ಟಿಪ್ಪು ಜಯಂತಿ ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ

Update: 2017-10-23 13:05 GMT

ಬೆಂಗಳೂರು, ಅ.23: ರಾಜ್ಯ ಸರಕಾರದ ವತಿಯಿಂದ ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಅ.25ರಿಂದ ನ.10ರವರೆಗೆ ರಾಜ್ಯಾದ್ಯಂತ ಒನಕೆ ಪ್ರದರ್ಶನ, ಪಂಜಿನ ಮೆರವಣಿಗೆ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ.

ನಗರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸಂಚಾಲಕ ಅದ್ದಂಡ ಕಾರ್ಯಪ್ಪ ಮಾತನಾಡಿ, ಟಿಪ್ಪು ಜಯಂತಿ ರಾಷ್ಟ್ರೀಯ ವಾದಕ್ಕೆ ವಿರೋಧಿ.ಟಿಪ್ಪು ಜಯಂತಿ ಆಚರಣೆಯ ಮೂಲಕ ರಾಜ್ಯ ಸರಕಾರ ಕೋಮುಗಲಭೆಗೆ ಪ್ರೇರಣೆ ನೀಡುತ್ತಿದೆ. ಇದಕ್ಕೆ ನಾವು ಆಸ್ಪದ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಟಿಪ್ಪು ಒಬ್ಬ ಮತಾಂಧ, ನರಹಂತಕ. ಇತಿಹಾಸವನ್ನು ತಿರುಚುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿದ್ದಾರೆ. ಜನರ ವಿರೋಧವಿದ್ದರು ಮುಸ್ಲಿಮ್ ಮತಗಳ ಓಲೈಕೆಗಾಗಿ ರಾಜ್ಯ ಸರಕಾರ ಒಣ ಹಠ ಪ್ರದರ್ಶನ ಮಾಡುತ್ತಿದೆ. ಕೂಡಲೆ ಜಯಂತಿ ಆಚರಣೆಯಿಂದ ಸರಕಾರ ಹಿಂದೆ ಸರಿಯಬೇಕು. ಜಯಂತಿ ಕೈ ಬಿಡುವವರಿಗೂ ಸಮಿತಿವತಿಯಿಂದ ರಾಜ್ಯದ ಎಲ್ಲ ಭಾಗಗಳೂ ಶಾಂತಿಯುತವಾಗಿ ಪ್ರತಿಭಟನೆ ನಡೆಸಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News