×
Ad

ಬಿಗ್‌ಬಾಸ್ ಅವಕಾಶಕ್ಕಾಗಿ ಸೈಕಲ್ ಜಾಥ

Update: 2017-10-03 22:16 IST

ಬೆಂಗಳೂರು, ಅ.3: ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್‌ಬಾಸ್ ಸ್ಪರ್ಧೆಯಲ್ಲಿ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿ ಕಲಾವಿದ ಮಂಜುನಾಥ ಜೆ. ರೇಳೆಕರ್ ಬೆಳಗಾವಿಯಿಂದ ಬೆಂಗಳೂರುವರೆಗೂ ಸೈಕಲ್ ಜಾಥ ನಡೆಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿರುವ ಯುವಕರಲ್ಲಿಯೂ ಅಪಾರವಾದ ಕಲೆ ಅಡಗಿರುತ್ತದೆ. ಆದರೆ, ಅದನ್ನು ನಾವು ಸಮಾಜದ ಮುಖ್ಯವಾಹಿನಿಗೆ ಪರಿಚಯಿಸಲು ಸಾಧ್ಯವಾಗಿರುವುದಿಲ್ಲ. ಹೀಗಾಗಿ, ಬಿಗ್‌ಬಾಸ್‌ನಂತಹ ದೊಡ್ಡ ಕಾರ್ಯಕ್ರಮಗಳಲ್ಲಿ ಅವಕಾಶ ಸಿಕ್ಕರೆ ನಮ್ಮ ಕಲೆಯನ್ನು ಪ್ರದರ್ಶಿಸುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

ಕಳೆದ 3-4 ವರ್ಷಗಳಿಂದ ಕಲೆಯಲ್ಲಿಯೇ ಜೀವನ ಕಟ್ಟಿಕೊಳ್ಳಬೇಕು ಎಂಬ ಅಭಿಲಾಷೆ ಹೊಂದಿದ್ದೇನೆ. ಇದುವರೆಗೂ ಹಲವಾರು ಸ್ಥಳಗಳಲ್ಲಿ ನನ್ನ ಕಲೆ ಪ್ರದರ್ಶಿಸಿದ್ದು, ಹಲವು ಪ್ರಶಸ್ತಿಗಳು ದೊರೆತಿವೆ. ಹೀಗಾಗಿ, ನಾನು ಮಾಡಿದ ಕಲಾ ಸಾಧನೆಗಳು ಹಾಗೂ ಪ್ರಶಸ್ತಿಗಳ ವಿವರಗಳನ್ನು ಬಿಗ್‌ಬಾಸ್ ತಂಡಕ್ಕೆ ಕಳಿಸಿದ್ದೇನೆ. ಆದರೆ, ಇದುವರೆಗೂ ಆಯ್ಕೆಯಾಗಿಲ್ಲ. ಆದುದರಿಂದ ಅವರಲ್ಲಿ ಮನವಿ ಮಾಡಿಕೊಳ್ಳಲು ಬೆಳಗಾವಿಯಿಂದ ಸೆ.23 ರಿಂದ ಆರಂಭಿಸಿ ಸೆ.30 ರವರೆಗೆ ಗೋಕಾಕ್, ಧಾರವಾಡ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ತುಮಕೂರು ಮೂಲಕ ಸುಮಾರು 650 ಕಿ.ಮೀ.ಸೈಕ್ ಯಾತ್ರೆ ನಡೆಸಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News