ಶ್ರೀಲಂಕಾ ತಂಡದಿಂದ ಮಾಲಿಂಗ ಹೊರಕ್ಕೆ

Update: 2017-10-05 18:37 GMT

ಕೊಲಂಬೊ, ಅ.5: ಮುಂದಿನ ವಾರ ಪಾಕಿಸ್ತಾನ ವಿರುದ್ಧ ಐದು ಪಂದ್ಯಗಳ ಏಕದಿನ ಸರಣಿಯನ್ನಾಡಲಿರುವ ಶ್ರೀಲಂಕಾ ತಂಡ ಗುರುವಾರ ಏಕದಿನ ತಂಡವನ್ನು ಪ್ರಕಟಿಸಿದ್ದು, ವೇಗದ ಬೌಲರ್ ಲಸಿತ್ ಮಾಲಿಂಗರನ್ನು ತಂಡದಿಂದ ಕೈಬಿಟ್ಟಿದೆ. ಏಕದಿನ ಸರಣಿಗೆ ಕಡೆಗಣಿಸಲ್ಪಟ್ಟಿರುವ ಮಾಲಿಂಗ 2019ರ ವಿಶ್ವಕಪ್‌ನಲ್ಲಿ ತಂಡದಲ್ಲಿ ಸ್ಥಾನ ಪಡೆಯುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ವಿಭಿನ್ನ ಶೈಲಿ ಹಾಗೂ ಯಾರ್ಕರ್ ಎಸೆತಗಳ ಮೂಲಕ ಎದುರಾಳಿ ತಂಡದ ಆಟಗಾರರಿಗೆ ಭೀತಿ ಹುಟ್ಟಿಸುತ್ತಿದ್ದ 34ರ ಹರೆಯದ ಮಾಲಿಂಗ ಜೂನ್‌ನಲ್ಲಿ ನಡೆದ ಚಾಂಪಿಯನ್ ಟ್ರೋಫಿಯ ವೇಳೆ ತಂಡಕ್ಕೆ ವಾಪಸಾಗಿದ್ದರು. ಮಾಲಿಂಗ ಕಳೆದ ವರ್ಷ ಟ್ವೆಂಟಿ-20 ವಿಶ್ವಕಪ್‌ನ ವೇಳೆ ಮಂಡಿನೋವಿಗೆ ಒಳಗಾಗಿದ್ದರು. ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ವಾಪಸಾದ ಬಳಿಕ ಮಾಲಿಂಗ 13 ಏಕದಿನ ಪಂದ್ಯಗಳಲ್ಲಿ 10 ವಿಕೆಟ್ ಕಬಳಿಸಲು ಶಕ್ತರಾಗಿದ್ದರು. ಮಾಲಿಂಗ 204 ಪಂದ್ಯಗಳಲ್ಲಿ 301 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News