×
Ad

ಕಳವು ಪ್ರಕರಣ: ಆರೋಪಿ ಬಂಧನ

Update: 2017-10-21 19:36 IST

ಬೆಂಗಳೂರು, ಅ.21: ಆಟೊ ರಿಕ್ಷಾಗಳನ್ನು ಕಳವು ಮಾಡಿದ್ದ ಪ್ರಕರಣ ಸಂಬಂಧ ಆರೋಪಿಯೊಬ್ಬನನ್ನು ಬಂಧಿಸುವಲ್ಲಿ ಪುಟ್ಟೇನಹಳ್ಳಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದು, 1.67 ಲಕ್ಷ ಮೌಲ್ಯದ ಬೈಕ್, ಆಟೊ ರಿಕ್ಷಾವನ್ನು ವಶಪಡಿಸಿಕೊಂಡಿದ್ದಾರೆ.

ನವೋದಯನಗರ 4ನೆ ಮುಖ್ಯ ರಸ್ತೆಯ ನಿವಾಸಿ ಕಾರ್ತಿಕ್(21) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಈತನ ಬಂಧನದಿಂದ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯ ಎರಡು ಬೈಕ್ ವಾಹನ ಕಳವು ಪ್ರಕರಣ, ಒಂದು ಆಟೊ ರಿಕ್ಷಾ ಕಳವು ಪ್ರಕರಣ, ಜೆಪಿನಗರ ಪೊಲೀಸ್ ಠಾಣೆಯ ಬೈಕ್ ಸೇರಿ ಮತ್ತಿತರ ಪ್ರಕರಣಗಳು ಪತ್ತೆಯಾಗಿವೆ ಎಂದು ಸುದ್ದಿಗೋಷ್ಠಿಯಲ್ಲಿ ದಕ್ಷಿಣ ವಿಭಾಗದ ಡಿಸಿಪಿ ಎಸ್.ಡಿ.ಶರಣಪ್ಪ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News