ಡೇಟಾ ಮೈನಿಂಗ್ ಮತ್ತು ಖಾಸಗಿತನದ ರಕ್ಷಣೆ

Update: 2017-10-14 12:40 GMT

ಡೇಟಾ ಅನ್ನುವುದು ಈ ಶತಮಾನದ ತೈಲ. ನಾವೀಗ ಡೇಟಾ ಗಣಿಗಾರಿಕೆಯಲ್ಲಿ ತೀವ್ರವಾಗಿ ತೊಡಗಿಕೊಳ್ಳುತ್ತೇವೆ! ಡೇಟಾ ಕೇವಲ ಗಣಿಗಾರಿಕೆಗೆ ಬದಲಿಗೆ ಅದು ಶೋಧಿಸುವಿಕೆಗೂ ಒಳಗಾಗುತ್ತದೆ!

‘‘ಡೇಟಾ (ದತ್ತಾಂಶ) ಈ ಶತಮಾನದ ಅತ್ಯಂತ ಪ್ರಮುಖ ಸಂಪನ್ಮೂಲವಾಗಿದೆ. ಇದರ ಕುರಿತು ಸ್ಪಷ್ಟ ಕಾನೂನಾತ್ಮಕ ನಿಲುವುಗಳಿಗೆ ಸರಕಾರವು ಬರದಿದ್ದರೆ, ಡೇಟಾ ವಸಾಹತೀಕರಣವನ್ನು ನಾವು ಎದುರಿಸಬೇಕಾಗುತ್ತದೆ’’ ಎನ್ನುವುದು ಆಧಾರ್ ಸಂಸ್ಥೆಯ ಮುಖ್ಯಸ್ಥರಾ ಗಿದ್ದ ನಂದನ್ ನಿಲೇಕಣಿಯವರ ಅಭಿಪ್ರಾಯ. ಆಧಾರ್ ಕಾರ್ಡ್‌ನಿಂದ ಖಾಸಗಿತನ ನಷ್ಟವಾಗುತ್ತದೆಯೋ ಇಲ್ಲವೋ ಎನ್ನುವುದರ ಕುರಿತು ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ಸಂದರ್ಭ ದಲ್ಲಿ ನಿಲೇಕಣಿಯವರ ಮಾತುಗಳು ಬಹಳ ಮುಖ್ಯವಾಗುತ್ತವೆ. ಒಂದೆಡೆ ಆಧಾರ್ ಕಾರ್ಡ್ ಖಾಸಗಿತನದ ಮೇಲೆ ಹಲ್ಲೆ ನಡೆಸುತ್ತದೆಯೇ ಎನ್ನುವ ಪ್ರಶ್ನೆ ಮೂಡಿದ್ದರೆ, ಇನ್ನೊಂದೆಡೆ ಯಾವುದೋ ಆ್ಯಪ್‌ಗೆ ನಮ್ಮೆಲ್ಲಾ ಮಾಹಿತಿಗಳನ್ನು ಪಡೆಯಲು ‘ಐ ಅಗ್ರೀ’ ಎಂದು ನಾವು ಯಾವುದೇ ಮುಲಾಜಿಲ್ಲದೆ ಅನುಮತಿ ನೀಡುತ್ತಿದ್ದೇವೆ! ಇದನ್ನೇ ಸುಪ್ರೀಂಕೋರ್ಟ್ ಕೂಡ ವಿಚಾರಣೆಯ ಸಂದರ್ಭದಲ್ಲಿ ಪ್ರಶ್ನಿಸಿದೆ ಸಹ.

ಕೇವಲ 1,500 ರೂ.ಗಳನ್ನು ಕಟ್ಟಿಸಿಕೊಂಡು ಉಚಿತವಾಗಿ ಫೋನ್ ನೀಡುವ ಯೋಜನೆಯನ್ನು ಪ್ರಕಟಿಸಿರುವ ಜಿಯೋ ಫೋನಿನ ಮುಖ್ಯಸ್ಥರಾದ ಮುಖೇಶ್ ಅಂಬಾನಿ ಕಳೆದ ವರ್ಷ ಹೇಳಿದ್ದ ಮಾತು ನಿಲೇಕಣಿಯವರ ಆತಂಕವನ್ನು ಸಾಬೀತುಪಡಿಸುತ್ತದೆ. ಜಿಯೋ ಮೊಬೈಲ್ ಸೇವೆಯನ್ನು ಆರಂಭಿಸುತ್ತಾ ಮುಖೇಶ್ ಹೀಗೆ ಹೇಳಿದ್ದರು: ‘‘ಡೇಟಾ ಅನ್ನುವುದು ಈ ಶತಮಾನದ ತೈಲ. ನಾವೀಗ ಡೇಟಾ ಗಣಿಗಾರಿಕೆಯಲ್ಲಿ ತೀವ್ರವಾಗಿ ತೊಡಗಿಕೊಳ್ಳುತ್ತೇವೆ!’’ ಡೇಟಾ ಕೇವಲ ಗಣಿ ಗಾರಿಕೆಗೆ (ಮೈನಿಂಗ್) ಬದಲಿಗೆ ಅದು ಶೋಧಿಸುವಿಕೆಗೂ ಒಳಗಾಗುತ್ತದೆ! ತೈಲ ಬಾವಿಯನ್ನು ಕೊರೆದು, ಹೊರ ತೆಗೆದು ತೈಲವನ್ನು ಕೊಳವೆಗಳ ಮೂಲಕ ಹರಿಸಿ, ಟ್ಯಾಂಕರ್‌ಗಳ ಮೂಲಕ ಊರುಗಳಿಗೆ ಹಂಚುತ್ತಿದ್ದ ಜಾಗದಲ್ಲೀಗ ಕಿಲೋಮೀಟರ್‌ಗಟ್ಟಲೆ ಉದ್ದದ ಕೇಬಲ್‌ಗಳ ಮೂಲಕ ಹರಿದು ಹೋಗುವ ಡೇಟಾವನ್ನು ಫುಟ್‌ಬಾಲ್ ಕ್ರೀಡಾಂಗಣದಷ್ಟು ದೊಡ್ಡದಿರುವ ಡೇಟಾ ಸಂಗ್ರಹಾಗಾರಗಳಲ್ಲಿ ಸಂಗ್ರಹಿಸಿ ದತ್ತಾಂಶದ ಶೋಧಿಸುವಿಕೆ ನಡೆಯುತ್ತದೆ. ದೊಡ್ಡ ಯಂತ್ರಗಳು ಮಾಡುತ್ತಿದ್ದ ಕೆಲಸ ವನ್ನು ಇಂದು ಬೃಹತ್ ಕಂಪ್ಯೂಟರ್‌ಗಳು ಮಾಡುತ್ತಿವೆ. ಅಂದು ತೈಲ ಬಾವಿ ಗಳಿರುವ ಭೂಪ್ರದೇಶದ ಒಡೆತನ ಮುಖ್ಯವಾಗಿತ್ತು, ಇಂದು ಡೇಟಾ ಸಂಗ್ರಹಿಸುವ ಕಂಪ್ಯೂಟರ್ ಕೇಂದ್ರಗಳ ಒಡೆತನ ಮುಖ್ಯವಾಗಿದೆ ಅಷ್ಟೆ.’’

2017ರ ಮೊದಲ ತ್ರೈ ಮಾಸಿಕದಲ್ಲಿ ಮೈಕ್ರೋಸಾಫ್ಟ್, ಗೂಗಲ್, ಫೇಸ್‌ಬುಕ್, ಅಮೆಝಾನ್ ಮತ್ತು ಆ್ಯಪಲ್ ಕಂಪೆನಿಗಳು ಒಟ್ಟು 25 ಬಿಲಿಯನ್‌ಡಾಲರ್‌ಗಳನ್ನು ತಮ್ಮ ಡೇಟಾ ಮೈನಿಂಗ್ ವ್ಯವಸ್ಥೆಯನ್ನು ಬಲಪಡಿಸಲು ಖರ್ಚು ಮಾಡಿವೆ. ಮುಂಬರುವ ದಿನಗಳಲ್ಲಿ ಇನ್ನು ಒಂದಷ್ಟು ಕೋಟಿ ಡಾಲರ್‌ಗಳನ್ನು ಬಂಡವಾಳವಾಗಿ ಇವು ಹೂಡಲಿವೆಯಂತೆ. ಅಂದರೆ, ಇಂಟರ್‌ನೆಟ್ ಆಧಾರಿತ ಸೇವೆ ನೀಡುವ ಎಲ್ಲಾ ಕಂಪೆನಿಗಳು ದತ್ತಾಂಶ ಗಣಿಗಾರಿಕೆಯಲ್ಲಿ ತೀವ್ರವಾಗಿ ತೊಡಗಿಕೊಂಡಿರುವುದಂತು ಸತ್ಯ.

ಡೇಟಾ ಮೈನಿಂಗ್ ಎಂದರೇನು?

ಯಾವುದೇ ವ್ಯಕ್ತಿ ಇಂಟರ್‌ನೆಟ್ ಸೇವೆಯ ಮೂಲಕ ಯಾವುದೇ ಕೆಲಸ ದಲ್ಲಿ ತೊಡಗಿದಾಗ ಸೃಷ್ಟಿಯಾಗುವ ಎಲ್ಲಾ ಡಿಜಿಟಲ್ ಗುರುತುಗಳು ಡೇಟಾ ಆಗುತ್ತವೆ. ಉದಾಹರಣೆಗೆೆ ಒಬ್ಬ ವ್ಯಕ್ತಿ ಯಾವ ಊರಿನ ಯಾವ ಕಂಪ್ಯೂಟರ್‌ನಿಂದ ಇಂಟರ್‌ನೆಟ್ ಪ್ರವೇಶಿಸಿದ, ಎಷ್ಟು ಸಮಯ ಇದ್ದ ಮತ್ತು ಯಾವ ಯಾವ ಜಾಲತಾಣಗಳಲ್ಲಿ ಎಷ್ಟು ಸಮಯ ಇದ್ದ ಮುಂತಾದ ಎಲ್ಲವೂ ಡೇಟಾ ಆಗುತ್ತವೆ. ಇವುಗಳ ಸಂಗ್ರಹವನ್ನು ಡೇಟಾ ಸಂಗ್ರಹ ಎನ್ನಲಾಗುತ್ತದೆ. ಈ ಮಾಹಿತಿಯನ್ನು ಅನೇಕ ತಂತ್ರಾಶಗಳ ಮೂಲಕ ಶೋಧಿಸಿ ಅಗತ್ಯವಿರುವ ಕೆಲವು ಮಾಹಿತಿಗಳನ್ನು ಹೆಕ್ಕಿ ತೆಗೆದರೆ, ಅದನ್ನು ಡೇಟಾ ಮೈನಿಂಗ್ ಎನ್ನಲಾಗುತ್ತದೆ. ಮೇಲಿನ ಉದಾಹರಣೆಯಲ್ಲಿ, ವ್ಯಕ್ತಿ ಯಾವ ಊರಿನವನು ಮತ್ತು ಯಾವ ಬಡಾವಣೆಯವನು ಎನ್ನುವ ಮಾಹಿತಿಯೂ ಲಭ್ಯವಿರುತ್ತದೆ. ವ್ಯಕ್ತಿಯಿರುವ ಊರಿನ ಕಂಪೆನಿಯೊಂದು ಈ ಮಾಹಿತಿಯನ್ನು ಹಣ ನೀಡಿ ಪಡೆಯುತ್ತದೆ. ತನ್ನ ಉತ್ಪನ್ನಗಳ ಮಾಹಿತಿ ಯನ್ನು ನೇರವಾಗಿ ಅದೇ ವ್ಯಕ್ತಿಗೆ ತಲುಪಿಸುತ್ತದೆ. ಇದನ್ನೇ ಕಸ್ಟಮೈಸ್‌ಡ್ ಸರ್ವಿಸ್ ಎನ್ನುವುದು. ಇಂಟರ್‌ನೆಟ್ ಸೇವೆಯನ್ನು ನೀಡಿದ ಕಂಪೆನಿಯು ಇಂತಹ ಡೇಟಾವನ್ನು ಬೇಡಿಕೆ ಸಲ್ಲಿಸಿದ ಕಂಪೆನಿಗೆ ನೀಡಲು ನಡಸುವ ಕಾರ್ಯಾಚರಣೆಯನ್ನು ‘ಡೇಟಾ ಮೈನಿಂಗ್’ ಎನ್ನಲಾಗುತ್ತದೆ.

ಹಾಗೆ ನೋಡಿದರೆ, ಡೇಟಾ ಮೈನಿಂಗ್ ಎಂಬುದು ಹೊಸ ವಿಧಾನ ವೇನು ಅಲ್ಲ. ಇಂಟರ್‌ನೆಟ್ ಸೇವೆಯನ್ನು ಖಾಸಗಿ ಕಂಪೆನಿಗಳು ನೀಡಲು ಆರಂಭಿಸಿದ ದಿನಗಳಿಂದಲೂ ಇರುವಂತಹ ಪ್ರಕ್ರಿಯೆ ಇದು. ಆರಂಭದ ಕಂಪೆನಿಗಳಲ್ಲಿ ಒಂದಾದ ‘ಯಾಹೂ’ ತನ್ನ ಉಚಿತ ಈ ಮೈಲ್ ಸೇವೆ ಯನ್ನು ಬಳಸುವ ಗ್ರಾಹಕರ ಈಮೈಲ್‌ಗಳನ್ನು ತಂತ್ರಾಂಶಗಳ ಮೂಲಕ ಓದಿಸಿ ಅವರ ಆಸಕ್ತಿಯ ಕ್ಷೇತ್ರವನ್ನು ಗುರುತಿಸಿ ಅದಕ್ಕೆ ಪೂರಕವಾದ ಜಾಹೀ ರಾತುಗಳು ಅವರ ಕಂಪ್ಯೂಟರ್ ಪರದೆಯ ಮೇಲೆ ಮೂಡುವಂತೆ ಮಾಡು ತ್ತಿತ್ತು. ಅನೇಕ ಅಲ್ಗಾರಿದಮ್‌ಗಳ ಮೂಲಕ ಆದಷ್ಟು ಖಚಿತವಾದ ಅಂದಾಜಿಗೆ ಬರಲು ಈ ಕಂಪೆನಿಗಳು ಪ್ರಯತ್ನಿಸುತ್ತಿದ್ದವು. ಮುಂದೆ ‘ಗೂಗಲ್’ ಕಂಪೆನಿ ಈ ವಿಚಾರದಲ್ಲಿ ಸಾಕಷ್ಟು ಪರಿಣತಿಯನ್ನು ಕಡಿಮೆ ಸಮಯದಲ್ಲಿ ಪಡೆದು ಡಿಜಿಟಲ್ ಮಾರುಕಟ್ಟೆಯನ್ನು ಆಕ್ರಮಿಸಿದ ಕಾರಣ, ‘ಯಾಹೂ’ ಕಂಪೆನಿ ಬಾಗಿಲು ಮುಚ್ಚುವ ಸ್ಥಿತಿಗೆ ಈಗ ಬಂದು ತಲುಪಿದೆ.

ಕೇವಲ ಜಾಹೀರಾತು ಪಡೆಯಲು ಮತ್ತು ಜಾಹೀರಾತನ್ನು ಗ್ರಾಹಕನಿಗೆ ತಲುಪಿಸಲು ಬಳಕೆಯಾಗುತ್ತಿದ್ದ ದತ್ತಾಂಶ ಗಣಿಗಾರಿಕೆ, ಇಂದು ತನ್ನ ವ್ಯಾಪ್ತಿ ಯನ್ನು ಹಿಗ್ಗಿಸಿಕೊಂಡಿದೆ. ಸ್ಮಾರ್ಟ್ ಫೋನ್‌ಗಳ ಮೂಲಕ ಇಂಟರ್ ನೆಟ್ ಇಂದು ನಮ್ಮ ಫೋನನ್ನು ಪ್ರವೇಶಿಸಿರುವುದರಿಂದ ಬಳಕೆದಾರನ ವಿಷಯ ವಲ್ಲದೆ, ಫೋನಿನಲ್ಲಿರುವ ಎಲ್ಲಾ ಮಾಹಿತಿಗಳು ದತ್ತಾಂಶವಾಗಿ ಬಿಟ್ಟಿವೆ! ನನ್ನ, ನಿಮ್ಮ, ಅವರ, ಇವರ ಎಲ್ಲರ ಮಾಹಿತಿಗಳು ನೇರವಾಗಿ ಸೇವೆ ನೀಡುವ ಕಂಪೆನಿಯ ದತ್ತಾಂಶ ಕೇಂದ್ರವನ್ನು ಸೇರಿ ಭದ್ರವಾಗಿ ಕುಳಿತು ಬಿಡುತ್ತವೆ. ಹಾಗಾಗಿ ಮಾನವ ಸಮಾಜದ ಎಲ್ಲಾ ವಿಷಯಗಳನ್ನೊಳ ಗೊಂಡ ದತ್ತಾಂಶ ಫೋನಿನ ಮೂಲಕ ಕಂಪೆನಿಗಳ ಸಂಗ್ರಹಾರಗಳಲ್ಲಿ ಶೇಖರಗೊಳ್ಳುತ್ತದೆ. ಶೇಖರಗೊಂಡ ದತ್ತಾಂಶವನ್ನು ಅಗತ್ಯಕ್ಕೆ ತಕ್ಕಂತೆ ಶೋಧಿಸಿ ಕೇಳಿದ ಮಾಹಿತಿ ಯನ್ನು ಹೆಕ್ಕಿ ತೆಗೆದು ಹಣ ಮಾಡುವುದಷ್ಟೆ ಬಾಕಿಯಾಗುವ ಕೆಲಸ.

ಆ್ಯಪ್‌ಗಳ ಮಾಯಾಲೋಕ.

ಸ್ಮಾರ್ಟ್ ಫೋನ್‌ಗಳ ಬಳಕೆಯೊಂದಿಗೆ ಕಾಲಿಟ್ಟ ಆ್ಯಪ್‌ಗಳು (ಕಿರುತಂತ್ರಾಂಶ ಗಳು) ಡೇಟಾ ಸಂಗ್ರಹಣೆಯನ್ನು ಇನ್ನಷ್ಟು ಸುಲಭ ಗೊಳಿಸಿದವು. ಯಾವುದೇ ಆ್ಯಪ್ ಡೌನ್‌ಲೋಡ್ ಮಾಡುವಾಗಲೂ ಅದು ಷರತ್ತುಗಳ ದೊಡ್ಡ ಪಟ್ಟಿಯನ್ನು ಹಾಕಿ ಅಂತ್ಯದಲ್ಲಿ ‘ಐ ಅಗ್ರೀ’ (ನನಗೆ ಒಪ್ಪಿಗೆ) ಎನ್ನುವ ಬಟನ್ ಒತ್ತುವಂತೆ ಕೇಳುತ್ತದೆೆ. ಒತ್ತಿದರೆ ಮಾತ್ರ ಅದು ಕೆಲಸ ಮಾಡುತ್ತದೆ. ಇಲ್ಲದಿದ್ದರೆ ಇಲ್ಲ. ಆ್ಯಪ್ ಬಳಸುವ ಧಾವಂತದಲ್ಲಿ ಗ್ರಾಹಕ ಒಪ್ಪಿಗೆ ಎಂದು ಬಟನ್ ಒತ್ತುತ್ತಾನೆ. ಅಲ್ಲಿಗೆ ಗ್ರಾಹಕನ ಫೋನಿನ ಅಷ್ಟೂ ಮಾಹಿತಿ ಆ್ಯಪ್‌ನ ವಶದಲ್ಲಿ! ‘ಒಪ್ಪಿಗೆ’ ಎಂದು ಗ್ರಾಹಕನೇ ಬಟನ್ ಒತ್ತಿರುವುದರಿಂದ ಎಲ್ಲವೂ ಕಾನೂನು ಬದ್ಧ!

ಯಾವುದೇ ಶುಲ್ಕವಿಲ್ಲದೆ ಬಳಸಬಹುದಾದ ಈ ಆ್ಯಪ್‌ಗಳು ಮೊದಲಿಗೆ ಆರಂಭದ ಇಂಟರ್‌ನೆಟ್ ಕಂಪೆನಿಗಳಂತೆ ಪಡೆದುಕೊಂಡ ಡೇಟಾವನ್ನು ಜಾಹೀರಾತುದಾರರಿಗೆ ನೀಡಿ ಹಣ ಮಾಡಿಕೊಂಡವು. ಈಗ ಅವು ಸಹಾ ಡೇಟಾ ಮೈನಿಂಗ್ ಕೆಲಸದಲ್ಲಿ ಮಗ್ನ. ಇದೊಂದು ಸಂಕೀರ್ಣವಾದ ಕೆಲಸ. ಪ್ರತೀ ಕ್ಷಣ ಉತ್ಪತ್ತಿಯಾಗುವ ಲಕ್ಷಾಂತರ ಬೈಟ್‌ಗಳು ಒಂದೆಡೆ ಸಂಗ್ರಹವಾಗುತ್ತವೆ. 2013ರಲ್ಲಿ ಸಂಗ್ರಹವಾಗಿದ್ದ ಒಟ್ಟು ಡೇಟಾದ ಪ್ರಮಾಣ 01 ಜೆಟಾಬೈಟ್‌ಗಳಾಗಿದ್ದವು (01 ಜೆಟಾಬೈಟ್=1ರ ಜೊತೆಗೆ 21 ಸೊನ್ನೆಗಳಷ್ಟು ಬೈಟ್‌ಗಳು). ಇದು 2020ರ ಹೊತ್ತಿಗೆ 40 ಜೆಟಾಬೈಟ್‌ಗಳಾಗುವ ನಿರೀಕ್ಷೆಯಿದ್ದರೆ, 2025ರಲ್ಲಿ ಈ ಪ್ರಮಾಣ 180 ಜೆಟಾಬೈಟ್‌ಗಳು ಆಗಬಹುದು ಆನ್ನಲಾಗಿದೆ.

ಭೂಗರ್ಭದಲ್ಲಿ ತೈಲ ಹೇಗೆ ಹುದುಗಿರುತ್ತದೋ ಹಾಗೇ ಈ ಡೇಟಾ ಅನ್ನೋ ತೈಲವು ಡೇಟಾ ಕೇಂದ್ರಗಳಲ್ಲಿ ಹುದುಗಿರುತ್ತದೆ. ಯಾರಿಗೆ ಎಷ್ಟು ಮತ್ತು ಯಾವ ರೀತಿ ಮಾಹಿತಿ ಬೇಕೋ ಅಷ್ಟನ್ನು ಡೇಟಾ ಮೈನಿಂಗ್ ಮೂಲಕ ಹೊರತೆಗೆದು ಸಂಸ್ಕರಿಸಿ ನೀಡುತ್ತಾರೆ.

ಆ್ಯಪ್‌ಗಳು ಬಹಳ ನಾಜೂಕಿನ ದಾರಿಗಳನ್ನು ಬಳಸಿ ತಮಗೆ ಬೇಕಾದ ಡೇಟಾ ಪಡೆಯುತ್ತವೆ. ಉದಾಹರಣೆಗೆ ನೀವು ಟ್ಯಾಕ್ಸಿ ಸೇವೆಯನ್ನು ಆ್ಯಪ್ ಮೂಲಕ ಬಳಸುತ್ತಿದ್ದೀರಿ ಎಂದಿಟ್ಟುಕೊಳ್ಳಿ. ನೀವು ಎಷ್ಟು ಬೇಗ ಆರ್ಡರ್ ಬುಕ್ ಮಾಡುವವರು ಎನ್ನುವ ಡೇಟಾ ಅದರಲ್ಲಿ ಮಿಳಿತವಾಗಿರುತ್ತದೆ. ನೀವು ದಿಢೀರ್ ನಿರ್ಧಾರ ತೆಗೆದುಕೊಳ್ಳುವ ಜನ ಎಂದಾದಲ್ಲಿ, ‘ಹೆಚ್ಚಿನ ದರದ ಸೇವೆಗೆ ತೋರಿಸುತ್ತದೆ’ ಮತ್ತು ನಿಮ್ಮ ಆತುರದ ವ್ಯಕ್ತಿತ್ವದ ಲಾಭವನ್ನು ಟ್ಯಾಕ್ಸಿ ಸೇವೆ ಒದಗಿಸುವ ಕಂಪೆನಿಗೆ ನೀಡುವುದರ ಜೊತೆಗೆ ತನ್ನ ಪಾಲಿನ ಸೇವಾ ದರವನ್ನು ಅದು ಪಡೆಯುತ್ತದೆ! ಕೃತಕ ಬುದ್ಧಿಮತ್ತೆಯ ಲಾಭ ಪಡೆದು ಕ್ಷಣಾರ್ಧದಲ್ಲಿ ತೋರಲ್ಪಟ್ಟ ದರವು ನಂತರ ಇಲ್ಲವಾಗಿ, ಇತರರ ಗಮನಕ್ಕೆ ಬರದಂತೆ ಆ್ಯಪ್ ನೋಡಿಕೊಳ್ಳುತ್ತದೆ! ಗ್ರಾಹಕ ಮತ್ತೆಲ್ಲಿಯೂ ಅದನ್ನು ಪ್ರಶ್ನಿಸುವಂತಿಲ್ಲ. ಅದೇ ರೀತಿಯಲ್ಲಿ ನೀವು ಅಳೆದೂ ಸುರಿದು ಬುಕ್ ಮಾಡುವ ಆಸಾಮಿ ಎಂದಾದರೆ, ಆ್ಯಪ್ ಇದನ್ನು ತನ್ನ ನೆನಪಿನಲ್ಲಿಟ್ಟುಕೊಂಡಿರುತ್ತದೆ. ನಿಮಗೆ ಅದು ಅತ್ಯಂತ ಕಡಿಮೆ ದರವನ್ನು ತೋರಿಸುತ್ತದೆ! ಒಟ್ಟಿನಲ್ಲಿ ನಿಮ್ಮನ್ನು ಸಂಪೂರ್ಣ ಅರ್ಥಮಾಡಿಕೊಳ್ಳುವ ಇವು ನಿಮ್ಮಿಂದ ಎಷ್ಟು ಲಾಭ ಪಡೆಯಲು ಸಾಧ್ಯವೋ ಅಷ್ಟು ಲಾಭ ಪಡೆದುಕೊಳ್ಳುತ್ತವೆ.

ಆ್ಯಪ್ ಲೋಕದ ನಾಜೂಕುತನಕ್ಕೆ ಇನ್ನೊಂದು ಉದಾಹರಣೆ ನೋಡಬಹುದು. ಹೊರದೇಶದ ಆ್ಯಪ್ ಒಂದು ಟ್ಯಾಕ್ಸಿ ಚಾಲಕರಿಗೆ ಚಾಲನೆಯನ್ನು ಸುಗಮಗೊಳಿಸಲು ಸಹಾಯ ಮಾಡುವುದಾಗಿ ಹೇಳುತ್ತದೆ. ಈ ಆ್ಯಪ್ ಕಾರ್ಯನಿರ್ವಹಿಸಬೇಕಾದರೆ ಚಾಲಕ ತನ್ನ ಸ್ಮಾರ್ಟ್ ಫೋನನ್ನು ಕಾರಿನ ಮುಂಭಾಗದ ಗಾಜಿನ ಬಳಿ ರಸ್ತೆ ಕಾಣುವಂತೆ ಇಡಬೇಕಾಗುತ್ತದೆ. ಆಗ ಅದು ರಸ್ತೆಯ ಸ್ಥಿತಿಗತಿ ಕುರಿತು ಮಾಹಿತಿಯನ್ನು ಚಾಲಕನಿಗೆ ನೀಡುತ್ತದೆ. ರಸ್ತೆಯ ಯಾವ ದಿಕ್ಕಿನಲ್ಲಿ ಗುಂಡಿಯಿದೆ, ಎಷ್ಟು ದೂರದಲ್ಲಿ ತಿರುವು ಇದೆ ಮತ್ತು ಸಂಚಾರ ದಟ್ಟಣೆಯು ರಸ್ತೆಯ ಯಾವ ಹಂತದಲ್ಲಿದೆ ಎನ್ನುವುದರ ಜೊತೆಗೆ ಬದಲೀ ಮಾರ್ಗಗಳ್ಯಾವುವು ಮುಂತಾದ ಮಾಹಿತಿ ಲಭ್ಯವಾಗುವುದರಿಂದ ಚಾಲಕನಿಗೆ ಒಂದಿಷ್ಟು ಆರಾಮ. ಇಂತಹ ಒಳ್ಳೆಯ ಕಾರ್ಯವನ್ನು ಮಾಡುವ ಈ ಆ್ಯಪ್ ಹಣ ಮಾಡುವುದು ಭಿನ್ನ ರೀತಿಯಲ್ಲಿ. ಚಾಲಕನ ಚಾಲನೆಯ ಗುಣಮಟ್ಟದ ಮಾಹಿತಿಯನ್ನು ಅದು ವಿಮಾ ಕಂಪೆನಿಗಳಿಗೆ ಮಾರಿಕೊಳ್ಳುತ್ತದೆ. ಈ ಮಾಹಿತಿಯ ಆಧಾರದ ಮೇಲೆ ವಿಮಾ ಕಂಪೆನಿಗಳು ನಿರ್ದಿಷ್ಟ ಚಾಲಕನಿಗೆ ಭಿನ್ನವಾದ ಪ್ರೀಮಿಯಂ ಹಣವನ್ನು ನಿಗದಿಪಡಿಸುತ್ತವೆ!

ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನದ ಜಮಾನ

ದಿನೇ ದಿನೇ ಶಕ್ತಿ ಪಡೆಯುತ್ತಾ ಸಾಗುತ್ತಿರುವ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಡೇಟಾ ಮೈನಿಂಗ್ ಕಾರ್ಯ ವನ್ನು ಸಾಕಷ್ಟು ಆಕರ್ಷಕವಾಗಿಸುತ್ತಿದೆ. ಇಂದು ಕಾರು ಬೈಕ್‌ಗಳಿಂದ ಹಿಡಿದು, ಟೀವಿ ಮಿಕ್ಸ್‌ರ್‌ಗಳವರೆಗೆ ಎಲ್ಲವೂ ಕೃತಕ ಬುದ್ಧಿಮತ್ತೆಯನ್ನು ಹೊಂದಿರುವ ಉಪಕರಣಗಳಾಗಿವೆ. ಇಂಟರ್‌ನೆಟ್ ಸಂಪರ್ಕ ಸಿಕ್ಕೊಡನೆಯೇ ಮನೆಯಲ್ಲಿರುವ ಮಿಕ್ಸ್‌ರ್ ಕೂಡ ತನ್ನಲ್ಲಿ ಸಂಗ್ರಹವಾಗಿರುವ ಡೇಟಾವನ್ನು ಡೇಟಾ ಸಂಗ್ರಹಾಗಾರಕ್ಕೆ ವರ್ಗಾಯಿಸುತ್ತದೆ! ಸ್ಮಾರ್ಟ್ ಟೀವಿಗಳು ಮನೆಯಲ್ಲಿರುವ ಎಲ್ಲಾ ಉಪಕರಣಗಳ ದತ್ತಾಂಶವನ್ನು ಒಂದೆಡೆ ಸೇರಿಸಿ ಡೇಟಾ ಸಂಗ್ರಹಾಗಾರಕ್ಕೆ ಸಾಗಿಸುವ ಸಾಮರ್ಥ್ಯವನ್ನು ಪಡೆದಿವೆ!

ಇಂತಹ ಕೃತಕ ಬುದ್ಧಿಮತ್ತೆಯ ಜ್ಞಾನವನ್ನು ತಮ್ಮೆಲ್ಲಾ ಉತ್ಪನ್ನಗಳಲ್ಲಿ ಬಳಸುವ ಕಾರಣಕ್ಕೆ ಕೆಲವು ಕಂಪೆನಿಗಳು ಬಿಲಿಯನ್ ಡಾಲರ್‌ಗಳಲ್ಲಿ ಲೆಕ್ಕಹಾಕಬಹುದಾದ ‘ಆಸ್ತಿಯನ್ನು’ ಹೊಂದಿರುವಂತೆ ಕಾಣುತ್ತವೆ. ಉದಾಹರಣೆಗೆ ಟೆಸ್ಲಾ ಎನ್ನುವ ಕಾರು ಕಂಪೆನಿಯು ಚಾಲಕರಹಿತ ಕಾರುಗಳ ತಯಾರಿಕೆಯಲ್ಲಿ ನಿರತವಾಗಿದೆ. ಐದಾರು ವರ್ಷಗಳಷ್ಟು ಹಳೆಯದಾದ ಮತ್ತು ಕೆಲವೇ ಕೆಲವು ಲಕ್ಷ ಡಾಲರ್‌ಗಳಲ್ಲಿ ವಹಿವಾಟು ನಡೆಸಿರುವ ಈ ಕಂಪೆನಿಯ ಮೌಲ್ಯವು ಈಗ ಒಂದು ಶತಮಾನವನ್ನು ಪೂರೈಸುತ್ತಿರುವ ‘ಫೋರ್ಡ್’ ಕಂಪೆನಿಗಿಂತಲೂ ಹೆಚ್ಚು ಬೆಲೆಬಾಳುತ್ತದೆ. ಇದಕ್ಕೆ ಮುಖ್ಯ ಕಾರಣ ಚಾಲಕರಹಿತ ಕಾರುಗಳು ಸೃಷ್ಟಿಸಿರುವ ಅಪಾರವಾದ ಡೇಟಾವನ್ನು ಈ ಕಂಪೆನಿ ಹೊಂದಿದೆ ಎನ್ನುವುದು! ಹಾಗೆಯೇ ಅಮೆರಿಕದಲ್ಲಿ ಹರಾಜಿಗೆ ಬಂದಿದ್ದ ಜೂಜು ಸೇವೆಗಳನ್ನು ನೀಡುವ ಕಂಪೆನಿಯೊಂದು ಬಿಲಿಯನ್ ಲೆಕ್ಕದಲ್ಲಿ ಮಾರಾಟವಾಗಿಬಿಟ್ಟಿದೆ. ಇದಕ್ಕೆ ಕಾರಣ ಅದರ ಬಳಿ ಹದಿನೈದು ಮಿಲಿಯನ್‌ಗೂ ಹೆಚ್ಚು ಜೂಜುಕೋರ ಗ್ರಾಹಕರ ವೈಯಕ್ತಿಕ ಮಾಹಿತಿಗಳಿದ್ದವು ಎನ್ನುವ ಕಾರಣಕ್ಕೆ.

ದತ್ತಾಂಶದ ಶಕ್ತಿಯಿದು!

ಡೇಟಾ ವಸಾಹತುಶಾಹಿ ವ್ಯವಸ್ಥೆ

ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಇಂಟರ್‌ನೆಟ್ ಸೇವೆ ನೀಡುತ್ತಿರುವ ಗೂಗಲ್‌ನಂತಹ ಕಂಪೆನಿಗಳು ಗ್ರಾಹಕರಿಂದ ಪಡೆಯುವ ಡೇಟಾವನ್ನು ಸಂಗ್ರಹಿಸಿಟ್ಟಿರುವುದು ಅಮೆರಿಕದ ಕೇಂದ್ರಗಳಲ್ಲಿ. ಒಮ್ಮೆ ದತ್ತಾಂಶ ನಮ್ಮ ನೆಲವನ್ನು ಬಿಟ್ಟು ಹೊರಟ ಮೇಲೆ ಅದರ ಮೇಲಿನ ಹಕ್ಕು ನಮ್ಮ ದೇಶಕ್ಕೆ ಇಲ್ಲವಾಗುತ್ತದೆ! ಗ್ರಾಹಕನ ಮಾತಿರಲಿ ಸರಕಾರಗಳ ಮಾತನ್ನೇ ಕೇಳುವ ಹಂಗಿನಲ್ಲಿ ಈ ಕಂಪೆನಿಗಳಿರುವುದಿಲ್ಲ. ಬಿಲಿಯನ್ ಗಟ್ಟಲೆ ಹಣ ಸುರಿಯುವ ಸಾಮರ್ಥ್ಯವಿರುವ ಈ ಕಂಪೆನಿಗಳು ಆಧುನಿಕ ವಸಾಹತು ಪ್ರತಿನಿಧಿಗಳು! ದೂರದ ದೇಶದಲ್ಲಿ ತಮ್ಮ ಡೇಟಾ ಕೇಂದ್ರಗಳನಿಟ್ಟುಕೊಂಡು ಕಾನೂನಿನ ಬಾಹುಗಳಿಗೆ ಸಿಕ್ಕಿಕೊಳ್ಳದಂತೆ ತಪ್ಪಿಸಿಕೊಳ್ಳುತ್ತವೆ. ಇದನ್ನೇ ನಂದನ್ ನಿಲೇಕಣಿ ಅವರು ‘ಡೇಟಾ ವಸಾಹತೀಕರಣ’ ಎನ್ನುತ್ತಿರುವುದು.

ಡೇಟಾ ಆಧಾರಿತ ಅರ್ಥವ್ಯವಸ್ಥೆಯನ್ನು ‘ಇನ್‌ಫೋನಾಮಿಕ್ಸ್’ ಎನ್ನಲಾಗುತ್ತದೆ. ಈ ವ್ಯವಸ್ಥೆಯಲ್ಲಿ ಅತ್ಯಂತ ಬೆಲೆಬಾಳುವ ಸಂಪ ನ್ಮೂಲವೆಂದರೆ ಡೇಟಾ. ಯಾರ ಬಳಿ ಈ ಸಂಪನ್ಮೂಲದ ನಿಯಂತ್ರಣ ವಿರುತ್ತದೋ ಅವರೇ ಶಕ್ತಿಶಾಲಿ. ನಮ್ಮ ದೇಶದ ಡೇಟಾ ಪರದೇಶದ ಡೇಟಾ ಕೇಂದ್ರಗಳಲ್ಲಿರುವುದರಿಂದ ಸಂಪೂರ್ಣ ನಿಯಂತ್ರಣ ಪರಕೀಯರ ಕೈಯಲ್ಲಿರುತ್ತದೆ. ಹಾಗಾಗಿ ಇದು 21ನೆ ಶತಮಾನದ ನವವಸಾಹತೀಕರಣ. ಮತ್ತದೇ ಡಿಜಿಟಲ್ ಗುಲಾಮಗಿರಿ ಭಾರತದಂತಹ ದೇಶಕ್ಕೆ ಕಟ್ಟಿಟ್ಟ ಬುತ್ತಿಯಾಗುತ್ತದೆ! ಡೇಟಾ ಮೇಲೆ ನಿಯಂತ್ರಣ ಸಾಧಿಸುವ ನಿಟ್ಟಿನಲ್ಲಿ ಉಂಟಾಗಿರುವ ಪೈಪೋಟಿಯ ಕಾರಣದಿಂದಲೇ ಇಂದು ದೂರವಾಣಿ ಸೇವೆಗಳು ಉಚಿತದ ಅಂಚಿನಲ್ಲಿ ಓಡಾಡುತ್ತಿರು ವುದು. ಸ್ಮಾರ್ಟ್ ಫೋನ್‌ಗಳ ಮೂಲಕ ವ್ಯವಹಾರ ಹೆಚ್ಚಾದಷ್ಟು ಡೇಟಾ ಸಂಗ್ರಹದ ವ್ಯಾಪ್ತಿ ಹಿಗ್ಗುತ್ತದೆ. ತನ್ಮೂಲಕ ದೂರವಾಣಿ ಸೇವೆ ಒದಗಿಸುವ ಕಂಪೆನಿಗೆ ಡೇಟಾ ಮೈನಿಂಗ್‌ಗೆ ವಿಫುಲವಾದ ಅವಕಾಶಗಳನ್ನು ಇದು ನೀಡುತ್ತದೆ. ತನ್ನ ಬಳಿ ಲಭ್ಯವಿರುವ ಡೇಟಾವನ್ನು ಗ್ರಾಹಕ ಕಂಪೆನಿಗಳ ಅಗತ್ಯಕ್ಕೆ ತಕ್ಕಂತೆ ಗಣಿಗಾರಿಕೆ ನಡೆಸಿ ದೂರವಾಣಿ ಕಂಪೆನಿಗಳು ಲಾಭ ಮಾಡಿಕೊಳ್ಳುತ್ತವೆ! ತಜ್ಞರ ಪ್ರಕಾರ ಆದಷ್ಟು ಡೇಟಾ ಸಂಗ್ರಹಿಸುವ ದೃಷ್ಟಿಯಿಂದ ಒಂದಲ್ಲ ಒಂದು ಉಚಿತ ಸೇವೆಯ ಆಮಿಷವೊಡ್ಡಿ ಗ್ರಾಹಕನ ಡಿಜಿಟಲ್ ಹೆಜ್ಜೆಗಳು ತನ್ನ ವ್ಯಾಪ್ತಿಯಲ್ಲೇ ಜಾಸ್ತಿ ಮೂಡುವಂತೆ ಇವು ನೋಡಿಕೊಳ್ಳುತ್ತಿವೆ. ಹಾಗಾಗಿ ಉಚಿತ ಎನ್ನುವುದು ಉಚಿತವಾಗಿರದೆ, ದೊಡ್ಡದೊಂದು ವ್ಯಾಪಾರದ ಆರಂಭವಾಗಿರುತ್ತದೆ!

ಡೇಟಾ ಮೈನಿಂಗ್‌ನ ನಿಯಂತ್ರಣದ ದಾರಿಗಳು:

ಇಂದಿನ ಸ್ಥಿತಿಯಲ್ಲಿ ಡೇಟಾ ಮೈನಿಂಗ್ ಕಾರ್ಯವನ್ನು ಆರೋಗ್ಯಕರ ರೀತಿಯಲ್ಲಿ ನಿಯಂತ್ರಿಸಲು ಬೇಕಾದ ತಯಾರಿಗಳು ಪೂರ್ಣವಾಗಿ ಆಗಿಲ್ಲ. ಅದರಲ್ಲೂ ನಮ್ಮ ದೇಶದಲ್ಲಿ ಈ ಕುರಿತು ಖಚಿತ ನಿಲುವು ಗಳು ಇನ್ನೂ ಮೂಡಿಲ್ಲ. ಚೀನ ದೇಶ ಕೆಲವು ತಿಂಗಳ ಹಿಂದೆ ಡೇಟಾ ಮೈನಿಂಗ್ ತೀವ್ರತೆಯನ್ನು ಅರಿತುಕೊಂಡು ಹೊಸದೊಂದು ನಿಯಮ ರಚಿಸಿದೆ. ಇಂಟರ್‌ನೆಟ್ ಆಧಾರಿತ ಸೇವೆ ನೀಡುವ ಎಲ್ಲಾ ಕಂಪೆನಿಗಳು ತಮ್ಮ ಡೇಟಾ ಸಂಗ್ರಾಹಾಗಾರಗಳನ್ನು ಚೀನಾದಲ್ಲೇ ಸ್ಥಾಪಿಸಬೇಕು ಎಂಬ ನಿಯಮವನ್ನು ಜಾರಿಗೆ ತಂದಿದೆ. ಚೀನಾದ ಸರಕಾರವನ್ನು ಎದುರು ಹಾಕಿಕೊಂಡರೆ ದೊಡ್ಡ ಮಾರುಕಟ್ಟೆಯನ್ನು ಕಳೆದುಕೊಳ್ಳುವ ಭೀತಿಯಿಂದ ಕಂಪೆನಿಗಳು ಡೇಟಾ ಸಂಗ್ರಾಹಾಗಾ ರಗಳನ್ನು ಅಲ್ಲಿಯೇ ಸ್ಥಾಪಿಸಿವೆ. ಹೀಗಾಗಿ ತನ್ನ ನೆಲದ ಮೇಲಿರುವ ದತ್ತಾಂಶದ ಮೇಲೆ ಪೂರ್ಣ ಹಿಡಿತ ಸಾಧಿಸಲು ಚೀನಾ ದೇಶಕ್ಕೆ ಅವಕಾಶವಾಗಿದೆ. ಅದಲ್ಲದೆ ಮತ್ತೊಂದು ದಾರಿಯ ಮೂಲಕ ಈ ದೇಶ ಡೇಟಾ ಮೇಲಿನ ತನ್ನ ನಿಯಂತ್ರಣ ಸಾಧಿಸುತ್ತಿದೆ. ಸ್ಥಳೀಯ ಕಂಪೆನಿಗಳ ಜಾಲವನ್ನೇ ಹೆಚ್ಚು ಬಳಸುವಂತೆ ಜನರ ಮೇಲೆ ಒತ್ತಡ ಹೇರಿ, ಸೃಷ್ಟಿಯಾಗುವ ಡಿಜಿಟಲ್ ಹೆಜ್ಜೆಗಳ ಹೆಚ್ಚಿನಂಶ ತನ್ನ ವಶದಲ್ಲೇ ಇರುವಂತೆ ನೋಡಿಕೊಳ್ಳುತ್ತಿದೆ.

ಡೇಟಾ ಮೈನಿಂಗ್ ಕಾರ್ಯವನ್ನು ನಿಯಂತ್ರಣಗಳ ವ್ಯಾಪ್ತಿಗೆ ತರಲೇಬೇಕಾದ ಅನಿವಾರ್ಯತೆ ಸರಕಾರಗಳಿಗೆ ಇದೆ. ಅನಿಯಂತ್ರಿತ ಡೇಟಾ ಮೈನಿಂಗ್ ದೇಶದ ಸುರಕ್ಷತೆಗೆ, ಜನರ ಖಾಸಗಿತನಕ್ಕೆ ಹಾಗೂ ಆರ್ಥಿಕತೆಗೆ ದೊಡ್ಡ ಅಪಾಯವನ್ನು ತರಲಿದೆ. ಇದಕ್ಕೆ ತಜ್ಞರು ಅನೇಕ ಪರಿಹಾರದ ದಾರಿಗಳನ್ನು ಸೂಚಿಸುತ್ತಾರೆ.

ಡೇಟಾವನ್ನು ‘ರಾಷ್ಟ್ರೀಕರಣಗೊಳಿಸುವುದು’ ಅದರಲ್ಲಿ ಒಂದು ವಿಧಾನ.

ದೇಶದಲ್ಲಿ ಎಲ್ಲಾ ಬಳಕೆದಾರರು ಸೃಷ್ಟಿಸುವ ಡಿಜಿಟಲ್ ಗುರುತು ಗಳನ್ನು ಸಂಗ್ರಹಿಸುವ ಕಂಪೆನಿಗಳು ಸಂಗ್ರಹಿತ ಡೇಟಾವನ್ನು ಸರಕಾರದ ‘ಸಂಗ್ರಹಾಗರಕ್ಕೆ ಒಪ್ಪಿಸುವುದು ಕಡ್ಡಾಯ’ ಎನ್ನುವ ಕಾನೂನು ತರುವುದು. ಮಾರುಕಟ್ಟೆಯ ಅಗತ್ಯಕ್ಕೆ ತಕ್ಕಂತೆ ತಾನೇ ಡೇಟಾ ಮೈನಿಂಗ್ ನಡೆಸಿ, ಮಾಹಿತಿಯನ್ನು ಸರಕಾರ ಮಾರಾಟ ಮಾಡಬಹುದು ಇಲ್ಲವೇ ಡೇಟಾ ಮೈನಿಂಗ್‌ಗೆ ಮುಕ್ತ ಅವಕಾಶವನ್ನು ಎಲ್ಲರಿಗೂ ನೀಡಬಹುದು. ಇದರಿಂದ ಡಿಜಿಟಲ್ ಗುರುತುಗಳು ದೇಶದ ಗಡಿಯನ್ನು ದಾಟುವುದಿಲ್ಲ ಹಾಗೂ ಅದರ ಮೇಲೆ ಸಂಪೂರ್ಣ ನಿಯಂತ್ರಣ ಸರಕಾರದ ವಶದಲ್ಲಿರುತ್ತದೆ. ಇದನ್ನು ಜಾರಿಗೊಳಿ ಸಲು ಅನೇಕ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಗಳು ಮತ್ತು ಗ್ಯಾಟ್ ಅಥವಾ ಡಬ್ಲುಟಿಒ ವ್ಯಾಪಾರಿ ಒಪ್ಪಂದಗಳು ಅಡ್ಡಿಯಾಗುತ್ತವೆ. ಹಾಗಾಗಿ ತುಂಬ ಎಚ್ಚರದ ಹೆಜ್ಜೆಗಳನ್ನು ಹಾಕಬೇಕಾಗುತ್ತದೆ. ಅಲ್ಲದೆ ಅಪರಿಮಿತ ಹಣಕಾಸು ಪ್ರಭಾವ ಹೊಂದಿರುವ ಈ ಕಂಪೆನಿಗಳನ್ನು ಕಟ್ಟಿಹಾಕುವ ರಾಜಕೀಯ ಇಚ್ಛಾಶಕ್ತಿಯೂ ಬೇಕಾಗುತ್ತದೆ.

‘ಡೇಟಾ ಎಲ್ಲರಿಗೂ ಉಚಿತ’ ಎಂದು ಕಾನೂನು ಮಾಡುವುದು ಎರಡನೇ ಮಾರ್ಗ. ಯಾವುದೇ ದೇಶದಲ್ಲಿ ಸೃಷ್ಟಿಯಾಗುವ ಡಿಜಿಟಲ್ ಗುರುತುಗಳ ಎಲ್ಲರಿಗೂ ಉಚಿತವಾಗಿ ಲಭ್ಯ ಎನ್ನುವ ಕಾನೂನು ಜಾರಿಯಾಗ ಬೇಕು. ಇದರಿಂದ ಯಾವುದೋ ಒಂದು ಕಂಪೆನಿಯು ಏಕಸ್ವಾಮ್ಯತೆ ಯನ್ನು ಸಾಧಿಸುವುದು ತಪ್ಪುತ್ತದ

Writer - ಸದಾನಂದ. ಆರ್

contributor

Editor - ಸದಾನಂದ. ಆರ್

contributor

Similar News