ಕನ್ನಡ ಲಿಪಿಯ ಸೌಂದರ್ಯ ಹೆಚ್ಚಿಸಿದ ವೆವಿಧ್ಯಮಯ ಫಾಂಟ್‌ಗಳ ಕಥೆ

Update: 2017-11-04 12:29 GMT

ಕಂಪ್ಯೂಟರ್ ಪರದೆಯಲ್ಲಿ ಕನ್ನಡದ ಲಿಪಿಗಳನ್ನು ದೃಶ್ಯ ರೂಪದಲ್ಲಿ ಮೂಡಿಸುವುದೇ ಈ ಫಾಂಟ್‌ಗಳ ಕೆಲಸ. ಇವುಗಳನ್ನು ಬಳಸಿಕೊಂಡೇ ಮುದ್ರಣವನ್ನೂ ನಿರ್ವಹಿಸಲಾಗು ತ್ತದೆ. ಅಗತ್ಯವಿರುವ ಎಲ್ಲಾ ಮೂಲಾಕ್ಷರಗಳು, ಒತ್ತಕ್ಷರಗಳು ಮತ್ತು ಗುಣಿತಾಕ್ಷರಗಳನ್ನು ಸಂಯೋಜಿಸಿ ಕನ್ನಡ ಪಠ್ಯವನ್ನು ರೂಪಿ ಸಲು ಈ ಫಾಂಟ್‌ಗಳು ಅಗತ್ಯ. ಒಂದು ಭಾಷಾಲಿಪಿಯ ಅಂಕಿಗಳು, ಅಕ್ಷರಗಳು ಮತ್ತು ಬರವಣಿಗೆ ಚಿಹ್ನೆಗಳ ಚಾಕ್ಷುಕ ರೂಪದ ಚಿತ್ರಾತ್ಮಕ ವಿನ್ಯಾಸವನ್ನು ‘ಫಾಂಟ್ ಸೆಟ್’ ಎನ್ನಲಾಗಿದೆ. ಇದನ್ನೇ ಇಂಗ್ಲಿಷ್‌ನಲ್ಲಿ ‘ಕ್ಯಾರೆಕ್ಟರ್ ಗ್ರಾಫಿಕ್ಸ್ ಡಿಸೈನ್’ ಎನ್ನಲಾಗಿದೆ. ಫಾಂಟ್ ಗಳಲ್ಲಿ ಅಕ್ಷರಗಳ ಅಥವಾ ಅಕ್ಷರ ಭಾಗಗಳ ಗಾತ್ರ, ವಿನ್ಯಾಸ, ತೆರಪುಗಳು ಇತ್ಯಾದಿ ಗುಣಧರ್ಮಗಳನ್ನು ನಿರ್ದಿಷ್ಟವಾಗಿ ಅಳವ ಡಿಸಲಾಗಿರುತ್ತದೆ. ಆಲಂಕಾರಿಕ ಪಠ್ಯವನ್ನು ಮೂಡಿಸಲು ಈ ಬೇರೆ ಬೇರೆ ಫಾಂಟ್‌ಗಳು ಬೇರೆ ಬೇರೆ ಫಾಂಟ್‌ಫೇಸ್ ಅಂದರೆ, ಅಕ್ಷರ ರೂಪಗಳನ್ನು ಹೊಂದಿರುತ್ತವೆ. ಕನ್ನಡದಲ್ಲಿ ಫಾಂಟ್‌ನ್ನು ‘ಅಕ್ಷರಶೈಲಿ’ ಎಂದು ಕರೆಯಲಾಗಿದೆ. ಡಾಸ್ ಒ.ಎಸ್ (ಆಪರೇ ಟಿಂಗ್ ಸಿಸ್ಟಂ) ಕಾಲಘಟ್ಟದಲ್ಲಿ ಬಿಟ್‌ಮ್ಯಾಪ್ ಫಾಂಟ್‌ಗಳು ಬಳಕೆಯಲ್ಲಿದ್ದರೆ, ವಿಂಡೋಸ್ ಕಾರ್ಯಾಚರಣೆ ವ್ಯವಸ್ಥೆಯಲ್ಲಿ ಟ್ರೂಟೈಪ್ ಫಾಂಟ್‌ಗಳು ಬಳಕೆಯಲ್ಲಿವೆ. ಅಂತರ್ಜಾಲದಲ್ಲಿ ಬೇರೆ ಬೇರೆ ಕಾರ್ಯಾಚರಣೆ ವ್ಯವಸ್ಥೆ ಬಳಸಿ ಜಾಲತಾಣ ವೀಕ್ಷಣೆ ಗಾಗಿ ಡೈನಮಿಕ್ ಫಾಂಟ್‌ಗಳು ಬಳಕೆಗೆ ಬಂದು ಇದೀಗ ಹಿನ್ನೆಲೆಗೆ ಸರಿದುಹೋಗಿವೆ. ಆಧುನಿಕ ವಿಂಡೋಸ್ ಆವೃತ್ತಿಗಳಲ್ಲಿ ಯುನಿ ಕೋಡ್ ಎನ್‌ಕೋಡಿಂಗ್ ಪಠ್ಯಗಳಿಗಾಗಿ ಈಗ ಓಪನ್‌ಟೈಪ್ ಫಾಂಟ್‌ಗಳು ಆವಿಷ್ಕಾರಗೊಂಡು ಬಳಕೆಗೆ ಬಂದಿವೆ. ಬಿಟ್‌ಮ್ಯಾಪ್ ಫಾಂಟ್‌ಗಳು:

ಡಾಸ್ ಒ.ಎಸ್. ಇದ್ದಾಗಿನ ಕನ್ನಡದ ತಂತ್ರಾಂಶಗಳಲ್ಲಿ ಬಿಟ್‌ಮ್ಯಾಪ್ ಫಾಂಟ್‌ಗಳನ್ನು ಬಳಸಲಾಗುತ್ತಿತ್ತು. ಅದು, ಅಂದಿನ ಫಾಂಟ್ ತಂತ್ರಜ್ಞಾನವಾಗಿತ್ತು. ನಿಗದಿತ ವಿನ್ಯಾಸದಲ್ಲಿ ಚುಕ್ಕೆಗಳ ರೂಪದಲ್ಲಿ ರಚನೆಯಾದ ಅಕ್ಷರವಿನ್ಯಾಸವನ್ನು ಬಿಟ್‌ಮ್ಯಾಪ್ ಫಾಂಟ್ ಎನ್ನಲಾಗಿದೆ. ಗಾತ್ರ ಮತ್ತು ಇತರ ಗುಣಧರ್ಮಗಳನ್ನು ಬದಲಾಯಿಸಲು ಸಾಧ್ಯ ವಿಲ್ಲವಾದ ಕಾರಣ ಪರದೆಯಲ್ಲಿ ಕಾಣುವಂತೆಯೇ ಮುದ್ರಣವೂ ಸಹ ಇರುತ್ತಿತ್ತು. ಹೀಗಾಗಿ, ಇದನ್ನು ಸ್ಕ್ರೀನ್ ಫಾಂಟ್ ಎಂದೂ ಕರೆಯಲಾಗುತ್ತಿತ್ತು. ಒಂದೇ ಗಾತ್ರದಲ್ಲಿ ಪ್ರದರ್ಶನವಾಗುವ ಪಠ್ಯವನ್ನು ವಿವಿಧ ಗಾತ್ರಗಳಲ್ಲಿ ಮುದ್ರಿಸಲು, ಪೋಸ್ಟ್‌ಸ್ಕ್ರಿಪ್ಟ್ ಫಾಂಟ್‌ನ್ನು ಬಳಸಲಾಗುತ್ತಿತ್ತು. ಕನ್ನಡದ ‘ಸೇಡಿಯಾಪು’ ಮತ್ತು ‘ಶಬ್ದರತ್ನ’ ಕನ್ನಡ ಎಡಿಟರ್‌ಗಳಲ್ಲಿ ಈ ರೀತಿಯ ಫಾಂಟ್‌ಗಳನ್ನೇ ಬಳಸಲಾಗಿತ್ತು. ಸೇಡಿಯಾಪು ಎಡಿಟರ್‌ಗೆ ಪೋಸ್ಟ್‌ಸ್ಕ್ರಿಪ್ಟ್ ಫಾಂಟ್ ಬೆಂಬಲ ಇರಲಿಲ್ಲ. ಆದರೆ, ‘ಶಬ್ದರತ್ನ ಸೂಪರ್’ ಎಂಬ ಹೆಸರಿನ ಆವೃತ್ತಿಗೆ ಈ ಪೋಸ್ಟ್‌ಸ್ಕ್ರಿಪ್ಟ್ ಫಾಂಟ್ ಬೆಂಬಲ ಇತ್ತು.

ಪೋಸ್ಟ್‌ಸ್ಕ್ರಿಪ್ಟ್ ಫಾಂಟ್‌ಗಳು:ಪೋಸ್ಟ್‌ಸ್ಕ್ರಿಪ್ಟ್ ಡಿಸ್ಕ್ರಿಪ್‌ಷನ್ ಲಾಂಗ್ವೇಜ್‌ನ್ನು ಬಳಸಿ ಮುದ್ರಿಸಬೇಕಾದ ಲಿಪಿಯ ಗುಣಧರ್ಮ ಗಳನ್ನು ವ್ಯಾಖ್ಯಾನಿಸುವ ಮೂಲಕ ಪರದೆಯಲ್ಲಿನ ಬಿಟ್‌ಮ್ಯಾಪ್ ಫಾಂಟ್‌ನ್ನು ವಿವಿಧ ಗಾತ್ರದ, ನಯವಾದ ರೂಪದಲ್ಲಿ ಪ್ರಿಂಟರ್ ಬಳಸಿ ಮುದ್ರಿಸಲು ಪೋಸ್ಟ್‌ಸ್ಕ್ರಿಪ್ಟ್ ಫಾಂಟ್ ತಂತ್ರಜ್ಞಾನ ಆವಿಷ್ಕಾರ ಗೊಂಡಿತು. ಪೋಸ್ಟ್‌ಸ್ಕ್ರಿಪ್ಟ್ ತಂತ್ರಜ್ಞಾನಕ್ಕಾಗಿ ಪ್ರತ್ಯೇಕ ಪ್ರಿಂಟರ್‌ಗಳನ್ನು ಸಿದ್ಧಪಡಿಸಲಾಯಿತು. ಮುಖ್ಯವಾಗಿ ಡಿ.ಟಿ.ಪಿ. ಉದ್ದೇಶ ಗಳಿಗೆ ಈ ತಂತ್ರಜ್ಞಾನವು ಉಪಯುಕ್ತವಾಗಿತ್ತು. ಪೋಸ್ಟ್‌ಸ್ಕ್ರಿಪ್ಟ್ ಪ್ರಿಂಟರ್ ಪರದೆಯಲ್ಲಿನ ಫಾಂಟನ್ನು ಮರು ವಿನ್ಯಾಸಗೊಳಿಸಿ ಮುದ್ರಿಸುತ್ತದೆ. ಕಂಪ್ಯೂಟರ್‌ನಲ್ಲಾಗಲಿ ಅಥವಾ ಪ್ರಿಂಟರ್‌ಗಾಗಲಿ ಪೋಸ್ಟ್‌ಸ್ಕ್ರಿಪ್ಟ್ ಫಾಂಟ್‌ಗಳು ಅಳವಡಿಕೆಯಾಗಿಲ್ಲದ ಸಂದರ್ಭ ದಲ್ಲಿ ಪರದೆಯಲ್ಲಿರುವ ಬಿಟ್‌ಮ್ಯಾಪ್ ಫಾಂಟನ್ನೇ ಅದೇ ಗಾತ್ರದಲ್ಲಿ ಮುದ್ರಿಸಿ ನೀಡುತ್ತದೆ. ಕನ್ನಡದ ಪಠ್ಯವು ಹೇಗೆ ನಯ ವಾಗಿ, ಸುಂದರವಾಗಿ ಮೂಡುತ್ತದೆ ಎಂಬುದು ಈ ಪೋಸ್ಟ್ ಸ್ಕ್ರಿಪ್ಟ್ ಫಾಂಟ್‌ಗಳ ಗುಣಧರ್ಮಗಳನ್ನು ತಾಂತ್ರಿಕವಾಗಿ ಎಷ್ಟು ಚೆನ್ನಾಗಿ ವ್ಯಾಖ್ಯಾನಿಸಲಾಗಿದೆ ಎಂಬುದನ್ನು ಅವಲಂಬಿಸಿದೆ.

ಟ್ರೂಟೈಪ್ ಫಾಂಟ್‌ಗಳು: ವಿಂಡೋಸ್ ಕಾರ್ಯಾಚರಣೆ ವ್ಯವ ಸ್ಥೆಯ ಆರಂಭಿಕ ಕಾಲದಲ್ಲಿ ‘ಅಡೋಬ್ ಟೈಪ್ ಮ್ಯಾನೇಜರ್’ ನ್ನು ಬಳಸಿ ಈ ಬಿಟ್‌ಮ್ಯಾಪ್ ಫಾಂಟ್‌ಗಳನ್ನು ಪಠ್ಯವನ್ನಾಗಿ ರೆಂಡರಿಂಗ್ ಮಾಡುವ ತಂತ್ರಜ್ಞಾನದ ಆವಿಷ್ಕಾರವಾಯಿತು. ಈ ತಂತ್ರಜ್ಞಾನದ ಬಳಕೆಯಿಂದ ಬೇರೆ ಬೇರೆ ಗಾತ್ರದ ಬಿಟ್‌ಮ್ಯಾಪ್ ಫಾಂಟ್‌ಗಳನ್ನು ಬಳಸುವ ಅಗತ್ಯ ಇಲ್ಲವಾಯಿತು. ಪೋಸ್ಟ್‌ಸ್ಕ್ರಿಪ್ಟ್ ಫಾಂಟ್‌ಗಳ ಬಳಕೆ ಬದಲಾಗಿ ಬಿಟ್‌ಮ್ಯಾಪ್ ಫಾಂಟ್‌ಗಳನ್ನು ಅಗತ್ಯವಿದ್ದ ಗಾತ್ರದ ಸುಂದರ ಅಕ್ಷರಗಳಾಗಿ ರೆಂಡರ್ ಮಾಡುವ ತಂತ್ರಜ್ಞಾನದಿಂದ ಮುದ್ರಣ ಕ್ಷೇತ್ರಕ್ಕೆ ಬಹಳ ಅನುಕೂಲವಾಯಿತು. ಈ ರೀತಿಯ ಫಾಂಟ್ ತಂತ್ರಜ್ಞಾನ ಆವಿಷ್ಕಾ ರಗೊಂಡ ಕಾರಣ ವಿಂಡೋಸ್‌ನ ಯಾವುದೇ ಅಪ್ಲಿಕೇಷನ್‌ನಲ್ಲಿ (ಆನ್ವಯಿಕದಲ್ಲಿ) ಕನ್ನಡದ ಫಾಂಟನ್ನು ಅಳವಡಿಸುವ ಮೂಲಕ ಕನ್ನಡ ಭಾಷೆಯನ್ನು ಬಳಸುವ ಸೌಲಭ್ಯಗಳು ಮತ್ತು ಸಾಧ್ಯತೆಗಳು ಹೆಚ್ಚಾದವು. ಈ ರೀತಿ ಹೊರಗಿನಿಂದ ಚಿತ್ರರೂಪೀ ಅಕ್ಷರಗಳ ಭಾಗಗಳನ್ನು ಸಂಯೋಜಿಸಿ ಪ್ರದರ್ಶನ ಮೂಡಿಸುವ ಫಾಂಟ್ ತಂತ್ರಜ್ಞಾನವು ಆವಿಷ್ಕಾರಗೊಂಡ ಕಾರಣ ಕಂಪ್ಯೂಟರ್‌ನಲ್ಲಿ ಕನ್ನಡದ ಬಳಕೆ ವ್ಯಾಪಕವಾಯಿತು. ಟ್ರೂಟೈಪ್ ಫಾಂಟ್ ತಂತ್ರಜ್ಞಾನವನ್ನು ‘ಸ್ಕೇಲಬಲ್ ಫಾಂಟ್ಸ್ ಟೆಕ್ನಾಲಜಿ’ ಎಂದೂ ಕರೆಯಲಾಗಿದೆ. ಟ್ರೂಟೈಪ್ ಫಾಂಟ್‌ಗಳನ್ನು ಅಗತ್ಯಕ್ಕೆ ತಕ್ಕಂತೆ ಗಾತ್ರವನ್ನು ಹೆಚ್ಚಿಸಿಕೊಳ್ಳಬಹುದು. ಅಕ್ಷರ ಭಾಗದ ಪೂರ್ವ ವ್ಯಾಖ್ಯಾನಕ್ಕೆ ತಕ್ಕಂತೆ ಪಠ್ಯವನ್ನು ನೇರವಾಗಿ ಈ ಫಾಂಟ್‌ಗಳುಮೂಡಿಸುತ್ತವೆ. ಪರದೆಯಲ್ಲಿ ಹೇಗೆ ಪಠ್ಯವನ್ನು ನೋಡುತ್ತೇ ವೆಯೋ ಹಾಗೆಯೇ ಅವುಗಳನ್ನು ಯಥಾವತ್ತು ಮುದ್ರಿಸಿಕೊಳ್ಳುವಸೌಲಭ್ಯ ಈ ಟ್ರೂಟೈಪ್ ಫಾಂಟ್ ತಂತ್ರಜ್ಞಾನದ ಹೆಗ್ಗಳಿಕೆಯಾ ಗಿದೆ. ಆದ್ದರಿಂದ, ಕನ್ನಡದ ಪಠ್ಯವನ್ನು ಪರದೆಯಲ್ಲಿ ಮತ್ತು ಮುದ್ರ ಣದಲ್ಲಿ ಸುಂದರವಾದ, ನಯವಾದ ಪಠ್ಯಗಳನ್ನು ಪಡೆಯಲು ಸಾಧ್ಯವಾಯಿತು. ಕನ್ನಡದ ಉಚಿತ ಲಿಪಿ ತಂತ್ರಾಂಶಗಳಾದ ನುಡಿ, ಬರಹ, ಕುವೆಂಪು ತಂತ್ರಾಂಶಗಳಷ್ಟೇ ಅಲ್ಲದೆ, ಖಾಸಗಿ ತಂತ್ರಾಂಶತಯಾರಕರ ಆಕೃತಿ, ಶ್ರೀಲಿಪಿ, ಪ್ರಕಾಶಕ್, ಐಎಸ್‌ಎಂ, ವಿನ್‌ಕೀ ಇತ್ಯಾದಿಗಳು ಈ ಟ್ರೂಟೈಪ್ ಫಾಂಟ್‌ಗಳನ್ನು ಒದಗಿಸಿವೆ. ಈ ತಂತ್ರಜ್ಞಾನದಲ್ಲಿ ಗ್ಲಿಫ್‌ಗಳ ಸಂಖ್ಯಾಮಿತಿ ಇರುವ ಕಾರಣ ದಿಂದಾಗಿ, ಕನ್ನಡ ಅಕ್ಷರ ಭಾಗಗಳ ಒಂದು ಸೆಟ್‌ನ್ನು ನಿರ್ಮಿಸಿ ಕೊಂಡು, ಅವುಗಳನ್ನು ಸಂಯೋಜಿಸುವ ಮೂಲಕ ಪೂರ್ಣಾಕ್ಷರಗ ಳನ್ನು ಮೂಡಿಸುವ ಬಳಸುವ ಮಾರ್ಗವು ಕನ್ನಡಕ್ಕೆ ಮತ್ತು ಇತರ ಭಾರತೀಯ ಭಾಷೆಗಳಿಗೆ ಅನಿವಾರ್ಯವಾಗಿತ್ತು. ಡೈನಮಿಕ್ ಫಾಂಟ್‌ಗಳು: ಟ್ರೂಟೈಪ್ ಫಾಂಟ್‌ಗಳು ಎಲ್ಲಾ ಒ.ಎಸ್.ಗಳಲ್ಲಿ ಬಳಸಲಾಗುವುದಿಲ್ಲ. ಡೈನಮಿಕ್ ಫಾಂಟ್‌ಗಳನ್ನುಬಳಸಿ ಬೇರೆ ಬೇರೆ ಕಾರ್ಯಾಚರಣೆ ವ್ಯವಸ್ಥೆ ಇರುವ ಕಂಪ್ಯೂಟ ರ್‌ಗಳಲ್ಲಿ ಅಂತರ್ಜಾಲದ ತಾಣಪುಟಗಳನ್ನು ವೀಕ್ಷಿಸಲು ಸಾಧ್ಯವಿದೆ. ಈ ಹೊಸ ಡೈನಮಿಕ್ ಫಾಂಟ್ ತಂತ್ರಜ್ಞಾನದಲ್ಲಿ ವೆಬ್ ಬ್ರೌಸರ್ ತಂತ್ರಾಂಶವು ಮೂಲ ಜಾಲತಾಣದಿಂದ ಅಕ್ಷರಭಾ ಗಗಳ ಚೌಕಟ್ಟನ್ನು ಸೆಳೆದುಕೊಂಡು ಫಾಂಟನ್ನು ತಾನೇ ನಿರ್ಮಿಸಿ ಕೊಳ್ಳುತ್ತದೆ. ಜಾಲತಾಣ ಪುಟವು ವೀಕ್ಷಕನ ಕಂಪ್ಯೂಟರ್‌ಗೆ ಡೌನ್‌ಲೋಡ್ ಆಗುವ ಕಾಲದಲ್ಲಿಯೇ ಈ ಫಾಂಟ್ ತಯಾ ರಿಕೆಯು ಸಂಭವಿಸುತ್ತದೆ. ಇದರಿಂದಾಗಿ, ಫಾಂಟ್ ಸಮಸ್ಯೆಗಳ ಕಾರಣದಿಂದಾಗಿ, ಜಾಲತಾಣ ಪುಟಗಳನ್ನು ವೀಕ್ಷಿಸುವಲ್ಲಿನ ತೊಡಕುಗಳು ಇಲ್ಲವಾಗುತ್ತದೆ. ಮೊದಲಿಗೆ ಕನ್ನಡದಲ್ಲಿ ‘ವಿಶ್ವ ಕನ್ನಡ’ ಅಂತರ್ಜಾಲ ತಾಣವು ಈ ತಂತ್ರಾಂಶವನ್ನು ಬಳಸಿತು. ಎಚ್‌ಟಿಎಂಎಲ್ ವಿನ್ಯಾಸವನ್ನು ಬಳಸಿ ಜಾಲಪುಟಗಳನ್ನು (ವೆಬ್‌ಪೇಜ್) ತಯಾರಿಸುವಾಗ ಅವುಗಳಲ್ಲಿ ಡೈನಮಿಕ್ ಫಾಂಟ್‌ಗಳ ಸೌಲಭ್ಯವನ್ನು ಅಳವಡಿಸಲು ಸಾಧನೋಪಕರಣಗಳು ಅಂತರ್ಜಾಲದಲ್ಲಿಯೇ ಉಚಿತವಾಗಿ ಲಭ್ಯ ಇವೆ.

ಓಪನ್‌ಟೈಪ್ ಫಾಂಟ್‌ಗಳು:ಓಪನ್‌ಟೈಪ್ ಫಾಂಟ್ ತಂತ್ರ ಜ್ಞಾನದಲ್ಲಿ ಹೆಚ್ಚಿನ ಸಂಖ್ಯೆಯ ಅಕ್ಷರಭಾಗಗಳಿಗೆ (ಗ್ಲಿಫ್) ಸ್ಥಾನವನ್ನು ಒದಗಿಸಲಾಗಿದೆ. ಹಿಂದೆ ಇದ್ದ ಗ್ಲಿಫ್‌ಗಳ ಸಂಖ್ಯಾಮಿತಿ ಇದರಲ್ಲಿ ಇಲ್ಲ. ಯುನಿಕೋಡ್ ಶಿಷ್ಟತೆ ಅಳವಡಿಸಲು ಮತ್ತು ಜಗತ್ತಿನ ಎಲ್ಲಾ ಭಾಷೆಗಳ ಲಿಪಿಗೆ ಒಂದೇ ಫಾಂಟ್‌ನಲ್ಲಿ ಸ್ಥಳಾವಕಾಶ ಕಲ್ಪಿಸಲು ಈ ಹೊಸ ತಂತ್ರಜ್ಞಾನವನ್ನು ಆವಿಷ್ಕರಿಸಲಾಗಿದೆ. ಓಪನ್ ಟೈಪ್ ಫಾಂಟ್ ತಂತ್ರಜ್ಞಾನವು ಟ್ರೂಟೈಪ್ ಫಾಂಟ್ ತಂತ್ರಜ್ಞಾನದ ವಿಸ್ತೃತ ರೂಪವಾಗಿದೆ. ಮೈಕ್ರೋಸಾಫ್ಟ್ ಕಾರ್ಪೊರೇಷನ್ ತನ್ನ ‘ಏರಿಯಲ್ ಯುನಿಕೋಡ್ ಎಂಎಸ್’ ಎಂಬ ಹೆಸರಿನ ಓಪನ್ ಟೈಪ್ ಫಾಂಟ್‌ನಲ್ಲಿ ವಿಶ್ವದ ಬಹುತೇಕ ಎಲ್ಲ ಭಾಷೆಗಳ ಅಕ್ಷರಗಳನ್ನು ಅಳವಡಿಸಿ ನೀಡಿದೆ. ಆದರೆ, ಈ ಫಾಂಟ್ ಸುಲಭದಲ್ಲಿ ಎಲ್ಲರಿಗೂ ಲಭ್ಯವಾಗುವುದಿಲ್ಲ. ಈ ಫಾಂಟನ್ನು ಬಳಸಿ ಒಂದೇ ಡಾಕ್ಯು ಮೆಂಟ್‌ನಲ್ಲಿ ಒಂದಕ್ಕಿಂತ ಹೆಚ್ಚಿನ ಭಾಷೆಯ ಪಠ್ಯವನ್ನು ಟೈಪ್‌ಮಾಡಬಹುದು. ‘ತುಂಗಾ’ ಹೆಸರಿನ ಓಪನ್‌ಟೈಪ್ ಫಾಂಟ್ ಕನ್ನಡದ ಯುನಿಕೋಡ್ ಫಾಂಟ್ ಆಗಿದ್ದು, ವಿಂಡೋಸ್-ಎಕ್ಸ್‌ಪಿ ಆವೃತ್ತಿಯೊಂದಿಗೆ ಇದನ್ನು ನೀಡಲಾಗಿದೆ. ಕೆಲವು ಸಮಸ್ಯೆ ಗಳಿದ್ದ ಈ ಹಳೆಯ ಫಾಂಟ್‌ನ್ನು ಪರಿಷ್ಕರಿಸಿ ಹೊಸ ಆವೃತ್ತಿಯನ್ನು ((www.bhashaindia.com )) ಡೌನ್‌ಲೋಡ್ ಮಾಡಿಕೊಳ್ಳಲು ನೀಡಲಾಗಿದೆ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಭಾಷಾ ಅಭಿವೃದ್ಧಿ ಕೇಂದ್ರವು ಸಂಪಿಗೆ, ಕೇದಗೆ ಮತ್ತು ಮಲ್ಲಿಗೆ ಫಾಂಟುಗಳನ್ನು ಸಿದ್ಧಪಡಿಸಿದೆ. ಆದರೆ, ಬಳಕೆಯಲ್ಲಿ ಸಮಸ್ಯೆ ಗಳಿವೆ. ಕೇಂದ್ರ ಸರಕಾರದ ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾ ಲಯವು ಕನ್ನಡದ ತಂತ್ರಾಂಶ ಸಲಕರಣೆಗಳೊಂದಿಗೆ ನೀಡಿ ರುವ ಓಪನ್‌ಟೈಪ್ ಫಾಂಟ್‌ಗಳು ಸಮಸ್ಯಾತ್ಮಕವಾಗಿವೆ. ಕನ್ನಡದ ಲಿಪಿಸೌಂದರ್ಯದ ದೃಷ್ಟಿಯಿಂದಲೂ ಸಮರ್ಪಕವಾಗಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೂ ಸಹ ಹಲವು ಕನ್ನಡದ ಓಪನ್‌ಟೈಪ್ ಫಾಂಟುಗಳನ್ನು ನೀಡಿದೆ. ಮುಕ್ತತಂತ್ರಾಂಶ ಗುಂಪು ಸಿದ್ಧಪಡಿಸಿದ ‘ಗುಬ್ಬಿ’ ಮತ್ತು ‘ನವಿಲು’ ಫಾಂಟುಗಳು ಚೆನ್ನಾಗಿವೆ. ನುಡಿ-5ರಲ್ಲಿನ ಯುನಿಕೋಡ್ ಫಾಂಟುಗಳು ಉತ್ತಮವಾಗಿವೆ.

Writer - ಡಾ.ಎ. ಸತ್ಯನಾರಾಯಣ

contributor

Editor - ಡಾ.ಎ. ಸತ್ಯನಾರಾಯಣ

contributor

Similar News