ಸಚಿವ ಅನಂತ್ ಕುಮಾರ್ ಹೆಗಡೆ ವಿರುದ್ಧ ಟಿಪ್ಪು ವಂಶಸ್ಥರಿಂದ ದೂರು
Update: 2017-10-24 20:04 IST
ಬೆಂಗಳೂರು, ಅ.24: ಟಿಪ್ಪು ಜಯಂತಿ ವಿರೋಧಿಸಿ ಅವಹೇಳನಕಾರಿಯಾಗಿ ಟೀಕಿಸಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಿರುದ್ಧ ಟಿಪ್ಪು ವಂಶಸ್ಥರು ಗೃಹಸಚಿವ ರಾಮಲಿಂಗಾರೆಡ್ಡಿಗೆ ದೂರು ನೀಡಿದ್ದಾರೆ.
ಮಂಗಳವಾರ ಬೆಂಗಳೂರಿನಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರ ಗೃಹ ಕಚೇರಿಯಲ್ಲಿ ಟಿಪ್ಪು ವಂಶಸ್ಥ ಸೈಯದ್ ಮನ್ಸೂರ್ ಆಲಿ ಟಿಪ್ಪು ದೂರು ನೀಡಿದ್ದಾರೆ.
ಮಾಧ್ಯಮಗಳಲ್ಲಿ ನೀಡಿದ ಹೇಳಿಕೆ ಮತ್ತು ವರದಿಗಳನ್ನಾಧರಿಸಿ ಈ ದೂರು ನೀಡಿದ್ದಾರೆ ಎನ್ನಲಾಗಿದೆ.
ಟಿಪ್ಪು ಜಯಂತಿಗೆ ತನ್ನನ್ನು ಆಹ್ವಾನಿಸಬೇಡಿ ಎಂದು ಟ್ವೀಟ್ ಮಾಡಿದ್ದ ಸಚಿವ ಅನಂತ್ ಕುಮಾರ್ ಹೆಗಡೆ ಟಿಪ್ಪುವನ್ನು ಕ್ರೂರ ನರಹಂತಕ, ಧರಿದ್ರ ಮತಾಂಧ, ಅತ್ಯಾಚಾರಿ ಎಂದು ಟೀಕಿಸಿ ಫೇಸ್‌ಬುಕ್ ಮತ್ತು ಟ್ವಿಟರ್‌ಲ್ಲಿ ಪೋಸ್ಟ್ ಹಾಕಿದ್ದರು.