ಕಳವು ಪ್ರಕರಣ: ಆರೋಪಿಯ ಬಂಧನ
Update: 2017-11-03 20:42 IST
ಬೆಂಗಳೂರು, ನ.3: ಕಾರಿನಲ್ಲಿಟ್ಟಿದ್ದ ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡುತ್ತಿದ್ದ ಆರೋಪಿಯೊಬ್ಬನನ್ನು ಇಲ್ಲಿನ ಸುಬ್ರಮಣ್ಯ ನಗರ ಪೊಲೀಸರು ಬಂಧಿಸಿದ್ದಾರೆ.
ಕೆಂಗೇರಿ ಉಪನಗರ ಗಾಂಧಿನಗರದ ಚಂದ್ರಶೇಖರ್ ಯಾನೆ ಚಂದು(29) ಬಂಧಿತ ಆರೋಪಿ ಎಂದು ಪೊಲೀಸರು ಗುರುತಿಸಿದ್ದಾರೆ.
ಬಂಧಿತನಿಂದ 5 ಲಕ್ಷ ರೂ. ಮೌಲ್ಯದ 32 ಗ್ರಾಂ ಚಿನ್ನದ ಸರ, ವಜ್ರದ ಪೆಂಡೆಂಟ್, ಹ್ಯಾಂಗಿಂಗ್ಸ್, ಒಂದು ಜೊತೆ ಓಲೆಗಳು, 2 ಗಡಿಯಾರಗಳು, ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎನ್ನಲಾಗಿದೆ.
ರಾಜಾಜಿನಗರದ ಫಿನಿಕ್ಸ್ ಅಪಾರ್ಟ್‌ಮೆಂಟ್ಸ್‌ಗೆ ಮದುವೆಯ ಮೆಹಂದಿ ಕಾರ್ಯಕ್ರಮಕ್ಕೆ ಬಂದಿದ್ದವರು ಹೊರಗೆ ನಿಲ್ಲಿಸಿದ್ದ ಕಾರಿನ ಗಾಜು ಒಡೆದು ಆರೋಪಿಯು ಕಳ್ಳತನ ಮಾಡಿದ್ದನು.
ಪ್ರಕರಣ ದಾಖಲಿಸಿಕೊಂಡ ರಾಜಾಜಿನಗರದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ ಎಂದು ಡಿಸಿಪಿ ಚೇತನ್ ಸಿಂಗ್ ತಿಳಿಸಿದ್ದಾರೆ.