ಬಿಎಚ್‌ಯು ಆವರಣದಲ್ಲಿ ಬೈಕ್ ಸವಾರರಿಂದ ಮತ್ತೆ ವಿದ್ಯಾರ್ಥಿನಿಗೆ ಕಿರುಕುಳ

Update: 2017-10-13 13:02 GMT

ವಾರಣಾಸಿ,ಅ.13: ಇಲ್ಲಿಯ ಬನಾರಸ ಹಿಂದು ವಿಶ್ವವಿದ್ಯಾಲಯ(ಬಿಎಚ್‌ಯು)ದ ಕ್ಯಾಂಪಸ್‌ನಲ್ಲಿ ಗುರುವಾರ ಸಂಜೆ ಬೈಕೊಂದರಲ್ಲಿದ್ದ ಮೂವರು ಯುವಕರು ವಿದ್ಯಾರ್ಥಿನಿ ಯೋರ್ವಳಿಗೆ ಕಿರುಕುಳವನ್ನು ನೀಡಿದ್ದು, ಇದು ವಿವಿ ಆವರಣದಲ್ಲಿ ವಿದ್ಯಾರ್ಥಿನಿಯರ ಸುರಕ್ಷತೆಯ ಬಗ್ಗೆ ಮತ್ತೊಮ್ಮೆ ಕಳವಳಗಳನ್ನು ಹುಟ್ಟುಹಾಕಿದೆ.

 ವಿದ್ಯಾರ್ಥಿನಿಯು ಸಮೀಪದ ಮಾರುಕಟ್ಟೆಯಿಂದ ತನ್ನ ಹಾಸ್ಟೆಲ್‌ಗೆ ಮರಳುತ್ತಿದ್ದಾಗ ಮೂವರು ದುಷ್ಕರ್ಮಿಗಳು ಆಕೆಯ ತಲೆಗೆ ಹೊಡೆದಿದ್ದರು. ಆಕೆ ತಕ್ಷಣ ಕ್ಷಿಪ್ರ ಪ್ರತಿಕ್ರಿಯಾ ತಂಡಕ್ಕೆ ಮಾಹಿತಿ ನೀಡಿದ್ದಳು.

ಆರೋಪಿಗಳ ಪತ್ತೆಗಾಗಿ ರಾತ್ರಿಯೇ ಕ್ಯಾಂಪಸ್‌ನಲ್ಲಿ ಶೋಧಿಸಲಾಗಿತ್ತು. ಆದರೆ ಅವರ ಪತ್ತೆಯಾಗಿಲ್ಲ ಎಂದು ವಿವಿಯ ಮುಖ್ಯ ಶಿಸ್ತುಪಾಲಕಿ ಆರ್.ಸಿಂಗ್ ತಿಳಿಸಿದ್ದಾರೆ.

ಸೆ.21ರಂದು ಇಬ್ಬರು ಅಪರಿಚಿತ ವ್ಯಕ್ತಿಗಳು ವಿದ್ಯಾರ್ಥಿನಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ್ದರು. ಇದರಿಂದ ಕ್ರುದ್ಧ ವಿದ್ಯಾರ್ಥಿನಿಯರ ಸಮೂಹವು ಭಾರೀ ಪ್ರತಿಭಟನೆ ನಡೆಸಿ ವಿವಿ ಆವರಣದಲ್ಲಿ ವಿದ್ಯಾರ್ಥಿನಿಯರ ಸುರಕ್ಷತೆ ಮತ್ತು ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿತ್ತು.

ಅ.5ರಂದು ವಿದ್ಯಾರ್ಥಿಯೋರ್ವ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆಂದು ಆರೋಪಿಸಿ ವಿದ್ಯಾರ್ಥಿನಿಯೋರ್ವಳು ಪೊಲೀಸರಿಗೆ ದೂರು ಸಲ್ಲಿಸಿದ್ದಳು. ತಕ್ಷಣ ಕ್ರಮವನ್ನು ಕೈಗೊಂಡ ವಿವಿ ಆಡಳಿತವು ಆ ವಿದ್ಯಾರ್ಥಿಯನ್ನು ಅಮಾನತುಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News