ಪ್ರಥಮ ವರ್ಷದ ಡಿ.ಇಡಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

Update: 2017-10-22 14:44 GMT

ಬೆಂಗಳೂರು, ಅ.21: ಪ್ರಥಮ ವರ್ಷದ ಡಿ.ಇಡಿ, ಡಿಎಲ್‌ಡಿ ಮುಖ್ಯ ಪರೀಕ್ಷೆಯ ವೇಳಾಪಟ್ಟಿ ಮತ್ತು ದ್ವೀತಿಯ ವರ್ಷದ ಡಿ.ಇಡಿ ಪೂರಕ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿದೆ.

ಡಿ.11ರಿಂದ 16ರ ವರೆಗೆ ನಡೆಯಲಿರುವ ಪ್ರಥಮ ಡಿಎಲ್‌ಎಡ್,ಡಿ.ಇಡಿ ಮತ್ತು ಡಿ.11ರಿಂದ 14ರವೆಗೆ ದ್ವೀತಿಯ ಡಿ.ಇಡಿ ಪೂರಕ ಪರೀಕ್ಷೆಗಳು ನಡೆಯಲಿವೆ.

ಪರೀಕ್ಷಾ ವೇಳಾಪಟ್ಟಿ: ಡಿ.11ರಂದು ಪರಿಷ್ಕೃತ ಪಠ್ಯ- ಇಂಗ್ಲಿಷ್ ಸಂವಹನಾ ಕೌಶಲಗಳು ಹಾಗೂ ಹೊಸಪಠ್ಯ-ಇಂಗ್ಲಿಷ್ ಸಂವಹನಾ ಸಾಮರ್ಥ್ಯ.ಡಿ.12ರಂದು ಪರಿಷ್ಕೃತ ಪಠ್ಯ- ಶಿಕ್ಷಣ: ಮೂಲ ಪರಿಕಲ್ಪನೆಗಳ ಪರಿಚಯ ಹಾಗೂ ಹೊಸ ಪಠ್ಯ- ಮೂಲ ಪರಿಕಲ್ಪನೆಗಳ ಪರಿಚಯ ಪರೀಕ್ಷೆ ನಡೆಯಲಿದೆ.

ಡಿ.13 ರಂದು ಪರಿಷ್ಕೃತ ಪಠ್ಯ- ಪ್ರಥಮ ಭಾಷೆ ಕನ್ನಡ, ಹಿಂದಿ, ಉರ್ದು, ಮರಾಠಿ, ತುಳು ಹಾಗೂ ತೆಲುಗು ಹಾಗೂ ಹೊಸ ಪಠ್ಯ -ಪ್ರಥಮ ಭಾಷೆ ಕನ್ನಡ, ಹಿಂದಿ, ಉರ್ದು, ಮರಾಠಿ, ತುಳು ಹಾಗೂ ತೆಲುಗು ಭಾಷೆಯ ಪರೀಕ್ಷೆಗಳು ಜರಗಲಿವೆ.

ಡಿ.14 ರಂದು ಪರಿಷ್ಕೃತ ಪಠ್ಯ-ಗಣಿತ ಹಾಗೂ ಹೊಸ ಪಠ್ಯ -ಗಣಿತ,ಡಿ.15 ರಂದು ಪರಿಷ್ಕೃತ ಪಠ್ಯ-ಪರಿಸರ ವಿಜ್ಞಾನ ಹಾಗೂ ಹೊಸ ಪಠ್ಯ-ಪರಿಸರ ವಿಜ್ಞಾನ, ಡಿ.16 ರಂದು ಪರಿಷ್ಕೃತ ಪಠ್ಯ- ಶೈಕ್ಷಣಿಕ ಮೌಲ್ಯಾಂಕನ ಮತ್ತು ಮೌಲ್ಯಮಾಪನ ಹಾಗೂ ಹೊಸ ಪಠ್ಯ- ಶೈಕ್ಷಣಿಕ ಮೌಲ್ಯಾಂಕನ ಮತ್ತು ಮೌಲ್ಯಮಾಪನ ಪರೀಕ್ಷೆ ನಡೆಯಲಿದೆ.( ಎಲ್ಲ ಪರೀಕ್ಷೆಗಳು ಬೆಳಗ್ಗೆ 10ಗಂಟೆಗೆ ಆರಂಭವಾಗಲಿವೆ)

ಪೂರಕ ಪರೀಕ್ಷಾ ವೇಳಾಪಟ್ಟಿ: ಡಿ.11ರಂದು ಹೊಸ ಪಠ್ಯ-ಶಿಕ್ಷಣ, ಡಿ.12 ರಂದು ಹೊಸಪಠ್ಯ ಕನ್ನಡ, ಹಿಂದಿ, ಉರ್ದು, ಮರಾಠಿ, ತುಳು ಹಾಗೂ ತೆಲುಗು. ಡಿ.13 ರಂದು ಹೊಸ ಪಠ್ಯ (ಹಿರಿಯ ಪ್ರಾಥಮಿಕ ಶಿಕ್ಷಣ) ಡಿ.14 ರಂದು ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಪರೀಕ್ಷೆಗಳು ನಡೆಲಿವೆ. ಈ ಎಲ್ಲ ಪರೀಕ್ಷೆಗಳು ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿವೆ.

ಡಿ.11ರಂದು ಹೊಸ ಪಠ್ಯ-ಶಿಕ್ಷಣ, ಡಿ.12 ರಂದು ಹೊಸಪಠ್ಯ ಕನ್ನಡ, ಹಿಂದಿ, ಉರ್ದು, ಮರಾಠಿ, ತುಳು ಹಾಗೂ ತೆಲುಗು. ಡಿ.13 ರಂದು ಹೊಸ ಪಠ್ಯ (ಹಿರಿಯ ಪ್ರಾಥಮಿಕ ಶಿಕ್ಷಣ) ಡಿ.14 ರಂದು ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಪರೀಕ್ಷೆಗಳು ನಡೆಲಿವೆ.

ಈ ಎಲ್ಲ ಪರೀಕ್ಷೆಗಳು ಮ್ಯಾಹ್ನ 2ಗಂಟೆಗೆ ಆರಂವಾಗಲಿವೆ.

ಶುಲ್ಕ ಪಾವತಿಗೆ ನ.8 ಕೊನೆಯ ದಿನ:  ಡಿ.11ರಿಂದ 16ರ ವರೆಗೆ ನಡೆಯಲಿರುವ ಡಿಎಲ್‌ಎಡ್, ಡಿ.ಇಡಿ ಮತ್ತು ದ್ವೀತಿಯ ಡಿ.ಇಡಿ ಪೂರಕ ಪರೀಕ್ಷೆಗೆ ಡಿ.ಇಡಿ ಸಂಸ್ಥೆಗಳಲ್ಲಿ ಪರೀಕ್ಷಾ ಶುಲ್ಕವನ್ನು ನ. 8 ರೊಳಗೆ ಪಾವತಿಸಲು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕರು ಪ್ರಕಟನೆಯಲ್ಲಿ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News