ಕ್ರೆಮ್ಲಿನ್ ಕಪ್: ಜುಲಿಯಾ ಜಾರ್ಜಸ್ ಗೆ ಸಿಂಗಲ್ಸ್ ಕಿರೀಟ

Update: 2017-10-21 18:35 GMT

ಮಾಸ್ಕೊ, ಅ.21: ಕ್ರೆಮ್ಲಿನ್ ಕಪ್ ಫೈನಲ್‌ನಲ್ಲಿ ರಶ್ಯದ ಡರಿಯಾ ಕಾಸಾಟ್‌ಕಿನಾರನ್ನು ಮಣಿಸಿರುವ ಜರ್ಮನಿಯ ಜುಲಿಯಾ ಜಾರ್ಜಸ್ ವೃತ್ತಿಜೀವನದಲ್ಲಿ ಮೂರನೆ ಡಬ್ಲುಟಿಎ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಏಳನೆ ಶ್ರೇಯಾಂಕದ ಜುಲಿಯಾ ಒಂದು ಗಂಟೆ, ಆರು ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 20ರ ಹರೆಯದ ಡರಿಯಾರನ್ನು 6-1, 6-2 ನೇರ ಸೆಟ್‌ಗಳಿಂದ ಮಣಿಸಿದರು.

ಡರಿಯಾ ವಿರುದ್ಧ ಆಡಿರುವ ಐದನೆ ಪಂದ್ಯದಲ್ಲಿ ಮೂರನೆ ಜಯ ಸಾಧಿಸಿದರು.

 ‘‘ನನಗೆ ಈ ಪ್ರಶಸ್ತಿ ಅದ್ಭುತ ಅನುಭವ ನೀಡಿದೆ. ಈ ಕ್ಷಣಕ್ಕಾಗಿ ಕಠಿಣ ಶ್ರಮಪಟ್ಟಿದ್ದೇನೆ. ಪ್ರಶಸ್ತಿ ಗೆದ್ದ ಸಂಭ್ರಮದ ಕ್ಷಣವನ್ನು ಡರಿಯಾರೊಂದಿಗೆ ಹಂಚಿಕೊಳ್ಳಲು ಬಯಸುವೆ’’ಎಂದು ಜಾರ್ಜಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News