ಎಎಂಯು, ಬಿಎಚ್ ಯು ವಿವಿಗಳ ಹೆಸರು ಬದಲಾಯಿಸುವ ಯೋಚನೆಯಿಲ್ಲ: ಕೇಂದ್ರ ಸಚಿವ ಜಾವಡೇಕರ್

Update: 2017-10-09 14:41 GMT

ಹೊಸದಿಲ್ಲಿ, ಅ.9: ಅಲಿಘರ್ ಮುಸ್ಲಿಂ ಯುನಿವರ್ಸಿಟಿ ಹಾಗು ಬನಾರಸ್ ಹಿಂದು ಯುನಿವರ್ಸಿಟಿಯ ಹೆಸರುಗಳನ್ನು ಬದಲಾಯಿಸಲು ಸರಕಾರ ಚಿಂತಿಸುತ್ತಿದೆ ಎಂಬ ವರದಿಗಳನ್ನು ಕೇಂದ್ರ ಮಾನವ ಸಂಪನ್ಮೂಲ ಹಾಗು ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ನಿರಾಕರಿಸಿದ್ದಾರೆ.

“ಎಎಂಯು ಹಾಗು ಬಿಎಚ್ ಯು ಅತಿ ಹಳೆಯ ಸಂಸ್ಥೆಗಳಾಗಿದ್ದು, ಅವುಗಳ ಹೆಸರುಗಳ ಬದಲಾವಣೆಗೆ ಬಯಸುವುದಿಲ್ಲ. ವಿವಿಗಳ ಆಡಳಿತಾತ್ಮಕ, ಶೈಕ್ಷಣಿಕ ಹಾಗು ಸಂಶೋಧನಾ ಆಡಿಟ್ ಗಳನ್ನು ನೋಡಿಕೊಳ್ಳಲು ನಾವು ಸಮಿತಿಯೊಂದನ್ನು ರಚಿಸಿದ್ದೇವೆ” ಎಂದವರು ಹೇಳಿದರು.

“ಸಮಿತಿಯು ಹಲವಾರು ಅಂಶಗಳ ಬಗ್ಗೆ ಅಧ್ಯಯನ ನಡೆಸಿದೆ. ಆದರೆ ಅವರು ಏನು ಹೇಳಿದ್ದಾರೆ ಎಂದು ನಾನು ನೋಡಿಲ್ಲ. ಆ ರೀತಿಯ ಯಾವುದೇ ನಿರ್ಧಾರಗಳಿಲ್ಲ ಹಾಗು ಹೆಸರನ್ನು ಬದಲಾಯಿಸುವ ಯಾವ ಉದ್ದೇಶವೂ ಇಲ್ಲ” ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News