ಆರೋಗ್ಯ ನೀತಿಗೆ ಮಹತ್ವ ನೀಡದ ಯುಪಿಎ ಸರಕಾರ: ಪ್ರಧಾನಿ ಮೋದಿ ಟೀಕೆ

Update: 2017-10-08 09:46 GMT

ಗುಜರಾತ್, ಅ.8: ಯುಪಿಎ ಸರಕಾರ ತನ್ನ ಆಡಳಿತಾವಧಿಯಲ್ಲಿ ಆರೋಗ್ಯ ನೀತಿಗೆ ಆರೋಗ್ಯ ಸಂಬಂಧಿ ವಿಚಾರಕ್ಕೆ ಮಹತ್ವ ನೀಡಿಲ್ಲ. ಆದರೆ ಎನ್ ಡಿಎ ಸರಕಾರ ಆಡಳಿತಕ್ಕೆ ಬಂದ ನಂತರ ಆರೋಗ್ಯ ನೀತಿಯನ್ನು ನವೀಕರಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ತನ್ನ ಹುಟ್ಟೂರಾದ ಗುಜರಾತ್ ನ ವಡ್ನಾಗರ್ ಗೆ ಭೇಟಿ ನೀಡಿದ ಅವರು, ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಈ ಸಂದರ್ಭ ಅವರು ಇಂಧ್ರಧನುಷ್ ಯೋಜನೆಯನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. “ಇಂಧ್ರದನುಷ್ ಯೋಜನೆಯನ್ನು ನಿಮ್ಮ ಯೋಜನೆಯೆಂದೇ ಭಾವಿಸಬೇಕು. ಹೃದ್ರೋಗದಿಂದ ಬಳಲುತ್ತಿರುವ ಜನರಿಗೆ ಕೇಂದ್ರ ಸರಕಾರ ಸಹಾಯ ಮಾಡಿದೆ. ಸ್ಟೆಂಟ್ ಗಳ ಬೆಲೆಯನ್ನು ನಾವು ಕಡಿಮೆ ಮಾಡಿದ್ದೇವೆ. ಬಡವರಿಗೂ ಉತ್ತಮ ಆರೋಗ್ಯ ದೊರಕುವಂತಾಗಲು ಸರಕಾರ ನಿರಂತರ ಕೆಲಸ ಮಾಡುತ್ತಿದೆ  ಎಂದವರು ಹೇಳಿದರು.

“ಶಿಶು ಮರಣ ಪ್ರಮಾಣ ತಗ್ಗಿಸಲು ವೈದ್ಯರು ತಿಂಗಳಿನ 9ನೆ ದಿನದಂದು ಉಚಿತವಾಗಿ ಸೇವೆ ಸಲ್ಲಿಸಬೇಕು. ಇದರಿಂದಾಗಿ ಹೆರಿಗೆಗಾಗಿ ದೂರಸ್ಥಳಕ್ಕೆ ತಾಯಿಯರು ತೆರಳುವುದನ್ನು ತಪ್ಪಿಸಬಹುದು” ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News