ಅ.23ಕ್ಕೆ ಧಾರವಾಡದಲ್ಲಿ ‘ಭರವಸೆಗಳ ಸಾಕಾರದ ಸಂಭ್ರಮ’

Update: 2017-10-19 14:57 GMT

ಬೆಂಗಳೂರು, ಅ. 19: ಸರಕಾರದಿಂದ ಬೆಳಗಾವಿ ವಿಭಾಗದ ‘ಭರವಸೆಗಳ ಸಾಕಾರದ ಸಂಭ್ರಮ’ ಫಲಾನುಭವಿಗಳಿಗೆ ಸೌಲಭ್ಯಗಳ ವಿತರಣೆ ಹಾಗೂ ಮಾಹಿತಿ ಉತ್ಸವವನ್ನು ಅ.22ರಿಂದ ಎರಡು ದಿನಗಳ ಕಾಲ ಧಾರವಾಡ ಕೃಷಿ ವಿಶ್ವ ವಿದ್ಯಾನಿಲಯದ ಆವರಣದಲ್ಲಿ ಏರ್ಪಡಿಸಲಾಗಿದೆ.

ಗುರುವಾರ ಈ ಸಮಾವೇಶದ ಪೂರ್ವ ಸಿದ್ಧತೆಗಳನ್ನು ಸಚಿವರಾದ ಎಚ್.ಕೆ. ಪಾಟೀಲ್, ಆರ್.ವಿ.ದೇಶಪಾಂಡೆ, ರುದ್ರಪ್ಪ ಲಮಾಣಿ, ವಿನಯ್ ಕುಲಕರ್ಣಿ ಸೇರಿ ಸ್ಥಳೀಯ ಜನಪ್ರತಿನಿಧಿಗಳ ಪರಿಶೀಲನೆ ನಡೆಸಿದರು.

ಈ ವೇಳೆ ಮಾತನಾಡಿದ ಸಚಿವ ದೇಶಪಾಂಡೆ, ನಾಲ್ಕು ವರ್ಷಗಳಲ್ಲಿ ರಾಜ್ಯ ಸರಕಾರ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಜನರಲ್ಲಿ ಬದಲಾವಣೆಗಳನ್ನು ತಂದು ಅವರ ಜೀವನಮಟ್ಟವನ್ನು ಉನ್ನತೀಕರಿಸಲು ಹಲವು ಜನಪರ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ.
ರಾಜ್ಯ ಸರಕಾರದ ಭರವಸೆಗಳ ಸಾಕಾರದ ಈ ಸಂಭ್ರಮವನ್ನು ಬೆಳಗಾವಿ ಭಾಗದ ಫಲಾನುಭಗಳೊಂದಿಗೆ ಹಂಚ್ಚಿಕೊಳ್ಳುವ ಹಾಗೂ ಪ್ರಸಕ್ತ ಸಾಲಿನ ಫಲಾನುಭವಿಗಳಿಗೆ ಸೌಲಭ್ಯವನ್ನು ನೀಡುವ ಕಾರ್ಯಕ್ರಮ ಜರುಗಿಸಲಾಗುತ್ತಿದೆ. ಅ.23ಕ್ಕೆ ಸಿಎಂ ಸಮಾವೇಶದಲ್ಲಿ ಭಾಗವಹಿಸುತ್ತಿದ್ದು, ಏಳು ಜಿಲ್ಲೆಗಳಿಂದ 35ಸಾವಿರ ಫಲಾನುಭವಿಗಳು ಭಾಗವಹಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಏಳು ಜಿಲ್ಲೆಗಳ ಮಾಹಿತಿ ಉತ್ಸವ ಹಾಗೂ ಸೌಲಭ್ಯ ವಿತರಣೆಯ ಸಮಾವೇಶದ ಪೂರ್ವಭಾವಿಯಾಗಿ ಎಲ್ಲ ತಾಲೂಕುಗಳಲ್ಲಿ ಏಳು ದಿನಗಳು ಆಯ್ದ ಗ್ರಾಮಗಳಲ್ಲಿ ರಾಜ್ಯ ಸರಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಅತ್ಯಾಧುನಿಕ ಎಲ್‌ಇಡಿ ಪ್ರಚಾರ ವಾಹನಗಳು ಈಗಾಗಲೇ ಪ್ರಚಾರ ಕೈಗೊಂಡಿವೆ ಎಂದರು.

ಈ ವೇಳೆ ಬೆಳಗಾವಿ ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ, ವಾರ್ತಾ ಇಲಾಖೆ ನಿರ್ದೇಶಕ ಡಾ.ಪಿ.ಎಸ್.ಹರ್ಷ, ಧಾರವಾಡ ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನ ಹಳ್ಳಿ, ಅವಳಿ ನಗರ ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ, ಸಿಇಒಆರ್ ಸ್ನೇಹಲ್, ನಗರ ಸಭೆ ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News