×
Ad

ದಂಡುಪಾಳ್ಯದ ನಾಲ್ವರು ಹಂತಕರಿಗೆ ಗಲ್ಲು ಶಿಕ್ಷೆ ಬದಲಿಗೆ ಜೈಲು ಶಿಕ್ಷೆ

Update: 2017-10-03 21:57 IST

ಬೆಂಗಳೂರು, ಅ.3: ನಗರದ ಬಾಣಸವಾಡಿಯಲ್ಲಿ ರಕ್ಷಾ ಎಂಬ ಯುವತಿಯ ಕೊಲೆ ಹಾಗೂ ದರೋಡೆ ಪ್ರಕರಣದಲ್ಲಿ ದಂಡುಪಾಳ್ಯ ಹಂತಕರ ತಂಡದ ನಾಲ್ವರಿಗೆ ಗಲ್ಲು ಶಿಕ್ಷೆ ವಿಧಿಸಿ ಅಧೀನ ನ್ಯಾಯಾಲಯ ನೀಡಿದ್ದ ತೀರ್ಪನ್ನು ಮಂಗಳವಾರ ಮಾರ್ಪಾಡುಗೊಳಿಸಿರುವ ಹೈಕೋರ್ಟ್, ಗಲ್ಲು ಶಿಕ್ಷೆಯ ಬದಲಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.

ಪ್ರಕರಣದಲ್ಲಿ ದಂಡುಪಾಳ್ಯ ತಂಡದ ಮುನಿಕೃಷ್ಣ, ವೆಂಕಟೇಶ, ನಲ್ಲತಿಮ್ಮ ಹಾಗೂ ಲಕ್ಷ್ಮಮ್ಮಗೆ ಅಧೀನ ನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆ ಖಾಯಂಗೊಳಿಸುವಂತೆ ಕೋರಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಸಲ್ಲಿಸಿದ್ದ ಕ್ರಿಮಿನಲ್ ರೆರ್ಡ್ ಕೇಸ್ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ರವಿ ಮಳಿಮಠ ಮತ್ತು ನ್ಯಾಯಮೂರ್ತಿ ಜಾನ್ ಮೈಕ್ ಕುನ್ಹಾ ಅವರಿದ್ದ ಪೀಠ, ಅಧೀನ ನ್ಯಾಯಾಲಯದ ಆದೇಶವನ್ನು ಮಾರ್ಪಾಡುಗೊಳಿಸಿತು.

ಪ್ರಕರಣದಲ್ಲಿ ಆರೋಪಿಗಳೇ ಕೊಲೆ ಮಾಡಿದ್ದಾರೆಂಬುದಕ್ಕೆ ಸಾಕ್ಷ್ಯಾಧಾರಗಳು ಲಭ್ಯವಿಲ್ಲ. ಕೊಲೆ ಆರೋಪ ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಲವಾಗಿದೆ ಎಂದು ಅಭಿಪ್ರಾಯ ಪಟ್ಟಿರುವ ನ್ಯಾಯಪೀಠ, ಗಲ್ಲುಶಿಕ್ಷೆಯನ್ನು ರದ್ದುಪಡಿಸಿದೆ. ಇದೇ ವೇಳೆ ಕಳವು ಮಾಡಲಾಗಿದ್ದ ಆಭರಣಗಳನ್ನು ಮಾರಾಟ ಮಾಡಿರುವುದು ಸಾಬೀತಾಗಿರುವ ಕಾರಣ, 7 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದ ನ್ಯಾಯಪೀಠ, ಈಗಾಗಲೇ ಆರೋಪಿಗಳು ಈ ಶಿಕ್ಷೆ ಅವಧಿಯನ್ನು ಪೂರ್ಣಗೊಳಿಸಿರುವ ಕಾರಣ, ಬೇರಾವುದೇ ಪ್ರಕರಣದಲ್ಲಿ ಬಂಧನದ ಅಗತ್ಯವಿಲ್ಲದಿದ್ದಲ್ಲಿ ಬಿಡುಗಡೆ ಮಾಡಬಹುದೆಂದು ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News