ಬೆಂಗಳೂರು ಕೇಂದ್ರ ವಿವಿ ಅಸ್ತಿತ್ವಕ್ಕೆ

Update: 2017-10-19 13:22 GMT

ಬೆಂಗಳೂರು, ಅ.19: ರಾಜ್ಯ ಸರಕಾರವು ಬೆಂಗಳೂರು ವಿಶ್ವವಿದ್ಯಾನಿಲಯವನ್ನು ತ್ರಿಭಜನೆಗೊಳಿಸಿದ್ದು, ಇದರಿಂದ ಬೆಂಗಳೂರು ಕೇಂದ್ರ ವಿಶ್ವವಿದ್ಯಾನಿಲಯ ಅಸ್ತಿತ್ವಕ್ಕೆ ಬಂದಿದೆ.

ಬೆಂಗಳೂರು ಕೇಂದ್ರ ವಿಶ್ವವಿದ್ಯಾನಿಲಯವು 13 ವಿಧಾನಸಭಾ ಕ್ಷೇತ್ರಗಳಾದ ಶಾಂತಿನಗರ, ಬ್ಯಾಟರಾಯನಪುರ, ಯಲಹಂಕ, ಮಲ್ಲೇಶ್ವರಂ, ಹೆಬ್ಬಾಳ, ಶಿವಾಜಿನಗರ, ಗಾಂಧಿನಗರ, ಚಾಮರಾಜಪೇಟೆ, ಚಿಕ್ಕಪೇಟೆ, ಬಸವನಗುಡಿ, ಬಿಟಿಎಂ ಲೇಔಟ್, ಜಯನಗರ ಹಾಗೂ ರಾಜಾಜಿನಗರ ಸೇರುತ್ತದೆ.

ಈ ವ್ಯಾಪ್ತಿಯಲ್ಲಿ ಬರುವ ಕಾಲೇಜುಗಳ 2018-19ನೆ ಶೈಕ್ಷಣಿಕ ಸಾಲಿನ ಸಂಯೋಜನೆಯನ್ನು ಬೆಂಗಳೂರು ಕೇಂದ್ರ ವಿಶ್ವವಿದ್ಯಾನಿಲಯವು ನಡೆಸುತ್ತದೆ. ಈ ಸಂಬಂಧ ಕರ್ನಾಟಕ ವಿಶ್ವವಿದ್ಯಾನಿಲಯ ಕಾಯ್ದೆ 2000, ಪ್ರಕರಣ 59ರ ಅನ್ವಯ ಸದ್ಯದಲ್ಲಿಯೆ ಪ್ರಕಟನೆಯನ್ನು ನೀಡಿ ಅರ್ಜಿ ಆಹ್ವಾನಿಸಿ, ಪ್ರಕ್ರಿಯೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News