ಅರ್ಹತಾ ಪಟ್ಟಿ ಪ್ರಕಟ
ಬೆಂಗಳೂರು, ಅ.17: ರಾಜ್ಯ ಲೋಕಸೇವಾ ಆಯೋಗವು ಮೇ 7ರಂದು ನಡೆಸಿದ ಅಬಕಾರಿ ಇಲಾಖೆಯಲ್ಲಿನ 51 ಅಬಕಾರಿ ರಕ್ಷಕರು (ಮಹಿಳೆ) ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳ ಅರ್ಹತೆಯ ಆಧಾರದ ಮೇಲೆ ಹಾಗೂ ಅವರ ಮೀಸಲಾತಿಗಳಿಗೆ ಅನುಗುಣವಾಗಿ 1:5 ರ ಅನುಪಾತದಲ್ಲಿ ಅರ್ಹರಾದ ಅಭ್ಯರ್ಥಿಗಳ ಹೆಸರು, ನೋಂದಣಿ ಸಂಖ್ಯೆಯುಳ್ಳ ಅರ್ಹತಾ ಪಟ್ಟಿಯನ್ನು ಆಯೋಗದ ಅಂತರ್ಜಾಲದಲ್ಲಿ ಪ್ರಕಟಿಸಿದೆ.
ಈ ಅಭ್ಯರ್ಥಿಗಳ ದೇಹದಾರ್ಢ್ಯ ಮತ್ತು ಸಾಮರ್ಥ್ಯ ಪರೀಕ್ಷೆ ನಡೆಸಲು ಜಿಲ್ಲಾವಾರು ಅರ್ಹತಾ ಪಟ್ಟಿಯನ್ನು ಅಬಕಾರಿ ಆಯುಕ್ತರಿಗೆ ಕಳುಹಿಸಿಕೊಡಲಾಗುವುದು. ಈ ಬಗ್ಗೆ ಅಭ್ಯರ್ಥಿಗಳಿಗೆ ಸಂಬಂಧಿತ ಪ್ರಾಧಿಕಾರಿಗಳಾದ ಪ್ರತಿ ಜಿಲ್ಲೆಯ ಅಬಕಾರಿ ಉಪ ಆಯುಕ್ತರಿಂದ ವೈಯಕ್ತಿಕವಾಗಿ ದೇಹದಾರ್ಢ್ಯ ಪರೀಕ್ಷೆಗೆ ಹಾಜರಾಗಲು ಸೂಚನಾ ಪತ್ರಗನ್ನು ಕಳುಹಿಸಿಕೊಡಲಾಗುವುದು.
ಸೂಚನಾ ಪತ್ರ ಸ್ವೀಕೃತವಾದ ನಂತರ ದೇಹದಾರ್ಢ್ಯ ಪರೀಕ್ಷೆಗೆ ಹಾಜರಾಗುವಂತೆ ಸಂಬಂಧಿತ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ ಎಂದು ರಾಜ್ಯ ಲೋಕಸೇವಾ ಆಯೋಗದ ಪ್ರಕಟನೆ ತಿಳಿಸಿದೆ.