×
Ad

ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚನೆ: ಆರೋಪಿ ಬಂಧನ

Update: 2017-10-13 22:55 IST

ಮೈಸೂರು, ಅ.13: ರಾಜ್ಯಾದ್ಯಂತ ನೂರಾರು ಯುವಕರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚಿಸಿದ್ದ ಖತರ್ನಾಕ್ ವಂಚಕ ನೋರ್ವ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ವಂಚಕನನ್ನು ರೈಲ್ವೆ ಇಲಾಖೆ ಮಾಜಿ ಉದ್ಯೋಗಿ ಪಿ. ವಿಲ್ಸನ್ ಎಂದು ಹೇಳಲಾಗಿದೆ.

ತಮಿಳುನಾಡಿನಲ್ಲಿ ಅಡಗಿ ಕುಳಿತಿದ್ದ ವಂಚಕನನ್ನು ಪೊಲೀಸರು ಸೆರೆಹಿಡಿದಿದ್ದಾರೆ. ಬಾಡಿ ವಾರೆಂಟ್ ಮೇರೆಗೆ ದಾವಣಗೆರೆ ಪೊಲೀಸರಿಂದ ಮೈಸೂರಿನ ಲಕ್ಷ್ಮೀಪುರಂ ಪೊಲೀಸರಿಗೆ ವಂಚಕನನ್ನು ಹಸ್ತಾಂತರಿಸಲಾಗಿದೆ. 

ವಿಲ್ಸನ್ ಬೆಂಗಳೂರು ರೈಲ್ವೆ ಡಿವಿಷನ್ ನಲ್ಲಿ ಕಚೇರಿ ಸೂಪರಿಡೆಂಟ್ ಆಗಿದ್ದರು. ಜನರಲ್ ಮ್ಯಾನೇಜರ್ ಕೋಟಾದಲ್ಲಿ ನೇರ ನೇಮಕಾತಿ ಮಾಡಿಸುತ್ತೇನೆಂದು ನಂಬಿಸಿ ಐದು ಕೋಟಿ ರೂಪಾಯಿ ವಸೂಲಿ ಮಾಡಿದ್ದ. ರಾಜ್ಯಾದ್ಯಂತ 25ಕ್ಕೂ ಹೆಚ್ಚು  ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿದೆ.

ಈತ ರೈಲ್ವೆ ಅಧಿಕಾರಿಗಳ ನಕಲಿ ಸಹಿ, ಸೀಲು ಬಳಸಿ ನೇಮಕಾತಿ ಆದೇಶ ಪ್ರತಿ ನೀಡಿದ್ದ.  ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ವಿಲ್ಸನ್ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News