ಬಾಂಗ್ಲಾ ವಿರುದ್ಧ ಎಬಿಡಿ ಸ್ಫೋಟಕ 176

Update: 2017-10-19 12:07 GMT

ಪಾರ್ಲ್, ಅ.19: ಬಾಂಗ್ಲಾದೇಶ ವಿರುದ್ಧದ ಎರಡನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕದ ಎಬಿಡಿ ವಿಲಿಯರ್ಸ್ ಸ್ಫೋಟಕ 176 ರನ್ ಸಿಡಿಸಿದ್ದಾರೆ. ಬೊಲಾಂಡ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎಬಿಡಿ ಅವರ ಭರ್ಜರಿ ಬ್ಯಾಟಿಂಗ್ ನೆರವಿನಲ್ಲಿ ದಕ್ಷಿಣ ಆಫ್ರಿಕ 104 ರನ್‌ಗಳ ಜಯ ಗಳಿಸಿದೆ.

 ಅಮ್ಲ 104 ಎಸೆತಗಳಲ್ಲಿ 15 ಬೌಂಡರಿ ಮತ್ತು 7 ಸಿಕ್ಸರ್ ಸಹಾಯದಿಂದ 176 ರನ್ ಗಳಿಸಿ ಪಂದ್ಯಶ್ರೇಷ್ಠ ಪುರಸ್ಕಾರಕ್ಕೆ ಭಾಜನರಾದರು.

 ಎಬಿಡಿ ವಿಲಿಯರ್ಸ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಲ್ಲಿ ದಕ್ಷಿಣ ಆಫ್ರಿಕ ತಂಡ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 353 ರನ್ ಗಳಿಸಿತ್ತು. 354 ರನ್‌ಗಳ ಗೆಲುವಿನ ಸವಾಲನ್ನು ಪಡೆದ ಬಾಂಗ್ಲಾದೇಶ ತಂಡ ಮಧ್ಯಮವೇಗಿ ಅ್ಯಂಡ್ಲೆ ಫೆಹ್ಲುಕ್ವೇವೊ (40ಕ್ಕೆ 4) ಮತ್ತು ಇಮ್ರಾನ್ ದಾಳಿಗೆ ಸಿಲುಕಿ 47.5 ಓವರ್‌ಗಳಲ್ಲಿ 219 ರನ್‌ಗಳಿಗೆ ಆಲೌಟಾಗಿದೆ.

ಬಾಂಗ್ಲಾದ ಇಮ್ರುಲ್ ಕೈಸ್(68) ಮತ್ತು ಮುಶ್ಫಿಕುರ್ರಹೀಮ್(60) ಅರ್ಧಶತಕಗಳನ್ನು ದಾಖಲಿಸಿದರು.

  ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ದಕ್ಷಿಣ ಆಫ್ರಿಕ ತಂಡದ ಪರ ಹಾಶೀಮ್ ಅಮ್ಲ ಮತ್ತು ಕ್ವಿಂಟನ್ ಡಿ ಕಾಕ್ ಇನಿಂಗ್ಸ್ ಆರಂಭಿಸಿ ಮೊದಲ ವಿಕೆಟ್‌ಗೆ 90 ರನ್‌ಗಳ ಜೊತೆಯಾಟ ನೀಡಿದರು. ಹಾಶೀಮ್ ಅಮ್ಲ (85) ಶತಕ ವಂಚಿತಗೊಂಡರು. ಡಿ ಕಾಕ್ (46) ಅರ್ಧಶತಕ ವಂಚಿತಗೊಂಡರು. ನಾಯಕ ಎಫ್‌ಡು ಪ್ಲೆಸಿಸ್(0) ಅವರು ಶಾಕಿಬ್ ಎಸೆತದಲ್ಲಿ ಬೌಲ್ಡ್ ಆಗಿ ಖಾತೆ ತೆರೆಯದೆ ನಿರ್ಗಮಿಸಿದಾಗ ಎಬಿಡಿ ಅವರು ಕ್ರೀಸ್‌ಗೆ ಆಗಮಿಸಿ ಅಮ್ಲಗೆ ಸಾಥ್ ನೀಡಿದರು. ಮೂರನೆ ವಿಕೆಟ್‌ಗೆ ಅಮ್ಲ ಮತ್ತು ಎಬಿಡಿ 136 ರನ್‌ಗಳ ಜೊತೆಯಾಟ ನೀಡಿದರು.

  ಅಮ್ಲರನ್ನು ರುಬೆಲ್ ಹುಸೈನ್ ಶತಕ ದಾಖಲಿಸಲು ಬಿಡಲಿಲ್ಲ. ಆದರೆ ಎಬಿಡಿ 68 ಎಸೆತಗಳಲ್ಲಿ 10 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಲ್ಲಿ 25ನೆ ಏಕದಿನ ಶತಕ ಪೂರ್ಣಗೊಳಿಸಿದರು. 2 ರನ್ ಗಳಿಸಿದ್ದಾಗ ಎಬಿಡಿ ಔಟಾಗುವ ಅವಕಾಶದಿಂದ ಪಾರಾಗಿದ್ದರು. ಇದರ ಪ್ರಯೋಜನ ಪಡೆದ ಅವರು 224ನೆ ಪಂದ್ಯದಲ್ಲಿ 54ನೆ ಅರ್ಧಶತಕ ದಾಖಲಿಸಿದರು. 34 ಎಸೆತಗಳಲ್ಲಿ 8 ಬೌಂಡರಿಗಳ ನೆರವಿನಲ್ಲಿ ಅವರು ಅರ್ಧಶತಕ ದಾಖಲಿಸಿದ್ದರು.

  93ಎಸೆತಗಳಲ್ಲಿ 13 ಬೌಂಡರಿ ಮತ್ತು 5 ಸಿಕ್ಸರ್ ಸಹಾಯದಿಂದ ಎಬಿಡಿ 150 ರನ್ ಗಳಿದರು. ಎಬಿಡಿ ದ್ವಿಶತಕ ದಾಖಲಿಸುವ ಭರವಸೆ ಮೂಡಿಸಿದ್ದರು. ಆದರೆ 176ರನ್ ಗಳಿಸಿದ್ದಾಗ ಅವರಿಗೆ ರುಬೆಲ್ ಪೆವಿಲಿಯನ್ ಹಾದಿ ತೋರಿಸಿದರು.

ಎಬಿಡಿ ಮತ್ತು ಡುಮಿನಿ 4ನೆ ವಿಕೆಟ್‌ಗೆ 117 ರನ್‌ಗಳ ಜೊತೆಯಾಟ ನೀಡಿದರು.

ಈ ಪಂದ್ಯದಲ್ಲಿ 7 ಸಿಕ್ಸರ್ ಸಿಡಿಸಿದ ಎಬಿಡಿ ಏಕದಿನ ಕ್ರಿಕೆಟ್‌ನಲ್ಲಿ 200ಕ್ಕೂ ಅಧಿಕ ಸಿಕ್ಸರ್ ಸಿಡಿಸಿದ ವಿಶ್ವದ 5ನೆ ದಾಂಡಿಗ ಎನಿಸಿಕೊಂಡಿದ್ದಾರೆ. ಧೋನಿ ಬಳಿಕದ ಸ್ಥಾನ ಪಡೆದಿದ್ದಾರೆ.

 ಪಾಕಿಸ್ತಾನದ ಶಾಹಿದ್ ಅಫ್ರಿದಿ (351), ಶ್ರೀಲಂಕಾದ ಜಯಸೂರ್ಯ(270), ವಿಂಡೀಸ್‌ನ ಕ್ರಿಸ್ ಗೇಲ್(252), ಎಂಎಸ್ ಧೋನಿ(213) ಎಬಿಡಿ ವಿಲಿಯರ್ಸ್( 201) ಅವರು 200ಕ್ಕೂ ಅಧಿಕ ಸಿಕ್ಸರ್ ಸಿಡಿಸಿದ್ದಾರೆ. ನ್ಯೂಝಿಲೆಂಡ್‌ನ ಬ್ರೆಂಡನ್ ಮೆಕಲಮ್ (200)  ಇನ್ನೂರು ಸಿಕ್ಸರ್ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News