×
Ad

ಬೆಂಗಳೂರು: ವಿವಿಧಡೆ ಕಳವು

Update: 2017-10-17 18:50 IST

ಬೆಂಗಳೂರು, ಅ.17: ನಗರದಲ್ಲಿ ಮೂರು ಕಡೆ ಮನೆಗಳ್ಳತನ ಹಾಗೂ ಎರಡು ಕಡೆ ಅಂಗಡಿಗಳಿಗೆ ನುಗ್ಗಿ ನಗನಾಣ್ಯ ದೋಚಿರುವ ಘಟನೆ ನಡೆದಿದೆ.

ಸುದ್ದ ಗುಂಟೆಪಾಳ್ಯ: ಹಾಡಹಗಲೇ ಮನೆಯ ಬೀಗ ಮುರಿದು ಒಳ ನುಗ್ಗಿದ ದುಷ್ಕರ್ಮಿಗಳು 250 ಗ್ರಾಂ ಆಭರಣ ಹಾಗೂ ಹಣವನ್ನು ಕಳವು ಮಾಡಿದ್ದಾರೆ. ಬಾಲಾಜಿ ಲೇಔಟ್‌ನ 1ನೆ ಕ್ರಾಸ್, 1ನೆ ಮುಖ್ಯರಸ್ತೆ ನಿವಾಸಿ ರವಿಚಂದ್ರನ್ ಎಂಬವರು ಸೋಮವಾರ ಬೆಳಗ್ಗೆ 9:30ರಲ್ಲಿ ಹೊರಗೆ ಹೋಗಿದ್ದು, ಮಧ್ಯಾಹ್ನ 1:30ರಲ್ಲಿ ವಾಪಸ್ ಬರುವಷ್ಟರಲ್ಲಿ ಕಳ್ಳತನ ನಡೆದಿದೆ ಎನ್ನಲಾಗಿದೆ.

ಬೆಳ್ಳಂದೂರು: ಬಸವನಹಳ್ಳಿಯ 5ನೆ ಹಂತದ ನಿವಾಸಿ ಸೈಯ್ಯದ್ ಎಂಬವರು ಊರಿಗೆ ಹೋಗಿದ್ದಾಗ ಇವರ ಮನೆಯ ಬೀಗ ಒಡೆದು ಒಳ ನುಗ್ಗಿ ಚಿನ್ನಾಭರಣ ಕಳವು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಕೆ.ಆರ್.ಪುರ: ಪಾರ್ವತಿಪುರದ 1ನೆ ಮುಖ್ಯರಸ್ತೆ, 2ನೆ ಕ್ರಾಸ್ ನಿವಾಸಿ ಭಾಗ್ಯ ಎಂಬವರು ಕಾರ್ಯ ನಿಮಿತ್ತ ಸೋಮವಾರ ಬೆಳಗ್ಗೆ ಮನೆಗೆ ಬೀಗ ಹಾಕಿಕೊಂಡು ಹೊರಗೆ ಹೋಗಿದ್ದಾಗ ದುಷ್ಕರ್ಮಿಗಳು ಮನೆಗೆ ನುಗ್ಗಿ ಕಳವು ಮಾಡಿದ್ದಾರೆ. ಈ ಸಂಬಂಧ ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಹನುಮಂತನಗರ: ಶ್ರೀನಿವಾಸ್‌ನಗರದ 13ನೆ ಮುಖ್ಯರಸ್ತೆಯಲ್ಲಿ ದೇವರಾಜ್ ಎಂಬುವರಿಗೆ ಸೇರಿದ ಅಂಗಡಿಯ ಬೀಗ ಒಡೆದು ಒಳನುಗ್ಗಿ 20 ಸಾವಿರ ನಗದು ಕಳವು ಮಾಡಿದ್ದಾರೆ ಎನ್ನಲಾಗಿದೆ. ಅದೇ ರೀತಿ, ಕೆಂಗೇರಿಯ ಮೇಲಸಂದ್ರದ ಬಿಡಿಎ ಕಾಂಪ್ಲೆಕ್ಸ್‌ನಲ್ಲಿ ವೆಂಕಟೇಶ್ ಎಂಬವರಿಗೆ ಸೇರಿದ ನಂದಿನಿ ಹಾಲಿನ ಭೂತ್ ರೋಲಿಂಗ್ ಶೆಟರ್ ಮೀಟಿ ನಗದು ಕಳವು ಮಾಡಲಾಗಿದೆ.

ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News