ಹಣಕ್ಕಾಗಿ ಅಂಗಲಾಚುವ ಅಗತ್ಯವಿತ್ತೇ: ಜಗದೀಶ್ ಶೆಟ್ಟರ್‌

Update: 2017-10-18 12:49 GMT

ಬೆಂಗಳೂರು, ಅ. 18: ವಿಧಾನಸೌಧದ ವಜ್ರ ಮಹೋತ್ಸವ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಳಿ ಹೋಗಿ ಹಣಕ್ಕಾಗಿ ಸ್ಪೀಕರ್ ಮತ್ತು ಸಭಾಪತಿಯವರು ಹಣಕ್ಕಾಗಿ ಅಂಗಲಾಚುವ ಅಗತ್ಯವಿತ್ತೇ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಪ್ರಶ್ನಿಸಿದ್ದಾರೆ.

ಬುಧವಾರ ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸ್ಪೀಕರ್ ಮತ್ತು ಸಭಾಪತಿ ಎರಡೂ ಸ್ಥಾನಗಳು ಅತ್ಯಂತ ಘನತೆ-ಗೌರವದ ಹುದ್ದೆಗಳು. ಆದರೆ, ವಜ್ರ ಮಹೋತ್ಸವ ಸಮಾರಂಭಕ್ಕೆ ಹಣ ಕೇಳಲು ಸಿಎಂ ಮತ್ತು ಹಣಕಾಸು ಅಧಿಕಾರಿಗಳನ್ನೇ ತಮ್ಮ ಕಚೇರಿಗೆ ಕರೆಸಿಕೊಳ್ಳಬಹುದಿತ್ತು. ಅದು ಬಿಟ್ಟು ಆ ಹುದ್ದೆಗಳ ಘನತೆ ಬದಿಗೊತ್ತಿ ಮುಖ್ಯಮಂತ್ರಿ ಗೃಹ ಕಚೇರಿಗೆ ಕೃಷ್ಣಾಗೆ ಹೋಗಿ ಹಣಕ್ಕಾಗಿ ಭಿಕ್ಷೆ ಕೇಳಿದ್ದು ನಾಚಿಕೇಗೇಡಿನ ಸಂಗತಿ.

ವಜ್ರ ಮಹೋತ್ಸವ ಸಮಾರಂಭದಲ್ಲಿ ಚಿನ್ನದ ಬಿಸ್ಕತ್ ಅನ್ನು ಕೊಡಿ ಎಂದು ಯಾವ ಶಾಸಕರು ಕೇಳಿಲ್ಲ ಎಂದು ವಾಗ್ದಾಳಿ ನಡೆಸಿದರು. ರಾಜ್ಯದ ಜನತೆ ಬರ-ನೆರೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದು, ಇಂತಹ ಸಂದರ್ಭದಲ್ಲಿ ಜನತೆ ತೆರಿಗೆ ಹಣವನ್ನು ಆಡಂಬರದ ಕಾರ್ಯಕ್ರಮ ಮಾಡುವ ಅಗತ್ಯವಿಲ್ಲ. ಶಾಸಕರಿಗೆ ಚಿನ್ನದ ಬಿಸ್ಕತ್ ನೀಡಿದರೂ ನಾವು ಅದನ್ನು ಸ್ವೀಕರಿಸುವುದಿಲ್ಲ ಎಂದು ಶೆಟ್ಟರ್ ಸ್ಪಷ್ಟಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News