10 ಕೋಟಿ ರೂ. ಖರ್ಚು ಅರ್ಥಹೀನ: ಉಪ ಸಭಾಪತಿ ಮರಿತಿಬ್ಬೇಗೌಡ

Update: 2017-10-17 16:24 GMT

ಬೆಂಗಳೂರು, ಅ. 17: ವಿಧಾನಸೌಧದ ವಜ್ರ ಮಹೋತ್ಸವ ಸಮಾರಂಭಕ್ಕೆ 10 ಕೋಟಿ ರೂ.ವೆಚ್ಚ ಮಾಡುವ ಬಗ್ಗೆ ವರದಿಯಾಗಿದ್ದು, ಅಷ್ಟೊಂದು ಮೊತ್ತದ ಖರ್ಚು ಮಾಡುವುದು ಅರ್ಥಹೀನ ಎಂದು ವಿಧಾನ ಪರಿಷತ್ ಉಪ ಸಭಾಪತಿ ಮರಿತಿಬ್ಬೇಗೌಡ ಟೀಕಿಸಿದ್ದಾರೆ.

ಯಾವ ಶಾಸಕರಿಗೂ, ಅಧಿಕಾರಿಗಳಿಗೂ ಚಿನ್ನ, ಬೆಳ್ಳಿ ಉಡುಗೊರೆಯನ್ನು ಹಾಗೂ ಐಷಾರಾಮಿ ಊಟೋಪಚಾರವನ್ನು ಅಪೇಕ್ಷಿಸುವುದಿಲ್ಲ. ಅತ್ಯಂತ ಸರಳವಾಗಿ, ಅತ್ಯಂತ ಕಡಿಮೆ ಖರ್ಚಿನಲ್ಲಿ ಸಮಾರಂಭ ಆಚರಣೆ ಮಾಡಲು ಕಟಿಬದ್ಧರಾಗಿ ತೀರ್ಮಾನ ಕೈಗೊಳ್ಳಬೇಕು ಎಂದು ಮರಿತಿಬ್ಬೇಗೌಡ, ಸಿಎಂ ಸಿದ್ದರಾಮಯ್ಯರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಸತತ ನಾಲ್ಕು ವರ್ಷಗಳಿಂದ ಬರಗಾಲವಿದ್ದು, ಈ ಬಾರಿ ಹಿಂಗಾರು ಅತಿವೃಷ್ಟಿಯಿಂದ ನಾಡಿನ ಜನತೆ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ವಜ್ರಮಹೋತ್ಸವಕ್ಕೆ 27 ಕೋಟಿ ರೂ.ಗೆ ಬದಲಾಗಿ 10 ಕೋಟಿ ರೂ.ಖರ್ಚು ಮಾಡುವುದು ಸರಿಯಲ್ಲ ಎಂದು ಅವರು ಆಕ್ಷೇಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News