ವರದಿ ನೀಡಲು ನಿರ್ಲಕ್ಷ್ಯ ತೋರಿದ ತಹಶೀಲ್ದಾರ್ ಅಮಾನತಿಗೆ ಹೈಕೋರ್ಟ್ ಸೂಚನೆ
ಬೆಂಗಳೂರು, ನ.7: ವ್ಯಕ್ತಿಯೊಬ್ಬರಿಗೆ ಬೆಂಗಳೂರು ಪೂರ್ವ ತಾಲೂಕಿನಲ್ಲಿ ಮಂಜೂರಾದ 2 ಎಕರೆ ಜಮೀನಿನ ವರದಿಯನ್ನು ನೀಡಲು ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಬೆಂಗಳೂರು ಪೂರ್ವ ತಾಲೂಕು ತಹಶೀಲ್ದಾರ್ ತೇಜಸ್‌ಕುಮಾರ್ ಅವರನ್ನು ಹೈಕೋರ್ಟ್ ಅಮಾನತುಗೊಳಿಸಿ 30 ದಿನದಲ್ಲಿ ವದಿ ಸಲ್ಲಿಸಲು ಜಿಲ್ಲಾಧಿಕಾರಿಗೆ ಸೂಚಿಸಿದೆ.
ಈ ಸಂಬಂಧ ವೆಂಕಟಗಿರಿಯಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಎನ್.ಸತ್ಯನಾರಾಯಣ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು.
2017ರ ಜೂನ್ 12ರಂದು ಮನವಿದಾರರಿಗೆ ಬೆಂಗಳೂರು ಪೂರ್ವ ತಾಲೂಕಿನ ಗುಂಟೂರು ಗ್ರಾಮದಲ್ಲಿ ಮಂಜೂರಾದ 2 ಎಕರೆ ಜಮೀನಿನ ಬಗ್ಗೆ ದೃಢಪಡಿಸಿಕೊಂಡು ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ಬೆಂಗಳೂರು ಪೂರ್ವ ತಾಲೂಕು ತಹಶೀಲ್ದಾರ್‌ಗೆ ಆದೇಶಿಸಿತ್ತು. ಆದರೆ, ತಹಶೀಲ್ದಾರ್ ಅವರು ವರದಿ ಸಲ್ಲಿಸಲು ನಿರ್ಲಕ್ಷ್ಯ ತೋರಿದ್ದರಿಂದ ನ್ಯಾಯಪೀಠವು ತಹಶೀಲ್ದಾರ್ ಅವರನ್ನು ಅಮಾನತುಗೊಳಿಸಿ 30 ದಿನದಲ್ಲಿ ಜಮೀನಿನ ಬಗ್ಗೆ ವರದಿ ಸಲ್ಲಿಸಲು ಬೆಂಗಳೂರು ಜಿಲ್ಲಾಧಿಕಾರಿಗೆ ಸೂಚಿಸಿದೆ.