ಜೊಹೊರ್ ಕಪ್: ಭಾರತದ ಜೂನಿಯರ್ ಹಾಕಿ ತಂಡಕ್ಕೆ ಜಯ

Update: 2017-10-23 18:59 GMT

ಜೊಹೊರ್ ಬಹ್ರು, ಅ.23: ದಿಲ್‌ಪ್ರೀತ್ ಸಿಂಗ್ ಸಾಹಸದ ನೆರವಿನಿಂದ ಭಾರತದ ಜೂನಿಯರ್ ಹಾಕಿ ತಂಡ ಆತಿಥೇಯ ಮಲೇಷ್ಯಾವನ್ನು 2-1 ಅಂತರದಿಂದ ಮಣಿಸಿತು. ಈ ಮೂಲಕ 7ನೆ ಆವೃತ್ತಿಯ ಸುಲ್ತಾನ್ ಜೊಹೊರ್ ಕಪ್‌ನಲ್ಲಿ ಸತತ ಎರಡನೆ ಜಯ ಸಾಧಿಸಿತು. ಸೋಮವಾರ ನಡೆದ ಪಂದ್ಯದಲ್ಲಿ ಮಲೇಷ್ಯಾ ತಂಡ ಉಮರ್ ನೆರವಿನಿಂದ 3ನೆ ನಿಮಿಷದಲ್ಲಿ 1-0 ಮುನ್ನಡೆ ಪಡೆದಿತ್ತು. ಭಾರತದ ದಿಲ್‌ಪ್ರೀತ್ ಸಿಂಗ್ ಬಾರಿಸಿದ ಅವಳಿ ಗೋಲುಗಳ(20ನೆ, 43ನೆ ನಿಮಿಷ) ಸಹಾಯದಿಂದ ಭಾರತ 2-1 ಅಂತರದಿಂದ ಜಯ ದಾಖಲಿಸಿತು. ಭಾರತ ಬುಧವಾರ ನಡೆಯಲಿರುವ 3ನೆ ಪಂದ್ಯದಲ್ಲಿ ಅಮೆರಿಕವನ್ನು ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News