×
Ad

​ಐಪಿಎಸ್ ಅಧಿಕಾರಿಗಳ ವರ್ಗಾವಣೆ

Update: 2017-10-31 21:14 IST

ಬೆಂಗಳೂರು, ಅ.31: ರಾಜ್ಯ ಸರಕಾರವು ಏಳು ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಮಂಗಳವಾರ ಆದೇಶ ಹೊರಡಿಸಿದೆ.

ಎಚ್.ಸಿ.ಕಿಶೋರ್‌ಚಂದ್ರ-ರಾಜ್ಯ ಪೊಲೀಸ್ ವಸತಿ ನಿಗಮದ ಡಿಜಿಪಿ, ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ, ಎಂ.ಎನ್.ರೆಡ್ಡಿ-ಗೃಹ ರಕ್ಷಣ ದಳದ ಡಿಜಿಪಿ ಹಾಗೂ ಕಮಾಂಡೆಂಟ್ ಜನರಲ್, ನಾಗರಿಕ ರಕ್ಷಣೆ ಹಾಗೂ ಅಗ್ನಿಶಾಮಕ ದಳದ ನಿರ್ದೇಶಕ ಪ್ರವೀಣ್‌ಸೂದ್-ಆಂತರಿಕ ಸುರಕ್ಷತೆ ವಿಭಾಗದ ಡಿಜಿಪಿ, ಅಲೋಕ್ ಮೋಹನ್-ಕಮ್ಯುನಿಕೇಷನ್, ಲಾಜಿಸ್ಟಿಕ್ಸ್ ಮತ್ತು ಮಾಡ್ರನೈಝೇಷನ್ ಎಡಿಜಿಪಿ, ಸಂಜಯ್ ಸಹಾಯ್-ರಾಜ್ಯ ಲೋಕಾಯುಕ್ತ ಎಡಿಜಿಪಿ, ಕಮಲ್‌ಪಂತ್-ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ಹಾಗೂ ಡಾ.ಎಸ್.ಪರಶಿವಮೂರ್ತಿ-ಆಡಳಿತ ವಿಭಾಗದ ಎಡಿಜಿಪಿಯನ್ನಾಗಿ ವರ್ಗಾವಣೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News