ಮನೆಗಳ್ಳತನ ಆರೋಪ: ರೌಡಿ ಬಂಧನ
Update: 2017-10-21 19:40 IST
ಬೆಂಗಳೂರು, ಅ.21: ಮನೆಗಳ್ಳತನ ಮಾಡುತ್ತಿದ್ದ ಆರೋಪದ ಮೇಲೆ ರೌಡಿ ನರಸಿಂಹ ರೆಡ್ಡಿ ಎಂಬಾತನನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿ ಕಂಟ್ರಿ ಪಿಸ್ತೂಲ್ ಹಾಗೂ 7.65 ಎಂ.ಎಂ. ಸಜೀವ ಗುಂಡು, ಚಿನ್ನಾಭರಣ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಮೂಕಾಂಬಿಕ ನಗರದ ಆರ್.ಕಿಶೋರ್ ಎಂಬವರು ಸೆ.18ರಂದು ಮನೆಗೆ ಬೀಗ ಹಾಕಿ ಮಂತ್ರಾಲಯಕ್ಕೆ ಹೋಗಿ ಮೂರು ದಿನದ ಬಳಿಕ ವಾಪಸ್ ಬಂದಾಗ, ಮನೆಬಾಗಿಲು ಮುರಿದು 120 ಗ್ರಾಂ ತೂಕದ ಚಿನ್ನದ ಒಡವೆ, 1.5 ಕೆ.ಜಿ ತೂಕದ ವಿವಿಧ ಬೆಳ್ಳಿ ಸಾಮಾನು ಕಳ್ಳತನವಾಗಿರುವ ಬಗ್ಗೆ ಪೊಲೀಸರು ದೂರು ನೀಡಿದ್ದರು.
ದಕ್ಷಿಣ ವಿಭಾಗದ ಡಿಸಿಪಿ ಎಸ್.ಬಿ.ಶರಣಪ್ಪ ಮಾರ್ಗದರ್ಶನದಲ್ಲಿ ವಿವಿಪುರಂ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಎನ್.ಆರ್.ಮಹಾಂತ ರೆಡ್ಡಿ ನೇತೃತ್ವದಲ್ಲಿ ಗಿರಿನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.