×
Ad

ಅನಿಸಿಕೆ ಹೇಳಲು ಭಯವಾಗುತ್ತಿದೆ: ಕಮಲಾ ಹಂಪನ ಆತಂಕ

Update: 2017-10-03 21:45 IST

ಬೆಂಗಳೂರು, ಅ.3: ನನ್ನೊಳಗೆ ಮೂಡುವ ಭಾವನೆ, ಅನಿಸಿಕೆಗಳನ್ನು ಮುಕ್ತವಾಗಿ ಹೇಳಿಕೊಳ್ಳಲಾಗದಂತಹ ಭಯದ ವಾತಾವರಣ ದೇಶದ ನಿರ್ಮಾಣವಾಗಿದೆ ಎಂದು ಹಿರಿಯ ಸಾಹಿತಿ ಕಮಲಾ ಹಂಪನ ಆತಂಕ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ನಗರದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಆಯೋಜಿಸಿದ್ದ ‘ಮಹಾಕವಿ ಪಂಪ-ನೆನ್ನೆ-ಇಂದು-ನಾಳೆ’ ವಿಚಾರ ಸಂಕಿರಣವನ್ನು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ ದಿನೇ ದಿನೇ ನಶಿಸುತ್ತಿದೆ ಎಂದು ವಿಷಾದಿಸಿದರು.

ಹಿಟ್ಲರ್ ಸಂಸ್ಕೃತಿ: ದೇಶದಲ್ಲಿ ಕಳೆದ 70ವರ್ಷಗಳಲ್ಲಿ ಇಲ್ಲದ ವಿಷಮಯ ವಾತಾವರಣ ಈ ಮೂರು ವರ್ಷಗಳಲ್ಲಿ ಸೃಷ್ಟಿಯಾಗುತ್ತಿದೆ. ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡರೆ ಬದುಕಲಾರದ ಸ್ಥಿತಿ ನಿರ್ಮಾಣವಾಗಿದೆ. ಇದು ಹೀಗೆಯೇ ಮುಂದುವರೆದರೆ ಕೆಲವೇ ದಿನಗಳಲ್ಲಿ ಹಿಟ್ಲರ್ ಸಂಸ್ಕೃತಿ ದೇಶದ ಗಲ್ಲಿಗಲ್ಲಿಗಳಲ್ಲಿ ಕಂಡು ಬರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಎಚ್ಚರಿಸಿದರು.

ಪಂಪ, ರನ್ನ, ವಚನಕಾರರು ಹುಟ್ಟಿದ ನಾಡಿನಲ್ಲಿ ಜನತೆ ನೆಮ್ಮದಿಯಾಗಿ ಬದುಕುವಂತಹ ವಾತಾವರಣ ನಶಿಸುತ್ತಿದೆ. ಈ ಬಗ್ಗೆ ನಾವೆಲ್ಲರೂ ಗಂಭೀರವಾಗಿ ಚಿಂತಿಸಿ ಸೌಹಾರ್ದಯುತ ವಾತಾವರಣ ನಿರ್ಮಾಣಕ್ಕೆ ನಾವೆಲ್ಲರೂ ಶ್ರಮಿಸಬೇಕಾಗಿದೆ. ಅದರ ಭಾಗವಾಗಿ ಪ್ರಾಚೀನ ಕಾವ್ಯಗಳಲ್ಲಿರುವ ಚಿಂತನೆಗಳನ್ನು ವರ್ತಮಾನಕ್ಕೆ ಸರಿ ಹೊಂದುವಂತೆ ಪುನರ್ ವ್ಯಾಖ್ಯಾನಿಸಬೇಕಾಗಿದೆ ಎಂದರು.

ಕನ್ನಡ ನಾಡ ಗೀತೆ ತುಂಬಾ ಉದ್ದವಾಗಿದೆ. ಯಾವ ದೇಶದಲ್ಲೂ ಇಷ್ಟು ಉದ್ದದ ನಾಡಗೀತೆ ಅಥವಾ ರಾಷ್ಟ್ರಗೀತೆ ಇಲ್ಲ. ಹೀಗಾಗಿ ನಾಡಗೀತೆ ಹಾಡುವ ಸಂದರ್ಭದಲ್ಲಿ ಮೊದಲ ಹಾಗೂ ಕೊನೆಯ ಪ್ಯಾರಾಗಳನ್ನು ಮಾತ್ರ ಬಳಸಿಕೊಂಡರೆ ಸಾಕಾಗುತ್ತದೆ. ನಾಡಗೀತೆ ತುಂಡರಿಸಿ ಹಾಡುವಾಗ ಯಾರಾದರು ವಿರೋಧಿಸಿದರೆ ನನ್ನ ಬಳಿಗೆ ಕಳಿಸಿ, ನಾನು ಅವರಿಗೆ ಅರ್ಥೈಸುತ್ತೇನೆ.
 -ಕಮಲಾ ಹಂಪನ, ಹಿರಿಯ ಸಾಹಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News