ಕೆಎಸ್‌ ರಿಲೀಫ್‌ನಿಂದ ಯಮನ್‌ಗೆ 53,443 ಕೋಟಿ ರೂ. ನೆರವು

Update: 2017-10-10 16:45 GMT

ರಿಯಾದ್ (ಸೌದಿ ಅರೇಬಿಯ), ಅ. 10: ದೊರೆ ಸಲ್ಮಾನ್ ಪರಿಹಾರ ಮತ್ತು ಮಾನವೀಯ ನೆರವು ಕೇಂದ್ರ (ಕೆಎಸ್‌ರಿಲೀಫ್)ವು 2015ರಲ್ಲಿ ಸ್ಥಾಪನೆಯಾದಂದಿನಿಂದ ಯಮನ್‌ಗೆ 8.2 ಬಿಲಿಯ ಡಾಲರ್ (ಸುಮಾರು 53,443 ಕೋಟಿ ರೂಪಾಯಿ) ನೆರವು ನೀಡಿದೆ ಎಂದು ಸಂಸ್ಥೆಯ ವಕ್ತಾರರು ಸೋಮವಾರ ತಿಳಿಸಿದ್ದಾರೆ.

‘‘ಯಮನ್‌ನಲ್ಲಿ ಮಾನವೀಯ ಮತ್ತು ಪರಿಹಾರ ಯೋಜನೆಗಳಿಗಾಗಿ ನಾವು 75 ಕೋಟಿ ಡಾಲರ್ (4,888 ಕೋಟಿ ರೂಪಾಯಿ) ಈವರೆಗೆ ಖರ್ಚು ಮಾಡಿದ್ದೇವೆ’’ ಎಂದು ಕೆಎಸ್‌ರಿಲೀಫ್‌ನ ಇಲ್ಲಿನ ಪ್ರಧಾನ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಕ್ತಾರ ಡಾ. ಸಮೀರ್ ಅಲ್ ಜೆಟೈಲಿ ಹೇಳಿದರು.

ಭದ್ರತೆ, ಶಿಬಿರಗಳ ಏರ್ಪಾಡು, ನೀರು ಮತ್ತು ನೈರ್ಮಲ್ಯೀಕರಣ, ಪೌಷ್ಟಿಕತೆ, ಆರೋಗ್ಯ, ವಸ್ತು ರೂಪದಲ್ಲಿ ನೆರವು ನೀಡುವುದಕ್ಕಾಗಿ ಈ ಹಣವನ್ನು ಖರ್ಚು ಮಾಡಲಾಗಿದೆ. 86 ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಸಂಘಟನೆಗಳ ನೆರವಿನಿಂದ ಸುಮಾರು 150 ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದರು.

ಉಳಿದ ಮೊತ್ತವನ್ನು ಸೌದಿ ಅರೇಬಿಯದಲ್ಲಿರುವ ಯಮನಿಗಳ ಅಭಿವೃದ್ಧಿ ಮತ್ತು ನೆರವಿಗಾಗಿ ಖರ್ಚು ಮಾಡಲಾಗಿದೆ ಎಂದರು.

 1994ರಿಂದ 2014ರ ಅವಧಿಯಲ್ಲಿ ಸೌದಿ ಅರೇಬಿಯವು 65 ಬಿಲಿಯ ಡಾಲರ್ (ಸುಮಾರು 4,23,637 ಕೋಟಿ ರೂಪಾಯಿ) ವಿದೇಶಿ ನೆರವು ನೀಡಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News