ಅರ್ಥಶಾಸ್ತ್ರದ ನೊಬೆಲ್ : ಸಂಭಾವ್ಯರ ಪಟ್ಟಿಯಲ್ಲಿ ಆರ್‍ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್

Update: 2017-10-07 12:20 GMT

ಹೊಸದಿಲ್ಲಿ,ಅ.7 : ಈ ಸಾಲಿನ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ದೊರೆಯಬಹುದಾದ ಸಂಭಾವ್ಯರ ಪಟ್ಟಿಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರ ಹೆಸರೂ ಇದೆ. ಈ ಪ್ರಶಸ್ತಿಯ ವಿಜೇತರ ಹೆಸರನ್ನು ಸೋಮವರ ಸ್ಟಾಕ್‍ಹೋಂನಲ್ಲಿ ಘೋಷಿಸಲಾಗುವುದು. ಈ ಹಿಂದೆ ಥಾಮ್ಸನ್ ರಾಯ್ಟರ್ಸ್ ಘಟಕವಾಗಿದ್ದ ಕ್ಲಾರಿವೇಟ್ ಅನಾಲಿಟಿಕ್ಸ್ ಪ್ರತಿ ಬಾರಿ ಪ್ರಶಸ್ತಿ ದೊರೆಯಬಹುದಾದ ಸಂಭಾವ್ಯರ ಪಟ್ಟಿಯನ್ನು ಅವರ ಸಂಶೋಧನಾ ಕಾರ್ಯಗಳ ಆಧಾರದಲ್ಲಿ ಪ್ರಕಟಿಸುತ್ತದೆ.

ಪ್ರಸಕ್ತ ರಾಜನ್ ಅವರು  ಯುನಿವರ್ಸಿಟಿ ಆಫ್ ಚಿಕಾಗೋದ  ಬೂತ್ ಸ್ಕೂಲ್ ಆಫ್ ಬಿಸಿನೆಸ್ ಇಲ್ಲಿನ  ಕ್ಯಾಥರೀನ್ ಡುಸಕ್ ಮಿಲ್ಲರ್ ಡಿಸ್ಟಿಂಗ್ವಿಶ್ಡ್ ಸರ್ವಿಸ್ ಪ್ರೊಫೆಸರ್ ಆಫ್ ಫೈನಾನ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕಾರಿವೇಟ್ ಸಂಸ್ಥೆಯ ವೆಬ್ ಸೈಟ್ ಪ್ರಕಾರ ಕಳೆದ 15 ವರ್ಷಗಳಲ್ಲಿ ಅದು ಬಿಡುಗಡೆಗೊಳಿಸಿದ ಪಟ್ಟಿಯಲ್ಲಿರುವವರ ಪೈಕಿ 45 ಮಂದಿಗೆ ನೊಬೆಲ್ ಪ್ರಶಸ್ತಿ ಬಂದಿದೆ.

ರಾಜನ್ ಅವರು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಆಗಿ ಮೂರು ವರ್ಷ ಸೇವೆ ಸಲ್ಲಿಸಿ ಸೆಪ್ಟೆಂಬರ್ 4, 2016ರಲ್ಲಿ ತಮ್ಮ ಹುದ್ದೆ ತೊರೆದಿದ್ದರು. ಇದಾದ ಒಂದು ವರ್ಷದ ನಂತರ ತಮ್ಮ ಹೇಳಿಕೆಗಳ ಹಾಗೂ ಭಾಷಣಗಳನ್ನೊಳಗೊಂಡ ಕೃತಿ "ಐ ಡು ವಾಟ್ ಐ ಡು'' ಪ್ರಕಟಿಸಿದ್ದರು.
ಅವರಿಗೆ ಬ್ರಿಟಿಷ್ ಮ್ಯಾಗಜೀನ್ ಸೆಂಟ್ರಲ್ ಬ್ಯಾಂಕಿಂಗ್ ತನ್ನ ಸೆಂಟ್ರಲ್ ಬ್ಯಾಂಕರ್ ಆಫ್ ದಿ ಇಯರ್ ಪ್ರಶಸ್ತಿ ನೀಡಿ ಗೌರವಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News