ವಿಶೇಷ ಪ್ರವರ್ಗಗಳಿಗೆ 784 ಮನೆ: ವಿ.ಶಂಕರ್

Update: 2017-10-19 13:31 GMT

ಬೆಂಗಳೂರು, ಸೆ.19: ಎಚ್‌ಐವಿ ಪೀಡಿತರು, ಮಂಗಳಮುಖಿಯರು, ಬೀದಿ ವ್ಯಾಪಾರಿಗಳು , ವಿಕಲಚೇತನರಿಗೆ ವಸತಿ ಕಲ್ಪಿಸುವ ಉದ್ದೇಶದಿಂದ ಕೆ.ಆರ್.ಪುರದ ಗುಂಜೂರು ಬಳಿಯಲ್ಲಿ 9ಎಕರೆ ಜಾಗವನ್ನು ಗೊತ್ತುಪಡಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್ ತಿಳಿಸಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಿಶೇಷ ವರ್ಗದ ಸಮುದಾಯಕ್ಕೆ ವಸತಿ ಕಲ್ಪಿಸಿಕೊಡಲು ಜಿಲ್ಲಾಡಳಿತ ತೀರ್ಮಾನಿಸಿದೆ. ವಸತಿ ನಿರ್ಮಿಸಲು ಬೇಕಾದ ಹಣವನ್ನು ಎಸ್‌ಇಪಿ/ಟಿಎಸ್ಪಿ ಯೋಜನಯಡಿ ಅನುದಾನ ನೀಡುವಂತೆ ಸಮಾಜ ಕಲ್ಯಾಣ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.

ಈಗಾಗಲೇ ದಾಸನಪುರ ಹೋಬಳಿ ಬಳಿ ಎಚ್‌ಐವಿ ಪೀಡಿತರಿಗಾಗಿ 300ಮನೆಗಳನ್ನು ಕಟ್ಟಿಸಲಾಗಿದ್ದು, ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ. ಅದೇ ರೀತಿಯಲ್ಲಿ ಗುಂಜೂರು ಬಳಿ ಸುಮಾರು 784 ಮನೆಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದ್ದು, ಕೂಲಂಕಶವಾಗಿ ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News