ಫಾತಿಮಾ ದಂಪತಿಯ  ಪುತ್ರನಾಗಿ 1937ರಲ್ಲಿ ಜನಿಸಿದ್ದ ಅವರು ಕರುವಾರಕ್ಕುಂಡ್, ಪಯ್ಯನಾಡ್, ಚಾಲಿಯಾಂ ಮುಂತಾದೆಡೆಗಳಲ್ಲಿ ಧಾರ್ಮಿಕ ಶಿಕ್ಷಣ ಸೇರಿದಂತೆ ತಮಿಳುನಾಡಿನ ವೆಲ್ಲೂರು ಬಾಖಿಯಾತು ಕಾಲೇಜಿನಿಂದ ಬಾಖವಿ ಪದವಿಯನ್ನು ಪಡೆದಿದ್ದರು.

ಚೆಂಬ್ರಶ್ಶೇರಿ (13 ವರ್ಷ), ಎಂ.ಆರ್. ನಗರ(4 ವರ್ಷ), ಕೋಟಂಙಾಡ್ (10 ವರ್ಷ), ದೇಶಮಂಗಲ (4 ವರ್ಷ), ಪೊಡಿಯಾರ್ (1ವರ್ಷ) ಹಾಗೂ ಪೊಟ್ಟಚ್ಚಿರ ಅನ್ವರಿಯಾ ಅರಬಿಕ್ ಕಾಲೇಜಿನಲ್ಲಿ 15 ವರ್ಷಗಳ ಕಾಲ ಧಾರ್ಮಿಕ ಗುರುಗಳಾಗಿ ಸೇವೆಗೈದಿದ್ದರು.

ಪೆರಿಂದಲ್‌ಮಣ್ಣ ತಾಲೂಕು ಜಂಇಯ್ಯತುಲ್ ಉಲಮಾದ ಕೋಶಾಧಿಕಾರಿ, ಮಲಪ್ಪುರಂ ಹಾಗೂ ಪಾಲಕ್ಕಾಡ್ ಜಿಲ್ಲೆಯ ಮುಶಾವರ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.

ಮೃತರು ಪತ್ನಿ, ನಾಲ್ವರು ಮಕ್ಕಳು ಸಹಿತ ಅಪಾರ ಶಿಷ್ಯಂದಿರು, ಬಂಧುಮಿತ್ರರನ್ನು ಅಗಲಿದ್ದಾರೆ.

ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಕಾಪ್ಪಿಲ ಜುಮಾ ಮಸೀದಿಯ ಖಬರಸ್ಥಾನದಲ್ಲಿ ದಫನ ಕಾರ್ಯ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಿ.ಸುಂದರ್
ವಸಂತಿ