ಜೆಡಿಎಸ್ ಅಧಿಕಾರಕ್ಕೆ ಬಂದ ಹತ್ತು ದಿನಗಳಲ್ಲಿ ಸಾಚಾರ್ ವರದಿ ಅನುಷ್ಠಾನ: ಕುಮಾರಸ್ವಾಮಿ
ಬೆಂಗಳೂರು, ನ.5: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದ ಕೇವಲ ಹತ್ತು ದಿನಗಳಲ್ಲಿ ಸಾಚಾರ್ ವರದಿ ಅನುಷ್ಠಾನಗೊಳಿಸಲಾಗುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ರವಿವಾರ ಬೆಂಗಳೂರಿನ ಸಅದಿಯ ವಿದ್ಯಾ ಸಂಸ್ಥೆಯ 15ನೆ ಸ್ಫಟಿಕ ಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮುಸಲ್ಮಾನರು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ವಾಗಿ ಹಿಂದುಳಿದಿದ್ದಾರೆ. ಈ ಸಂಬಂಧ ಕೇಂದ್ರ ಸರಕಾರಕ್ಕೆ ವರದಿ ನೀಡಿ, ಹದಿನೈದು ವರ್ಷಗಳು ಕಳೆದಿವೆ. ಆದರೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದರೆ, ಕೇವಲ ಹತ್ತು ದಿನಗಳಲ್ಲಿ ಸಾಚಾರ್ ವರದಿ ಜಾರಿಗೊಳಿಸಲಾಗುವುದು ಎಂದರು.
ಇತರೆ ಪಕ್ಷಗಳು ಮುಸಲ್ಮಾನರಿಗೆ ಭರವಸೆಗಳು ನೀಡುತ್ತಾರೆ ವಿನಃ, ಅದನ್ನು ಯಶಸ್ವಿಯಾಗಿ ಜಾರಿಗೊಳಿಸಲು ಮುಂದಾಗುವುದಿಲ್ಲ. ಆದರೆ, ಜೆಡಿಎಸ್ ಪಕ್ಷ ಹಾಗಾಲ್ಲ, ಎಲ್ಲ ಧರ್ಮೀಯರ ಅಭಿವೃದ್ಧಿ ಗೆ ದುಡಿಯಲಿದೆ ಎಂದು ಕುಮಾರ ಸ್ವಾಮಿ ಹೇಳಿದರು.