'ಮುಸ್ಲಿಂ ಅಥವಾ ಕ್ರೈಸ್ತ ಉಗ್ರರು' ಎಂಬುದೇ ಇಲ್ಲ: ದಲೈ ಲಾಮ

Update: 2017-10-19 06:57 GMT

ಇಂಫಾಲ್, ಅ. 19: ‘‘ಮುಸ್ಲಿಂ ಅಥವಾ ಕ್ರೈಸ್ತ ಉಗ್ರರು ಎಂಬುದೇ ಇಲ್ಲ. ಯಾರೇ ಆದರೂ ಅವರು ಉಗ್ರವಾದವನ್ನು ಒಮ್ಮೆ ಆಲಂಗಿಸಿಕೊಂಡರೆ ಅವರಿಗೆ ಧರ್ಮ ಎಂಬುವುದು ಇರುವುದಿಲ್ಲ’’ ಎಂದು ಟಿಬೆಟ್ ನ ಆಧ್ಯಾತ್ಮಿಕ ಗುರು ದಲೈ ಲಾಮ ಹೇಳಿದ್ದಾರೆ.

ಮಣಿಪರದ ರಾಜಧಾನಿ ಇಂಫಾಲ್ ಗೆ ತಮ್ಮ ಚೊಚ್ಚಲ ಭೇಟಿಯ ಸಂದರ್ಭ ತಮಗೆ ಅಲ್ಲಿ ನೀಡಲಾದ ನಾಗರಿಕ ಸನ್ಮಾನ ಸಮಾರಂಭವೊಂದರಲ್ಲಿ ಅವರು ಮಾತನಾಡುತ್ತಿದ್ದರು. ಧಾರ್ಮಿಕ ಅಸಹಿಷ್ಣುತೆಯ ಬಗ್ಗೆ ತಮ್ಮ ಅಸಹನೆ ವ್ಯಕ್ತಪಡಿಸಿದ ದಲೈ ಲಾಮ ಮಾಯನ್ಮಾರ್ ನಲ್ಲಿ ಮುಸ್ಲಿಮರ ವಿರುದ್ಧ ನಡೆಯು ತ್ತಿರುವ ದೌರ್ಜನ್ಯವನ್ನು ದುರದೃಷ್ಟಕರ ಎಂದು ವರ್ಣಿಸಿದ್ದಾರೆ.

ಧರ್ಮದ ರಕ್ಷಣೆ ಮತ್ತು ಪ್ರಚಾರದ ನಡುವಿನ ವ್ಯತ್ಯಾಸದ ಬಗ್ಗೆ ಹೇಳಿದ ಅವರು ಧರ್ಮ ಪ್ರಚಾರ ಒಳ್ಳೆಯದಲ್ಲ ಎಂದರು. ಐತಿಹಾಸಿಕವಾಗಿ ಭಾರತ ಒಂದು ಬಹುಧರ್ಮೀಯ ದೇಶ. ಹೀಗಿರುವಾಗ ವಿಭಿನ್ನ ಸಮುದಾಯಗಳು ವಿಭಿನ್ನ ನಂಬಿಕೆಗಳನ್ನು ಹೊಂದಿದ್ದು ಅವುಗಳನ್ನು ಸಂರಕ್ಷಿಸಬೇಕು. ಆದರೆ ಮತಾಂತರ ಅಥವಾ ಧರ್ಮ ಪ್ರಚಾರ ನಡೆಸುವ ಅಧಿಕಾರ ಯಾವುದೇ ಧಾರ್ಮಿಕ ಪಂಗಡಕ್ಕಿಲ್ಲ, ಅದು ತಪ್ಪು’’ ಎಂದರು.

ಡೋಕ್ಲಂ ವಿಚಾರದ ಬಗ್ಗೆ ಅವರ ಅಭಿಪ್ರಾಯ ಕೇಳಿದಾಗ ಇಂತಹ ಘಟನೆಗಳು ನಡೆಯುತ್ತವೆ. ಆದರೆ ಎರಡೂ ದೇಶಗಳ ನಡುವೆ ಯುದ್ಧ ನಡೆದರೂ ಯಾರೂ ಸ್ಪಷ್ಟ ವಿಜಯಿಗಳಿರುವುದಿಲ್ಲವಾದುದರಿಂದ ಯುದ್ಧ ನಡೆಯುವ ಸಾಧ್ಯತೆ ಕಡಿಮೆ ಎಂದರು.

ಭವಿಷ್ಯದಲ್ಲಿ ಭಾರತ, ಜಪಾನ್, ಚೀನಾ ಇರುವ ಏಷ್ಯನ್ ಯೂನಿಯನ್ ಕಾಣುವ ಕನಸು ತನಗಿದೆಯೆಂದು ಹೇಳಿದರಲ್ಲದೆ ತಾವು ಯುರೋಪಿಯನ್ ಯೂನಿಯನ್, ಆಫ್ರಿಕನ್ ಯೂನಿಯನ್ ಹಾಗೂ ಮಲೇಷ್ಯಾ ಯೂನಿಯನ್ ಅಭಿಮಾನಿ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News