89,000 ರೂ. ಬೆಲೆಬಾಳುವ ಐಫೋನ್ ಟೆನ್ ಗೆ ತಗಲುವ ಉತ್ಪಾದನಾ ವೆಚ್ಚ ಎಷ್ಟು ಗೊತ್ತೇ?

Update: 2017-11-07 14:56 GMT

ಈಗಾಗಲೇ ಐಫೋನ್ ಟೆನ್ ಭಾರತೀಯ ಮಾರುಕಟ್ಟೆಗೆ ಕಾಲಿಟ್ಟಿದೆ. ಸೂಪರ್ ರೆಟಿನಾ ಎಡ್ಜ್ ಟು ಎಡ್ಜ್ 5.8 ಇಂಚು ಡಿಸ್‍ಪ್ಲೇ, ಫೇಸ್ ರೆಕಗ್ನಸೇಶನ್ ಫೀಚರ್, ಒಎಲ್‍ಇಡಿ ಡಿಸ್‍ಪ್ಲೇ, ಡಾಲ್ಬಿ ವಿಷನ್ ಹಾಗೂ ಎಚ್‍ಡಿಆರ್10 ಸಪೋರ್ಟ್, ಪಾಲಿಷ್ ಮಾಡಲ್ಪಟ್ಟ ಸ್ಟೀಲ್ ಬ್ಯಾಂಡ್ ಹಾಗೂ ಸ್ಮಾರ್ಟ್ ಗ್ಲಾಸ್ ಬಾಡಿ  ಐಫೋನ್ ಟೆನ್ ನ ವಿಶೇಷತೆಯಾಗಿದೆ.

ಐಫೋನ್ 8 ಐಫೋನ್ 7ನ ಅಪ್ ಡೇಟ್ ಆಗಿದ್ದರೆ ಐಫೋನ್ 7, 2014ರಲ್ಲಿ ಬಿಡುಗಡೆಯಾಗಿದ್ದ ಐಫೋನ್ 6 ಜೊತೆ ಸಾಮ್ಯತೆಯಿದ್ದು, ಅದರ ಅಪ್ ಡೇಟ್ ಆಗಿತ್ತು. ಆ್ಯಪಲ್ ನ ಅತೀ ದುಬಾರಿ ಫೋನ್ ಎಂದೇ ಪ್ರಸಿದ್ಧಿಯಾಗಿರುವ ಐಫೋನ್ ಟೆನ್ ನ ಬಿಡಿಭಾಗಗಳು ಐಫೋನ್ 8ಗಿಂತಲೂ 25 ಶೇ. ದುಬಾರಿಯಾಗಿದೆ ಎನ್ನಲಾಗಿದೆ. ಹೀಗಾಗಿ ಪ್ರತಿ ಐಫೋನ್ ಟೆನ್ ಮಾರಾಟವು ಐಫೋನ್ 8ಗಿಂತಲೂ ಹೆಚ್ಚು ಹಣವನ್ನು ಕಂಪೆನಿಗೆ ನೀಡುತ್ತದೆ.

ಇನ್ನೊಂದು ವಿಚಾರವೆಂದರೆ ಸುಮಾರು 89,000 ರೂ. ಬೆಲೆಬಾಳುವ ಐಫೋನ್ ಟೆನ್ ಗೆ ತಗಲುವ ವೆಚ್ಚ ಕೇವಲ 23,200 ರೂ. ಎಂದು ಟೆಕ್ ಇನ್ ಸೈಟ್ಸ್ ನ ವರದಿಯೊಂದು ತಿಳಿಸಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಲು ಆ್ಯಪಲ್ ನಿರಾಕರಿಸಿದೆ ಎನ್ನಲಾಗಿದೆ. ಒಂದು ಐಫೋನ್ ಟೆನ್ ಮಾರಾಟದ ಮೂಲಕ ಆ್ಯಪಲ್ ಸಂಸ್ಥೆ 64 ಪ್ರತಿಶತ ಲಾಭ ಗಳಿಸುತ್ತದೆ..!

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News