×
Ad

ಬೆಂಗಳೂರು: ಮುಂದುವರಿದ ಮಳೆಯ ಆರ್ಭಟ

Update: 2017-10-07 23:52 IST

ಬೆಂಗಳೂರು, ಅ. 7: ನಗರದಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆ ಶನಿವಾರವೂ ಮುಂದುವರಿದಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.

   ನಗರದಲ್ಲಿ ಕಳೆದ ಒಂದು ವಾರದಿಂದ ಅಪರಾಹ್ನ ಭಾರೀ ಮಳೆ ಸುರಿಯುತ್ತಿದೆ. ಶನಿವಾರ ಸುರಿದ ಮಳೆಯಿಂದ ಬೆಂಗಳೂರಿನ ಪ್ರಮುಖ ರಸ್ತೆ ಹಾಗೂ ಚರಂಡಿಗಳಲ್ಲಿ ಮಳೆ ನೀರು ತುಂಬಿ ವಾಹನ ಚಾಲಕರಿಗೆ ಸಂಚಾರಕ್ಕೆ ಅಡ್ಡಿ ಉಂಟಾಯಿತು.

 ತಪ್ಪದ ಟ್ರಾಫಿಕ್ ಜಾಮ್: ನಗರದ ಶಿವಾನಂದ ಸರ್ಕಲ್, ಕೆ.ಆರ್. ರಸ್ತೆ, ಟೌನ್‌ಹಾಲ್, ಶೇಷಾದ್ರಿಪುರಂ ರಸ್ತೆ, ಕೆ.ಆರ್.ಮಾರುಕಟ್ಟೆ, ಮಿನರ್ವ ಸರ್ಕಲ್ ಸೇರಿದಂತೆ ನಗರದ ಹಲವೆಡೆ ಜಲಾವೃತವಾದ ಕಾರಣ ಟ್ರಾಫಿಕ್ ಜಾಮ್ ಉಂಟಾಯಿತು.

 ಸಾರ್ವಜನಿಕರ ಆತಂಕ: ಕಳೆದ ಒಂದು ವಾರದಿಂದ ಜನರು ಆಂತಕದಿಂದ ದಿನ ಕಳೆಯುತ್ತಿದ್ದಾರೆ. ಮರು ಉರುಳುವ, ರಸ್ತೆಗಳು ಹೊಂಡಮಯವಾದುದರಿಂದ ವಾಹನ ಅಪಘಾತ ಸಂಭವಿಸುವ ಆತಂಕ ಅವರನ್ನು ಕಾಡುತ್ತಿದೆ. ಆದರೆ, ಬಿಬಿಎಂಪಿ ಅಪಾಯದ ಸ್ಥಿತಿಯಲ್ಲಿರುವ ಮರಗಳನ್ನು ತೆರುವುಗೊಳಿಸುವಲ್ಲಿ ಯಾವುದೇ ಆಸಕ್ತಿ ತೋರಿಸುತ್ತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News