ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡದಿದ್ದರೆ ಏನಾಗುತ್ತದೆ?

Update: 2017-10-15 10:09 GMT

ನಿಮ್ಮ ಬ್ಯಾಂಕ್ ಖಾತೆಯನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಮಾಡುವಂತೆ ನಿಮ್ಮ ಮೊಬೈಲ್‌ಗೆ ಬ್ಯಾಂಕುಗಳಿಂದ ಈಗಾಗಲೇ ಎಸ್‌ಎಂಎಸ್‌ಗಳು ಬಂದಿರಬಹುದು. ಆಧಾರ್ ಅನ್ನು ಬ್ಯಾಂಕ್ ಖಾತೆಯೊಂದಿಗೆ ಜೋಡಣೆ ಮಾಡದಿದ್ದರೆ ಏನಾಗುತ್ತದೆ ಎನ್ನುವುದು ಈಗ ಹೆಚ್ಚಿನವರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ.

ಬ್ಯಾಂಕ್ ಖಾತೆಯನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಮಾಡಲು ಸರಕಾರವು ಈ ವರ್ಷದ ಡಿ.31ನ್ನು ಕೊನೆಯ ದಿನಾಂಕವನ್ನಾಗಿ ನಿಗದಿಗೊಳಿಸಿದೆ. ಇದಕ್ಕೆ ಮುನ್ನ ಆಧಾರ ಜೋಡಣೆ ಮಾಡದಿದ್ದರೆ ನಿಮ್ಮ ಬ್ಯಾಂಕ್ ನಿಮ್ಮ ಖಾತೆಯನ್ನು ನಿಷ್ಕ್ರಿಯಗೊಳಿಸು ವುದಿಲ್ಲ. ಬ್ಯಾಂಕುಗಳು ಆಧಾರ್ ಇಲ್ಲದೆ ಹೊಸ ಖಾತೆಗಳನ್ನು ತೆರೆಯುತ್ತಿಲ್ಲ ಮತ್ತು ಈ ವರೆಗೆ ಆಧಾರ್‌ನ್ನು ತಮ್ಮ ಖಾತೆಗಳಿಗೆ ಜೋಡಣೆ ಮಾಡದವರಿಗೆ ನಿರಂತರವಾಗಿ ಆ ಬಗ್ಗೆ ನೆನಪಿಸುತ್ತಲೇ ಇವೆ.

ಆಧಾರ ಅಕ್ರಮವಲ್ಲ ಮತ್ತು ಖಾಸಗಿತನ ಅಂತಿಮವಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಈಗಾಗಲೇ ಸ್ಪಷ್ಟಪಡಿಸಿದೆ. ಆದರೂ ಮುಂದಿನ ತಿಂಗಳು ಹೊರಬೀಳಲಿರುವ ತೀರ್ಪು ಆಧಾರ್ ಅನ್ನು ಕಡ್ಡಾಯಗೊಳಿಸುವುದು ಶಾಸನಬದ್ಧವೇ ಎನ್ನುವುದನ್ನು ಇನ್ನಷ್ಟೇ ಸ್ಪಷ್ಟಪಡಿಸಬೇಕಿದೆ. ಹೀಗಾಗಿ ಸರಕಾರವು ತನ್ನದೇ ಆದ ಮಾರ್ಗದಲ್ಲಿ ಸಾಗಿದರೆ ಆಧಾರ್‌ನೊಂದಿಗೆ ಜೋಡಣೆಯಾಗಿರದ ಬ್ಯಾಂಕ್ ಖಾತೆಗಳು ನಿಷ್ಕ್ರಿಯಗೊಳ್ಳಲಿವೆ.

ಹೀಗೆ ನಿಷ್ಕ್ರಿಯಗೊಂಡ ಬ್ಯಾಂಕ್ ಖಾತೆಯನ್ನು ಅಗತ್ಯ ದಾಖಲೆಗಳನ್ನು ಸಲ್ಲಿಸುವ ಮತ್ತು ಅದನ್ನು ಆಧಾರ್‌ನೊಂದಿಗೆ ಜೋಡಣೆಗೊಳಿಸುವ ಮೂಲಕ ಮತ್ತೆ ಕ್ರಿಯಾಶೀಲ ಗೊಳಿಸಲು ಸಾಧ್ಯವಿದೆ. ಆದರೆ ಇದು ಎಷ್ಟು ಸಮಯವನ್ನು ತೆಗೆದುಕೊಳ್ಳಲಿದೆ ಎನ್ನುವುದು ಸ್ಪಷ್ಟವಿಲ್ಲ.

ಹಾಗಂತ ಡಿ.31ರೊಳಗೆ ಆಧಾರ್ ಜೋಡಣೆಯಾಗದಿದ್ದರೆ ಎಲ್ಲ ಬ್ಯಾಂಕ್ ಖಾತೆ ಗಳೂ ನಿಷ್ಕ್ರಿಯಗೊಳ್ಳುವುದಿಲ್ಲ. ಸಣ್ಣ ಖಾತೆಗಳನ್ನು ಆಧಾರ್ ಇಲ್ಲದೆಯೂ ತೆರೆಯಬಹು ದಾದ್ದದರಿಂದ ಇವುಗಳಿಗೆ ಕಡ್ಡಾಯ ಆಧಾರ್ ಜೋಡಣೆಯಿಂದ ವಿನಾಯಿತಿ ನೀಡಲಾಗಿದೆ.

ಅಂದ ಹಾಗೆ ಈ ಸಣ್ಣಖಾತೆ ಎಂದರೆ ಯಾವುದು ಎಂಬ ಪ್ರಶ್ನೆ ಹಲವರಲ್ಲಿ ಮೂಡಬಹುದು.

ಒಂದು ಹಣಕಾಸು ವರ್ಷದಲ್ಲಿ ಖಾತೆಯಲ್ಲಿ ಒಟ್ಟು ಠೇವಣಿಗಳ ಮೊತ್ತ ಒಂದು ಲಕ್ಷ ರೂ.ಗಳನ್ನು ಮೀರದ, ಒಂದು ತಿಂಗಳಲ್ಲಿ ಒಟ್ಟು ಹಿಂದೆಗೆತಗಳು ಮತ್ತು ಹಣ ವರ್ಗಾವಣೆಯ ಮೊತ್ತ 10,000 ರೂ.ಗಳನ್ನು ಮೀರದ ಮತ್ತು ಯಾವುದೇ ಸಮಯದಲ್ಲಿ ಶಿಲ್ಕು ಹಣ 50,000 ರೂ.ಗಳನ್ನು ಮೀರದ ಖಾತೆಗಳು ಸಣ್ಣ ಖಾತೆಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News