ಫುಟ್ಬಾಲ್ ವಿಶ್ವಕಪ್ ಆತಿಥ್ಯ ತೊರೆದರೆ ಕತರ್ ಬಿಕ್ಕಟ್ಟು ಕೊನೆ: ಯುಎಇ ಅಧಿಕಾರಿ

Update: 2017-10-09 14:16 GMT

ದುಬೈ, ಅ. 9:  2022ರ ಫಿಫಾ (ಫುಟ್ಬಾಲ್) ವಿಶ್ವಕಪ್‌ನ ಆತಿಥ್ಯವನ್ನು ಕತರ್ ತೊರೆದರೆ ಆ ದೇಶದ ಜೊತೆಗಿನ ರಾಜತಾಂತ್ರಿಕ ಬಿಕ್ಕಟ್ಟು ಕೊನೆಗೊಳ್ಳಬಹುದಾಗಿದೆ ಎಂದು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನ ಉನ್ನತ ಭದ್ರತಾ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕತರ್ ಫುಟ್ಬಾಲ್ ವಿಶ್ವಕಪ್‌ನ ಆತಿಥ್ಯ ವಹಿಸುವ ವಿಷಯದಲ್ಲಿ, ಆ ದೇಶದ ವಿರುದ್ಧ ದಿಗ್ಬಂಧನೆ ವಿಧಿಸಿರುವ ದೇಶಗಳಾದ ಸೌದಿ ಅರೇಬಿಯ, ಯುಎಇ, ಬಹರೈನ್ ಮತ್ತು ಈಜಿಪ್ಟ್ ಮುಂತಾದ ಅರಬ್ ದೇಶಗಳು ಅದನ್ನು ಟೀಕಿಸುತ್ತಲೇ ಬಂದಿರುವುದನ್ನು ಸ್ಮರಿಸಬಹುದಾಗಿದೆ.

ಇದರ ಮುಂದುವರಿದ ಭಾಗವಾಗಿ ದುಬೈ ಭದ್ರತೆಯ ಲೆಫ್ಟಿನೆಂಟ್ ಜನರಲ್ ದಹಿ ಖಲ್ಫನ್ ಟ್ವಿಟರ್‌ನಲ್ಲಿ ಈ ಹೇಳಿಕೆ ನೀಡಿದ್ದಾರೆ.

‘‘ವಿಶ್ವಕಪ್ ಕತರ್‌ನಿಂದ ಹೊರ ಹೋದರೆ, ಕತರ್ ಬಿಕ್ಕಟ್ಟು ಕೊನೆಗೊಳ್ಳುತ್ತದೆ. ಯಾಕೆಂದರೆ, ಅದನ್ನು ಮುರಿಯುವುದಕ್ಕಾಗಿಯೇ ಬಿಕ್ಕಟ್ಟು ಸೃಷ್ಟಿಸಲಾಗಿತ್ತು’’ ಎಂದು ರವಿವಾರ ರಾತ್ರಿ ಖಲ್ಫನ್ ಟ್ವೀಟ್ ಮಾಡಿದ್ದಾರೆ.

ಈ ಹೇಳಿಕೆಗೆ ಪ್ರತಿಕ್ರಿಯಿಸಲು ಕತರ್ ಅಧಿಕಾರಿಗಳು ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News