ರಸ್ತೆ ಗುಂಡು ಮುಚ್ಚಲು ವಿಫಲ: ಮೂವರು ಇಂಜಿನಿಯರ್‌ಗಳ ಅಮಾನತ್ತು
Update: 2017-11-07 20:13 IST
ಬೆಂಗಳೂರು, ನ. 7: ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ(ಬಿಬಿಎಂಪಿ) ವ್ಯಾಪ್ತಿಯ ರಸ್ತೆಗಳಲ್ಲಿನ ಗುಂಡಿ ಮುಚ್ಚುಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದ ಗಡುವು ಮುಗಿದಿದ್ದರೂ, ಅಸಮರ್ಪಕ ಕೆಲಸ ಮಾಡಿರುವುದು ಕಂಡು ಬಂದಿರುವ ಹಿನ್ನೆಲೆಯಲ್ಲಿ ಪಾಲಿಕೆಯ ಮೂರು ಮಂದಿ ಎಂಜಿನಿಯರ್‌ಗಳನ್ನು ಅಮಾನತ್ತು ಮಾಡಲಾಗಿದೆ.
ವಾರ್ಡ್ ನಂ.27 ರ ಸಹಾಯಕ ಎಂಜಿನಿಯರ್ ಮಲ್ಲಿನಾಥ ಮಲ್ಕಾಪುರ, ಸಿವಿ ರಾಮನ್ ನಗರ ವಿಭಾಗದ ಕಾರ್ಯಪಾಲಕ ಅಭಿಯಂತರ ಅಮೃತಕುಮಾರ್ ಸಾಲುಂಕಿ, ಶಿವಾಜಿನಗರ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸೈಫುದ್ಧೀನ್‌ರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತು ಮಾಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಆದೇಶ ಹೊರಡಿಸಿದ್ದಾರೆ.