×
Ad

ನ.11 ರಿಂದ 'ರೆಡ್ಡಿ ಸಮಾವೇಶ'

Update: 2017-10-21 18:11 IST

ಬೆಂಗಳೂರು, ಅ.21: ಕರ್ನಾಟಕ ರೆಡ್ಡಿ ಜನಸಂಘದ ವತಿಯಿಂದ ನ.11 ಮತ್ತು 12 ರಂದು ಹೈದ್ರಾಬಾದ್‌ನ ಜೆ.ವ್ಯಾಲಿ ರೆಸಾರ್ಟ್‌ನಲ್ಲಿ ರೆಡ್ಡಿ ಜನಾಂಗದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಗ್ಲೋಬಲ್ ರೆಡ್ಡಿ ಕನ್ವೆನ್ಷನ್ ರಿಲೇಷನ್ ಕೋ-ಆರ್ಡಿನೇಟರ್‌ನ ಸದಸ್ಯ ಎಚ್.ಎನ್.ಮಂಜುನಾಥ್ ತಿಳಿಸಿದ್ದಾರೆ.

ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಪಂಚದಾದ್ಯಂತ ನೆಲೆಸಿರುವ ರೆಡ್ಡಿ ಜನಾಂಗದ ಸದಸ್ಯರನ್ನು ಒಗ್ಗೂಡಿಸುವುದು ಮತ್ತು ಒಂದೇ ವೇದಿಕೆಯಲ್ಲಿ ತರುವ ಉದ್ದೇಶದಿಂದ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ರೆಡ್ಡಿ ಜನಾಂಗದಲ್ಲಿರುವ ಸಮಸ್ಯೆಗಳು, ಅದಕ್ಕೆ ಪರಿಹಾರ ಕಂಡುಕೊಳ್ಳುವುದು ಹೇಗೆ, ಅವರ ಕುಂದುಕೊರತೆಗಳು ಹಾಗೂ ನಿವಾರಣೆ ಕುರಿತು ಒಂದೇ ವೇದಿಕೆಯಲ್ಲಿ ಚರ್ಚಿಸಲಾಗುವುದು. ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಈ ಜನಾಂಗವನ್ನು ಮುಂದೆ ತರುವ ಕುರಿತು ಸಮಾಲೋಚನೆ ನಡೆಸಲಾಗುವುದು. ಈ ವೇಳೆ ಜನಾಂಗಕ್ಕಾಗಿ ಶ್ರಮಿಸುತ್ತಿರುವ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಮುಖಂಡರಾದ ವೆಂಕಟ ರೆಡ್ಡಿ, ಭಗವಾನ್ ರೆಡ್ಡಿ, ಸುಮನ್ ರೆಡ್ಡಿ, ವಸಂತ ಕವಿತಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News