ಈತನ ಹೊಟ್ಟೆಯಲ್ಲಿ ಪತ್ತೆಯಾಯ್ತು 13 ಲಕ್ಷ ರೂ. ಮೌಲ್ಯದ ಚಿನ್ನ

Update: 2017-10-23 17:25 GMT

ಕೊಯಮತ್ತೂರು, ಅ.23: ವಿಮಾನದ ಮೂಲಕ ಹಲವು ತಂತ್ರಗಳನ್ನು ಬಳಸಿ ಚಿನ್ನದ ಗಟ್ಟಿಗಳನ್ನು ಸಾಗಿಸುತ್ತಿರುವ ಹಲವು ಘಟನೆಗಳು ಆಗಾಗ ಬೆಳಕಿಗೆ ಬರುತ್ತಲೇ ಇರುತ್ತವೆ. ಆದರೆ ಇಲ್ಲೊಬ್ಬ ವ್ಯಕ್ತಿ ಸುಮಾರು 13 ಲಕ್ಷ ರೂ. ಮೌಲ್ಯದ ಚಿನ್ನದ ಉಂಡೆಗಳನ್ನು ನುಂಗುವ ಮೂಲಕ ಚಿನ್ನ ಸಾಗಾಟಕ್ಕೆ ಯತ್ನಿಸಿ ಸಿಕ್ಕಿ ಬಿದ್ದಿದ್ದಾನೆ.

ಕೊಲಂಬೋದಿಂದ ಆಗಮಿಸಿದ ಪ್ರಯಾಣಿಕ ಸತ್ಯಶೀಲನ್ ಎಂಬಾತನ ಅನುಮಾನಾಸ್ಪದ ನಡವಳಿಕೆಯನ್ನು ಅಧಿಕಾರಿಗಳು ಗಮನಿಸಿದ್ದರು. ನಂತರ ಆತನನ್ನು ತಪಾಸಣೆಗೊಳಪಡಿಸಿದಾಗ ಹೊಟ್ಟೆಯಲ್ಲಿ ಚಿನ್ನ ಇರುವುದು ಪತ್ತೆಯಾಗಿತ್ತು. ತಕ್ಷಣವೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಎಕ್ಸ್ ನಡೆಸಿದಾಗ ಹೊಟ್ಟೆಯೊಳಗಡೆ ಚಿನ್ನದ ಉಂಡೆಗಳಿರುವುದು ಕಂಡುಬಂದಿದೆ. ವೈದ್ಯರು ಚಿನ್ನದ ಉಂಡೆಗಳನ್ನು ಹೊರತೆಗೆದಿದ್ದಾರೆ.

423 ಗ್ರಾಂ ತೂಗುತ್ತಿದ್ದ 20 ಚಿನ್ನದ ಉಂಡೆಗಳು ಆತನ ಹೊಟ್ಟೆಯಲ್ಲಿತ್ತು ಎನ್ನಲಾಗಿದೆ. ಇದರ ಮೌಲ್ಯ 13 ಲಕ್ಷ ರೂ. ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News