ಕೂರ್ನಡ್ಕ ಬದ್ರಿಯಾ ವೆಲ್ಫೇರ್ ಕಮಿಟಿಯ ಮಹಾಸಭೆ

Update: 2017-10-03 10:57 GMT

ದುಬೈ, ಅ.3: ಕೂರ್ನಡ್ಕ ಬದ್ರಿಯಾ ವೆಲ್ಫೇರ್ ಕಮಿಟಿಯ ಯು.ಎ.ಇ. ಸಮಿತಿಯ ಎರಡನೆ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಅಧ್ಯಕ್ಷ ಉಸ್ಮಾನ್ ಕೆಮ್ಮಿಂಜೆ ನಿವಾಸದಲ್ಲಿ ನಡೆಯಿತು.

ಸಿದ್ದೀಕ್ ಮುಸ್ಲಿಯಾರ್ ರ ದುಆದೊಂದಿಗೆ ಆರಂಭವಾದ ಸಭೆಯನ್ನು ಇಬ್ರಾಹೀಂ ಪಿ.ಎಂ. ಕೂರ್ನಡ್ಕ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅಧ್ಯಕ್ಷ  ಉಸ್ಮಾನ್ ಕೆಮ್ಮಿಂಜೆ, ಸಮಿತಿಯ ಗತ ವರ್ಷದ ಚಟುವಟಿಕೆಗಳನ್ನು ವಿವರಿಸಿದರು.

ಹೊಸ ಸಮಿತಿಯ ರೂಪೀಕರಣದ ಜವಾಬ್ದಾರಿಯನ್ನು ಅಬ್ದುಲ್ ರಶೀದ್ ಮರೀಲ್ ವಹಿಸಿದ್ದರು. 2017-18ರ ಕಾಲಾವಧಿಗೆ ಹಾಲಿ ಅಧ್ಯಕ್ಷ ಉಸ್ಮಾನ್ ಕೆಮ್ಮಿಂಜೆ ಸರ್ವಾನುಮತದಿಂದ ಪುನರಾಯ್ಕೆಯಾದರು. ಗೌರವ ಸಲಹೆಗಾರರಾಗಿ ಅಬೂಬಕರ್ ಸಿದ್ದೀಕ್ ಜಲಾಲಿ ಕೂರ್ನಡ್ಕ ಹಾಗೂ ಇಬ್ರಾಹೀಂ ಪಿ.ಎಂ. ಕೂರ್ನಡ್ಕ ಆಯ್ಕೆಯಾದರು. 

ಗೌರವಾಧ್ಯಕ್ಷರಾಗಿ ಉಸ್ಮಾನ್ ಮರೀಲ್, ಅಧ್ಯಕ್ಷರಾಗಿ ಉಸ್ಮಾನ್ ಕೆಮ್ಮಿಂಜೆ, ಉಪಾಧ್ಯಕ್ಷರಾಗಿ ಯಹ್ಯಾ ಅಬ್ದುಲ್ಲ ಕೂರ್ನಡ್ಕ, ಇಬ್ರಾಹೀಂ ಐ.ಕೆ., ಶಂಸುದ್ದೀನ್ ಕೂರ್ನಡ್ಕ, ಅಬ್ದುಲ್ ರಹಿಮಾನ್ ಕೂರ್ನಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಅಶ್ರಫ್ ಕೆಮ್ಮಿಂಜೆ, ಕಾರ್ಯದರ್ಶಿಗಳಾಗಿ ಇಸ್ಮಾಯಿಲ್ ದರ್ಬೆ, ಹಾರಿಸ್ ಮರೀಲ್ ಹಾಗೂ ಇಸಾಕ್ ಕೂರ್ನಡ್ಕ, ಸಂಘಟನಾ ಕಾರ್ಯದರ್ಶಿಯಾಗಿ ಅಬ್ದುಲ್ ರಶೀದ್ ಮರೀಲ್, ಖಜಾಂಚಿಯಾಗಿ ಬಶೀರ್ ಕೆಮ್ಮಿಂಜೆ, ಕನ್ವೀನರ್ ಗಳಾಗಿ ಮುನೀರ್ ಕೂರ್ನಡ್ಕ, ಆರಿಫ್ ಬೈತಡ್ಕ, ಮುದಸ್ಸಿರ್ ವಿ.ಕೆ., ರಮ್ಲ ಮರೀಲ್, ಮೀಡಿಯಾ ಕೋ-ಆರ್ಡಿನೇಟರ್ ಆಗಿ ಆಸಿಫ್ ಎ.ಕೆ. ಮರೀಲ್ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಹಂಝ ಕೆಮ್ಮಿಂಜೆ, ಶಾಕಿರ್ ಕೂರ್ನಡ್ಕ, ಸಮೀರ್ ಕಲ್ಲಾರೆ, ಸಯೀದ್ ಪುರುಷರಕಟ್ಟೆ, ಫಾರೂಕ್ ಕೆಮ್ಮಿಂಜೆ, ಅಶ್ರಫ್ ಯು.ಕೆ., ಮನ್ಸೂರ್ ಕೂರ್ನಡ್ಕ, ಮುಹಮ್ಮದ್ ಕುಂಞಿ ಪಲ್ಲತ್ತೂರ್, ರಹೀಮ್ ಕೆಮ್ಮಿಂಜೆ, ಅಹ್ಮದ್ ಕುಂಞಿ ಕೆಮ್ಮಿಂಜೆ, ಸಿರಾಜುದ್ದೀನ್ ಪರ್ಲಡ್ಕ, ನಿಝಾಮ್ ಪರ್ಲಡ್ಕ, ಖಲಂದರ್ ಕೂರ್ನಡ್ಕ, ಹದಿನೈದು ಮಂದಿಯನ್ನು ಆರಿಸಲಾಯಿತು.

ಕಾರ್ಯದರ್ಶಿ ಅಶ್ರಫ್ ಕೆಮ್ಮಿಂಜೆ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಅಬ್ದುಲ್ ರಶೀದ್ ಮರೀಲ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News