ನಿಗದಿತ ಠೇವಣಿ ಮೇಲಿನ ಬಡ್ಡಿಗೆ ತೆರಿಗೆ ಪಾವತಿಸಬೇಕು: ಹೈಕೋರ್ಟ್ ಪೂರ್ಣಪೀಠ ಅಭಿಪ್ರಾಯ
Update: 2017-10-30 22:15 IST
ಬೆಂಗಳೂರು, ಅ.30: ವ್ಯವಹಾರದ ಮೂಲಕ ಗಳಿಸಲಾದ ನಿಗದಿತ ಠೇವಣಿ ಮೇಲಿನ ಬಡ್ಡಿಗೆ ತೆರಿಗೆ ಪಾವತಿಸಬೇಕು ಎಂದು ಹೈಕೋರ್ಟ್ ಪೂರ್ಣಪೀಠ ಅಭಿಪ್ರಾಯಪಟ್ಟಿದೆ.
ಈ ಕುರಿತಂತೆ ನ್ಯಾಯಮೂರ್ತಿಗಳಾದ ವಿನೀತ್ ಕೊಠಾರಿ, ಎ.ಎಸ್.ಬೋಪಣ್ಣ ಹಾಗೂ ಬಿ.ವೀರಪ್ಪಅವರಿದ್ದ ಮೂವರು ಸದಸ್ಯರ ನ್ಯಾಯಪೀಠ ಆದೇಶಿಸಿದೆ.
ಹ್ಯೂಲೆಟ್ ಆ್ಯಂಡ್ ಪ್ಯಕಾರ್ಡ್ ಗ್ಲೋಬಲ್ ಸಾಫ್ಟ್‌ವೇರ್ ಕಂಪೆನಿ ತನ್ನ ಆಮದು ವ್ಯವಹಾರ ಹಾಗೂ ನಿಗದಿತ ಠೇವಣಿಗಳ ಮೇಲೆ ಗಳಿಸಿದ ಬಡ್ಡಿಗೆ ತೆರಿಗೆ ಪಾವತಿಸುವ ಕುರಿತು ತಕರಾರು ತೆಗೆದಿತ್ತು. ಆದಾಯ ತೆರಿಗೆ ಕಾಯ್ದೆಯ ಕಲಂ 10ಎ ಪ್ರಕಾರ ತೆರಿಗೆ ಪಾವತಿಸುವ ಅವಶ್ಯಕತೆ ಇಲ್ಲ ಎಂದು ಪ್ರತಿಪಾದಿಸಿತ್ತು.
ಈ ಕುರಿತಂತೆ ಹೈಕೋರ್ಟ್ ಎರಡು ವಿಭಾಗೀಯ ಪೀಠಗಳು ಭಿನ್ನ ಆದೇಶ ನೀಡಿದ್ದವು. ಹೀಗಾಗಿ ಈ ಪ್ರಕರಣವನ್ನು ಪೂರ್ಣಪೀಠಕ್ಕೆ ಒಪ್ಪಿಸಲಾಗಿತ್ತು.