×
Ad

ನ.8ರಂದು ಪರಿಶಿಷ್ಟ ಅಧ್ಯಾಪಕರ ಸಂಘದ ಕಚೇರಿ ಉದ್ಘಾಟನೆ

Update: 2017-11-07 18:04 IST

ಬೆಂಗಳೂರು, ನ.7: ಕರ್ನಾಟಕ ರಾಜ್ಯ ಪ್ರಥಮ ದರ್ಜೆ ಕಾಲೇಜು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಅಧ್ಯಾಪಕರ ಸಂಘದ ಕಚೇರಿಯ ಉದ್ಘಾಟನೆ ನ.8ರ ಬೆಳಗ್ಗೆ 11ಕ್ಕೆ ಇಲ್ಲಿನ ಸರಕಾರಿ ಕಲಾ ಕಾಲೇಜಿನ ಬಾಪೂಜಿ ಸಭಾಂಗಣದಲ್ಲಿ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ನೆರವೇರಿಸಲಿದ್ದಾರೆ.

ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮಿ, ಶಾಸಕ ಶಿವಣ್ಣ, ಪ್ರಜಾ ಪರಿವರ್ತನಾ ಪಕ್ಷದ ಅಧ್ಯಕ್ಷ ಬಿ.ಗೋಪಾಲ್, ಕೆಪಿಎಸ್ಸಿ ಸದಸ್ಯ ಡಾ. ಚಂದ್ರಕಾಂತ್ ಶಿವಕೇರಿ, ನಗರ ಪೊಲೀಸ್ ಆಯುಕ್ತ ಸುನೀಲ್‌ಕುಮಾರ್, ಡಿಸಿಪಿ ಡಾ.ಎಂ. ನಂಜುಂಡಸ್ವಾಮಿ, ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕ ಪ್ರೊ.ಎಂ.ಕೆ. ನಾಯಕ್, ಜಂಟಿ ನಿರ್ದೇಶಕ ಡಾ.ಆರ್.ಕೆ.ರಮೇಶ್ ಬಾಬು, ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ವೆಂಕಟಸಾಮಿರೆಡ್ಡಿ ಪಾಲ್ಗೊಳ್ಳಲಿದ್ದಾರೆ.

ಅಲ್ಲದೆ, ದಲಿತ ಮುಖಂಡರಾದ ಅಣ್ಣಯ್ಯ, ಲಕ್ಷ್ಮಿ ನಾರಾಯಣ ನಾಗವಾರ, ಮಾವಳ್ಳಿ ಶಂಕರ್, ಆರ್, ಮೋಹನ್ ರಾಜ್, ಹೆಬ್ಬಾಳ ವೆಂಕಟೇಶ್, ಬಾಲಗುರು ಮೂರ್ತಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದು, ಅಧ್ಯಕ್ಷತೆಯನ್ನು ಅಧ್ಯಾಪಕರ ಸಂಘದ ಅಧ್ಯಕ್ಷ ಡಾ.ಕೆ.ಕೃಷ್ಣಪ್ಪ ವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News