ಧೋನಿ ತಂಡದಲ್ಲಿ ತನ್ನ ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳಬೇಕು: ಸೆಹ್ವಾಗ್

Update: 2017-11-07 05:13 GMT

ಹೊಸದಿಲ್ಲಿ, ನ.7: ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ರಾಜ್‌ಕೋಟ್‌ನಲ್ಲಿ ನ್ಯೂಝಿಲೆಂಡ್ ವಿರುದ್ಧದ ಎರಡನೆ ಟ್ವೆಂಟಿ-20 ಪಂದ್ಯದಲ್ಲಿ ನೀಡಿರುವ ಪ್ರದರ್ಶನದ ಬಗ್ಗೆ ತಂಡದ ಮಾಜಿ ಆಟಗಾರರಿಂದ ಟೀಕೆ ವ್ಯಕ್ತವಾಗಿದ್ದು, ‘‘ ಧೋನಿ ತಂಡದಲ್ಲಿ ತನ್ನ ಜವಾಬ್ದಾರಿಯನ್ನು ಅರ್ಥ ಮಾಡಿಕೊಳ್ಳಬೇಕಿದೆ ’’ ಎಂದು ಟೀಮ್ ಇಂಡಿಯಾದ ಮಾಜಿ ಆರಂಭಿಕ ದಾಂಡಿಗ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.

197 ರನ್‌ಗಳ ಗೆಲುವಿನ ಸವಾಲು ಪಡೆದಿದ್ಧ ಭಾರತ 40ರನ್‌ಗಳ ಸೋಲು ಅನುಭವಿಸಿತ್ತು. ಧೋನಿ ಕ್ರೀಸ್‌ಗೆ ಆಗಮಿಸಿದಾಗ ಭಾರತ 4 ವಿಕೆಟ್ ನಷ್ಟದಲ್ಲಿ 41 ರನ್ ಗಳಿಸಿತ್ತು. ಧೋನಿ ನಿಧಾನಗತಿಯಲ್ಲಿ ಬ್ಯಾಟಿಂಗ್ ಪ್ರದರ್ಶಿಸಿ ತಂಡದ ಆಟಗಾರರನ್ನು ಇನ್ನಷ್ಟು ಒತ್ತಡಕ್ಕೆ ಸಿಲುಕಿಸಲು ನ್ಯೂಝಿಲೆಂಡ್‌ನ ಆಟಗಾರರಿಗೆ ಅವಕಾಶ ಮಾಡಿಕೊಟ್ಟಿದ್ದರು ಎಂದು ಸೆಹ್ವಾಗ್ ಹೇಳಿದ್ದಾರೆ.

ಕಠಿಣ ಸವಾಲನ್ನು ಬೆನ್ನಟ್ಟುವಾಗ ತಂಡವನ್ನು ಒತ್ತಡದಿಂದ ಪಾರು ಮಾಡಬೇಕಿತ್ತು. ಅವರು ಕ್ರೀಸ್‌ಗೆ ಆಗಮಿಸಿದ ಬಳಿಕ ಎದುರಿಸುವ ಪ್ರತಿಯೊಂದು ಎಸೆತದಲ್ಲೂ ರನ್ ಗಳಿಸುವ ಕಡೆಗೆ ಗಮನ ಹರಿಸಬೇಕು. ತಂಡದ ಆಡಳಿತ ಮಂಡಳಿಯು ಈ ವಿಚಾರವನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.

ಧೋನಿ 37 ಎಸೆತಗಳಲ್ಲಿ 49 ರನ್ ಗಳಿಸಿದ್ದರು. ಕೊಹ್ಲಿ ಅವರಂತೆ ಆಡಲಿಲ್ಲ.ಅವರು ವೇಗವಾಗಿ ರನ್ ಗಳಿಸಲು ಒತ್ತು ನೀಡಿದ್ದರು.

 ಧೋನಿ ಖಂಡಿತವಾಗಿಯೂ ಈ ಹೊತ್ತಿನಲ್ಲಿ ಟೀಮ್ ಇಂಡಿಯಾದಲ್ಲಿರಬೇಕು.ಅವರ ಸೇವೆ ತಂಡಕ್ಕೆ ಅಗತ್ಯ. ಸರಿಯಾದ ಸಮಯದಲ್ಲಿ ಅವರು ತಂಡದಿಂದ ದೂರ ಉಳಿಯಬೇಕು. ಯುವ ಕ್ರಿಕೆಟಿಗರಿಗೆ ದಾರಿಯನ್ನು ಬಂದ್ ಮಾಡಬಾರದು. ’’ ಎಂದು ಸ್ಫೋಟಕ ಬ್ಯಾಟ್ಸ್‌ಮನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News